ಕೊರೊನಾ ನಡುವೆ ಜನರಿಗೆ ಮತ್ತೊಂದು ಸಂಕಷ್ಟ!ಬ್ಲಾಕ್ ಫಂಗಸ್ ಸೋಂಕಿನ ಲಕ್ಷಣಗಳು!

0
642

ದೇಶದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರತಿದಿನ ಸರಿಸುಮಾರು 4.5ಲಕ್ಷಕ್ಕೂ ಅಧಿಕ ಜನರು ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.ಇನ್ನೂ ಕರೋನವನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಒಂದು ದೊಡ್ಡ ಸವಾಲು ಎಂಬಂತಾಗಿದೆ.ಇದರ ಮಧ್ಯೆ ಬ್ಲಾಕ್ ಫಂಗಸ್ ಎಂಬ ಹೊಸ ಸೋಂಕು ಜನರ ಮಧ್ಯೆ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

ಇನ್ನೂ ಈ ಬ್ಲಾಕ್ ಫಂಗಸ್ ಎನ್ನುವ ಕಾಯಿಲೆಯು ಮಧುಮೇಹ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.ಇನ್ನುಳಿದಂತೆ ಕೊರೊನಾ ರೋಗಿಗಳು ಇದರ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ
ಆದರೆ ಮಧುಮೇಹ ಕಾಯಿಲೆ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತಿ ಅವಶ್ಯಕ ಎಂದು ವೈದ್ಯರು ತಿಳಿಸಿದ್ದಾರೆ.

ತಜ್ಞ ವೈದ್ಯರ ಪ್ರಕಾರ ಬ್ಲಾಕ್ ಫಂಗಸ್ ಸೋಂಕಿನ ಲಕ್ಷಣಗಳೆಂದರೆ ತಲೆನೋವು, ಜ್ವರ, ಕಣ್ಣಿನ ಕೆಳಭಾಗದಲ್ಲಿ ನೋವು, ಮೂಗು ಕಟ್ಟುವುದು, ಉಸಿರಾಟದ ತೊಂದರೆ, ರಕ್ತಸಿಕ್ತ ವಾಂತಿ, ಬದಲಾದ ಮಾನಸಿಕ ಸ್ಥಿತಿ ಹಾಗೂ ದೃಷ್ಟಿದೋಷದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ರಾಜ್ಯದಲ್ಲಿ ಪ್ರಸ್ತುತ 2000 ಮ್ಯೂಕೋ ಮೈಕೊ ಸಿಸ್ ರೋಗಿ ಗಳಿರಬಹುದು.ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬ್ಲಾಗ್ ಫಂಗಸ್ ಸೋಂಕಿನ ಏರಿಕೆಯಾಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಕಳೆದ ವಾರ ಒಡಿಶಾ ರಾಜ್ಯದಲ್ಲಿ ಬ್ಲಾಕ್ ಫಂಗಸ್ ಪ್ರಕರಣವನ್ನು ವರದಿ ಮಾಡಿತ್ತು.ಒಡಿಶಾದ ಜಡ್ಜ್ ಪುರ್ ಜಿಲ್ಲೆಯ 71 ವರ್ಷದ ಕೊರೋನಾ ರೋಗಿಯಲ್ಲಿ ಈ ಸೋಂಕು ಕಂಡುಬಂದಿತ್ತು.ಮೂಲಗಳ ಪ್ರಕಾರ ಅವರು ಅನಿಯಂತ್ರಿತ ಮಧುಮೇಹ ಮತ್ತು ಧೂಮಪಾನವನ್ನು ಸೇವಿಸುತ್ತಿದ್ದರು ಎಂದು ತಿಳಿದುಬಂದಿದ್.

ಇನ್ನು ದೆಹಲಿ , ಗುಜರಾತ್ ಮತ್ತು ಇನ್ನಿತರ ಕೆಲವು ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಸೋಂಕು ಭಾರಿ ಭಯ ಮೂಡಿಸಿದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here