ಅಂಗೈಯಲ್ಲಿ ಜೀವರಕ್ಷಕ ರೇಖೆ ಇರುವವರು ಬಹಳ ಅದೃಷ್ಟವಂತರು.ಜಗತ್ತಿನಲ್ಲಿ ಪ್ರತಿಯೊಬ್ಬರ ಅಂಗೈಯ್ಯ ರೇಖೆಗಳು ಒಂದೇ ರೀತಿ ಇರುವುದಿಲ್ಲ.ಇನ್ನೂ ಹಸ್ತದಲ್ಲಿ ಕೆಲವು ರೇಖೆಗಳು ದಪ್ಪವಾಗಿ ಮತ್ತು ಸ್ಪಷ್ಟವಾಗಿ ಕಾಣಿಸಿದರೆ ಇನ್ನೂ ಕೆಲವು ರೇಖೆಗಳು ಅಸ್ಪಷ್ಟತೆಯಿಂದ ಕೂಡಿರುತ್ತದೆ.
ಒಂದೊಂದು ಸ್ಪಷ್ಟ ರೇಖೆಗಳು ಒಂದೊಂದು ವಿಚಾರಕ್ಕೆ ಸಂಬಂಧಪಟ್ಟಿರುತ್ತದೆ.ಇನ್ನೂ ಈ ರೇಖೆಗಳಲ್ಲಿ ಒಂದಾದ ಜೀವರಕ್ಷಕ ರೇಖೆ ಎಲ್ಲ ಜನರ ಅಂಗೈಯಲ್ಲೂ ಸ್ಪಷ್ಟವಾಗಿ ಕಾಣುವುದಿಲ್ಲ ಹಾಗಾಗಿಯೇ ಈ ಜೀವರಕ್ಷಕ ರೇಖೆ ಇರುವಂಥವರು ಅದೃಷ್ಟವಂತರು ಎನ್ನಲಾಗಿದೆ.
ಜೀವರಕ್ಷಕ ರೇಖೆಯು ಅತ್ಯಂತ ಪ್ರಬಲ ರೇಖೆಯಾಗಿದೆ.ಇನ್ನು ನಿಮ್ಮ ಕೈಯಲ್ಲಿ ಈ ಜೀವರಕ್ಷಕ ರೇಖೆ ಇದ್ದರೆ ನಿಮ್ಮನ್ನು ಯಾವುದೋ ಕಾಣದ ದೈವ ಗಮನಿಸುತ್ತಿದೆ ಎಂದು ಹೇಳಬಹುದು ಹಾಗೂ ದುಷ್ಟ ಶಕ್ತಿಗಳನ್ನು ಓಡಿಸುವಲ್ಲಿ ಈ ಶಕ್ತಿ ಪ್ರಬಲವಾಗಿ ಕೆಲಸ ಮಾಡಲಿದೆ ಎಂದು ಅರ್ಥ.
ಇನ್ನು ಜೀವನದಲ್ಲಿ ಯಾವುದೇ ರೀತಿಯ ಕ್ಲಿಷ್ಟ ಪರಿಸ್ಥಿತಿಗೆ ನೀವು ಸಿಲುಕಿಕೊಂಡರೆ ಈ ರೇಖೆಯಲ್ಲಿರುವ ಶಕ್ತಿ ನಿಮ್ಮನ್ನು ಸಕಲ ಕಷ್ಟಗಳಿಂದ ನಿವಾರಣೆ ಮಾಡುತ್ತದೆ.
ಇನ್ನೂ ಈ ರೇಖೆ ಜೀವನ ರೇಖೆಯ ಪಕ್ಕದಲ್ಲಿ ಕಮಾನಿನ ಆಕಾರದಲ್ಲಿ ಇರುತ್ತದೆ.ಈ ರೇಖೆಯು ಹೆಚ್ಚಾಗಿ ಎಡಹಸ್ತದಲ್ಲಿ ಕಾಣಿಸುತ್ತದೆ.ಬಲ ಹಸ್ತದಲ್ಲಿ ಅಪರೂಪದಲ್ಲಿ ಅಪರೂಪವಾಗಿ ಈ ರೇಖೆ ಕಾಣಿಸಿಕೊಳ್ಳಬಹುದು.ಇನ್ನು ಈ ಜೀವರಕ್ಷಕ ರೇಖೆಯು ನಿಮಗೆ ತಿಳಿಯದೆಯೇ ನಿಮ್ಮನ್ನು ಎಷ್ಟೋ ತೊಂದರೆಗಳಿಂದ ಕಾಪಾಡುತ್ತದೆ.
ಈ ರೇಖೆ ಯಾರ ಕೈಯಲ್ಲಿ ಇರುತ್ತದೆಯೋ ಅವರು ಒಂಟಿಯಲ್ಲ ಯಾಕೆಂದರೆ ಜೀವರಕ್ಷಕ ಶಕ್ತಿಯೂ ಅವರ ಜೊತೆಯಲ್ಲಿ ಸದಾಕಾಲ ಇರುತ್ತದೆ.ದುಷ್ಟ ಶಕ್ತಿಗಳಿಂದ ಮತ್ತು ಮಾಟ ಮಂತ್ರಾದಿಗಳಿಂದ , ದೃಷ್ಟಿ ದೋಷಗಳಿಂದ ರಕ್ಷಿಸುತ್ತದೆ.
ಧನ್ಯವಾದಗಳು.