ಸಾವನ್ನು ಗೆಲ್ಲುವ ಶಕ್ತಿ ಈ ಈ ಬಳ್ಳಿಯ ಔಷಧಿಯಲ್ಲಿದೆ ಅಮೃತಕ್ಕೆ ಸಮಾನ!

Health & Fitness

ಅಮೃತಬಳ್ಳಿ

ಅಮೃತಬಳ್ಳಿಯಹೆಸರಿನಲ್ಲಿಯೇ ಇರುವಂತೆ ಈ ಬಳ್ಳಿಯು ಅಮೃತಕ್ಕೆ ಸಮಾನವಾಗಿದೆ.ಅಮೃತಾ= ಮೃತ ಎಂದರೆ ಸಾವು ಮೃತಕ್ಕೆ ವಿರುದ್ಧಪದ ಅಮೃತ ಅಂದರೆ ಸಾವು ಬರದೆ ಇರುವಂಥದ್ದು.

ಇನ್ನೂ ಅಮೃತ ಬಳ್ಳಿಯನ್ನು ಬೆಳೆಯಲು ಯಾವುದೇ ರೀತಿಯ ಗೊಬ್ಬರ ಹಾಕುವ ಅಗತ್ಯವಿಲ್ಲ,1 ಚಿಕ್ಕ ತುಂಡು ಇದರ ಕಾಂಡ ಬಿದ್ದರೂ ಜೊತೆಗೆ ಸ್ವಲ್ಪ ನೀರು ಹಾಕಿದರೆ ಸಾಕು ಅದರಷ್ಟಕ್ಕೆ ಅದೇ ತಾನೇ ಬೆಳೆದು ಕೊಳ್ಳುತ್ತದೆ.ಇನ್ನೂ ಪ್ರತಿಯೊಬ್ಬರ ಮನೆಯಲ್ಲೂ ತುಳಸೀಗಿಡ ಹೇಗೆ ಇರುತ್ತದೆಯೋ ಅದೇ ರೀತಿ ಅಮೃತ ಬಳ್ಳಿಯ ಗಿಡವೂ ಸಹ ಇದ್ದರೆ ಬಹಳ ಒಳ್ಳೆಯದು.ಅಮೃತ ಬಳ್ಳಿಯನ್ನು ಜ್ವರ, ಕೆಮ್ಮು,ಶೀತ, ನೆಗಡಿ ಅಥವಾ ಇನ್ ಫೆಕ್ಷನ್ , ಟೈಫಾಯ್ಡ್ ಜ್ವರ ,ಇನ್ನೂ ಅನೇಕ ತರಹದ ಜ್ವರಕ್ಕೆ ಬಳಸಬಹುದಾಗಿದೆ.ಇನ್ನು ಎಲ್ಲಾ ತರಹದ ಜ್ವರಕ್ಕೂ ಅಮೃತಬಳ್ಳಿಯನ್ನು ಬಳಸಿದಲ್ಲಿ ಹಂತ ಹಂತವಾಗಿ ಜ್ವರ ಕಡಿಮೆಯಾಗುವುದನ್ನು ಕಾಣಬಹುದಾಗಿದೆ.

ಅಮೃತ ಬಳ್ಳಿಯ ಎಲೆ

ಅಮೃತಬಳ್ಳಿಯ ಎಲೆಗಳನ್ನು ತಂದು ಕುಟಾಣಿ ಯಲ್ಲಿ ಕುಟ್ಟಿ ಅದರ ರಸವನ್ನು ತೆಗೆದು 10 ರಿಂದ 15 ಎಂಎಲ್ ಕುಡಿಯಿರಿ.ಜ್ವರ ಬಂದವರು 3 ಹೊತ್ತು ಕುಡಿಯುತ್ತ ಬಂದರೆ ಜ್ವರವೂ ಹಂತಹಂತವಾಗಿ ಕಡಿಮೆಯಾಗುತ್ತಾ ಬರುತ್ತದೆ.ಅಮೃತಬಳ್ಳಿಯ ಎಲೆ ಯನ್ನು ಕೋಸಂಬರಿ,ಸಾಂಬಾರ್, ಪಲ್ಯ, ಚಟ್ನಿ ಮತ್ತು ಇನ್ನಿತರ ಆಹಾರವಾಗಿ ಮಾಡಿಕೊಂಡು ಸೇವಿಸಬಹುದಾಗಿದೆ.ಈ ರೀತಿ ಸೇವಿಸುವುದರಿಂದ ಮುಂದೆ ಬರಬಹುದಾದಂತಹ ಕಾಯಿಲೆಗಳಿಂದ ನಮ್ಮನ್ನು ಇದು ರಕ್ಷಿಸುತ್ತದೆ.

ಇದರಲ್ಲಿ ಇಮ್ಯೂನಿಟಿ ಬೂಸ್ಟ್ ಮಾಡುವ ಗುಣವಿದೆ ಹಾಗೂ ಆ್ಯಂಟಿ ವೈರಲ್ ಆಗಿ ಕೆಲಸ ಮಾಡುತ್ತದೆ.ಅಮೃತ ಬಳ್ಳಿಯ ಎಲೆಗಿಂತ ಕಾಂಡ ಬಳಸಿದರೆ ಉತ್ತಮ. ಇನ್ನು ಎಲೆ ಮಾತ್ರವಲ್ಲದೆ ಅದರ ಕಾಂಡವನ್ನು ಕಷಾಯ ಮಾಡಿಕೊಂಡು ಸೇವಿಸಬಹುದಾಗಿದೆ.

ಕಷಾಯ ಮಾಡುವ ವಿಧಾನ :

ಒಂದು ಲೋಟ ನೀರಿಗೆ ಈ ಮೇಲೆ ತಿಳಿಸಿರುವ ಅಮೃತ ಬಳ್ಳಿಯ ಖಾಂಡ ( ಅಮೃತ ಬಳ್ಳಿಯ ಎಲೆಗಿಂತ ಅದರ ಖಾಂಡ ಉತ್ತಮ ) ಅನ್ನು ಹಾಕಿ ಕಾಲು ಲೋಟ ಆಗುವವರೆಗೆ ಕುದಿಸಿ ಸೋಸಿಕೊಂಡು ಕುಡಿಯಬೇಕು.ಇನ್ನು ಈ ಕಷಾಯವನ್ನು ಪ್ರತಿದಿನ 40 ಎಂಎಲ್ ಒಬ್ಬ ಮನುಷ್ಯ ಸೇವಿಸಬೇಕು.

ಇನ್ನು ಇದರಿಂದ ಒಂದು ವೇಳೆ ಕೊರೊನಾ ವೈರಸ್ ನಿಮ್ಮ ದೇಹಕ್ಕೆ ಅಂಟಿದರು ನಿಮ್ಮ ದೇಹದಲ್ಲಿ ವೈರಸ್ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ ಹಾಗೂ ಆತ್ಮವಿಶ್ವಾಸದಿಂದ ಇದ್ದರೆ ಎಂತಹ ಕಾಯಿಲೆ ಬಂದರು ಹೋರಾಡಿ ಗೆಲ್ಲಬಹುದು.

ಅಮೃತ ಬಳ್ಳಿಯ ಇನ್ನಷ್ಟು ಉಪಯೋಗಗಳು

  • ಮುಖಕ್ಕೆ ಪ್ಯಾಕ್ ಆಗಿ ಬಳಸಿ ಮೊಡವೆ ನಿವಾರಣೆಗೆ ಸುಲಭ ಉಪಾಯ.
  • ಜ್ವರದ ಲಕ್ಷಣಗಳು ಕಂಡು ಬಂದರೆ ಕಾಳು ಮೆಣಸು ಜೀರಿಗೆ ಸೇರಿಸಿದ ಅಮೃತ ಬಳ್ಳಿಯ ಕಷಾಯ ತಯಾರಿಸಿ ಕುಡಿಯಿರಿ.
  • ಜೇನುತುಪ್ಪವನ್ನು ಸೇರಿಸಿ ಚಪ್ಪರಿಸುವುದರಿಂದ ಕಫ ಹೋಗಲಾಡಿಸುವ ಕೆಲವು ಗುಣಗಳು ಇದರಲ್ಲಿ ಇದೆ
  • ದಿನಕ್ಕೆ ಎರಡು ಎಲೆ ಕುದಿಸಿ ಕುಡಿಯುವುದರಿಂದ ಶುಗರ್ ಗುಣವಾಗುತ್ತದೆ.
  • ಬಾವು ಇರುವ ಅಂಗಕ್ಕೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಹಚ್ಚಿ ಮಸಾಜ್ ಮಾಡಿದರೆ ಬಾವು ಶಮನ ಮಾಡುತ್ತದೆ.

ಧನ್ಯವಾದಗಳು.

Leave a Reply

Your email address will not be published.