ದೇಹದಲ್ಲಿ ಆಮ್ಲಜನಕ ಕೊರತೆ ಉಂಟಾಗದಿರಲು ಹೀಗೆ ಮಾಡಿ!ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ!

Health & Fitness

ಇತ್ತೀಚೆಗೆ ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರಂಭವಾಗಿರುವ ಕಾರಣಕ್ಕೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಜೀವಂತವಾಗಿಡಲು ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಕೊರತೆ ಅಂದರೆ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ.

ಆದರೆ ನಾವು ಆರೋಗ್ಯವಂತರಾಗಿ ಸದಾಕಾಲ ಯಾವುದೇ ರೋಗ ಇಲ್ಲದೆ ಸದೃಢವಾಗಿರಲು ಹಾಗೂ ನಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳಲು
ಅಥವಾ ಹೆಚ್ಚಿಸಿಕೊಳ್ಳಲು ಕೆಲವು ಸಲಹೆಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..

ಸದ್ಯದ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯವನ್ನ ಎಷ್ಟೇ ಕಾಳಜಿಯಿಂದ ನೋಡಿಕೊಂಡರು ಸಹ ಅದು ಕಡಿಮೆಯೇ.ಸಣ್ಣ ಅಜಾಗರೂಕತೆಯೂ ನಮ್ಮ ಜೀವನವನ್ನೇ ಕಿತ್ತುಕೊಂಡು ಬಿಡುತ್ತದೆ
ಹೀಗಾಗಿ ಕಾಯಿಲೆ ಬಂದ ಮೇಲೆ ಪರಿತಪಿಸುವುದಕ್ಕಿಂತ ಮುಂಜಾಗೃತಾ ಕ್ರಮ ಹೆಚ್ಚು ಸೂಕ್ತ.

ಪ್ರಸ್ತುತ ದೇಹದಲ್ಲಿ ಆಮ್ಲಜನಕ ಮಟ್ಟ ಸರಿಯಾಗಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ ಇದಕ್ಕಾಗಿ ಇಲ್ಲಿ ತಿಳಿಸಲಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.

  • ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ.ಇದನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಅಡುಗೆ ರುಚಿ ಹೆಚ್ಚುವ ಜೊತೆಗೆ ನಿಮ್ಮ ದೇಹದ ಆಮ್ಲಜನಕ ಮಟ್ಟವೂ ಸುಧಾರಿಸಲಿದೆ.ಬೆಳ್ಳುಳ್ಳಿ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ನಿಂಬೆ ಹಣ್ಣು

ನಿಂಬೆಹಣ್ಣಿನ ವಿಶೇಷತೆ ಅಂದರೆ ಅದರಲ್ಲಿ ಅಡಗಿರುವ ಅಪಾರ ಪ್ರಮಾಣದ ವಿಟಮಿನ್ ಸಿ ಅಂಶ.
ವಿಟಮಿನ್ ಸಿ ಅಂಶ ಹೇರಳವಾಗಿರುವ ಯಾವುದೇ ಹಣ್ಣು ಅಥವಾ ತರಕಾರಿ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಸುಧಾರಿಸುವ ಕೆಲಸ ಮಾಡುತ್ತದೆ.

  • ಕಿವಿ ಹಣ್ಣು

ಕಿವಿ ಹಣ್ಣು ಕೂಡ ವಿಟಮಿನ್ ಸಿ ಕಾರಣದಿಂದಲೇ ಹೆಚ್ಚು ಉಪಯೋಗಕಾರಿಯಾಗಿದೆ.ಹೀಗಾಗಿ ಈ ಹಣ್ಣಿನ ಸೇವನೆ ಈ ಪರಿಸ್ಥಿತಿಯಲ್ಲಿ ತುಂಬಾನೇ ಮುಖ್ಯವಾಗಿದೆ.

  • ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಆಲ್ಕಲೀನ್ ಅಂಶ ಅತಿಯಾಗಿ ಇರುವುದರಿಂದ ದೇಹದಲ್ಲಿ ಆಮ್ಲಜನಕ ಮಟ್ಟ ಹೆಚ್ಚಲಿದೆ.

  • ಮೊಸರು

ಮೊಸರಿನಲ್ಲಿ ವಿಟಮಿನ್ , ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ.
ಈ ಮೊಸರಿನ ಸೇವನೆ ಕೂಡಾ ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಸುಧಾರಿಸಲಿದೆ.

ಧನ್ಯವಾದಗಳು.

Leave a Reply

Your email address will not be published.