ಅಕ್ಸಿಮೀಟರ್ ಬಳಸುವ ಮೊದಲು ತಪ್ಪದೆ ಒಮ್ಮೆ ಈ ಲೇಖನ ಓದಿ

Health & Fitness

ಈ ಕರೋನಾ ಸಮಯದಲ್ಲಿ ಸಾಮಾನ್ಯವಾಗಿ ಬಳಸುತ್ತಿರುವ ಪಲ್ಸ್ ಆಕ್ಸಿ ಮೀಟರ್. ಆಕ್ಸಿಜನ್ ಕೊರತೆಯಿಂದ ಹಲವರು ಮೃತ ಪಡುತ್ತಿದ್ದಾರೆ. ಆಕ್ಸಿಜನ್ ಲೆವೆಲ್ ದೇಹದಲ್ಲಿ ಯಾವ ಮಟ್ಟದಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳಲು ಈ ಉಪಕರಣ ಬಳಕೆ ಮಾಡಬಹುದು ಹಾಗೂ ಸಾಯುವುದನ್ನು ತಪ್ಪಿಸಬಹುದು.ಈ ಉಪಕರಣವನ್ನು ಆಸ್ಪತ್ರೆಯಲ್ಲಿ ಬಳಸಲಾಗುತ್ತಿತ್ತು ಆದರೆ ಇವಗ ಹಲವರ ಮನೆಯಲ್ಲಿ ಬಳಕೆ ಮಾಡಲಾಗುತ್ತಿದೆ.ಇದನ್ನು ಯಾರಾದರೂ ಬಳಕೆ ಮಾಡಬಹುದು.

ಈ ಪಲ್ಸ್ ಆಕ್ಸಿ ಮೀಟರ್ ನಿಂದ ಶ್ವಾಸಕೋಶದಲ್ಲಿ ಆಕ್ಸಿಜನ್ ಪ್ರಮಾಣ ಹಾಗೂ ಹಾರ್ಟ್ ರೇಟ್ ಅನ್ನು ತಿಳಿದುಕೊಳ್ಳಬಹುದು.ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ ವ್ಯಕ್ತಿಯ ಆಕ್ಸಿಜನ್ ಲೇವೆಲ್ 95-99 ಇರುತ್ತದೆ.93ಕ್ಕಿಂತ ಕಡಿಮೆ ಇದ್ದರೆ ತಕ್ಷಣ ಆಸ್ಪತ್ರೆಗೆ ಭೇಟಿ ಮಾಡುವುದು ಒಳ್ಳೆಯದು. ಸಾಮಾನ್ಯವಾಗಿ ಜ್ವರ ಕೆಮ್ಮು, ನೆಗಡಿ ಇದ್ದಾಗ ಈ ಪಲ್ಸ್ ಆಕ್ಸಿ ಮೀಟರ್ ಅನ್ನು ಬಳಸಿ ಇದರಿಂದ ಆಕ್ಸಿಜನ್ ಲೆವೆಲ್ ಅನ್ನು ತಿಳಿದುಕೊಳ್ಳಬಹುದು.

ಪಲ್ಸ್ ಆಕ್ಸಿ ಮೀಟರ್ ಅನ್ನು ತೋರು ಬೆರಳಿಗೆ ಅಳವಡಿಸಿ ಸ್ವಿಚ್ ಆನ್ ಮಾಡಿದರೆ ನಿಮಗೆ ರೀಡಿಂಗ್ ತೋರಿಸುತ್ತದೆ.ಇದರಲ್ಲಿ ಆಕ್ಸಿಜನ್ ಲೆವೆಲ್ ಮತ್ತು ಹೃದಯ ಬಡಿತವನ್ನು ತೋರಿಸುತ್ತದೆ. ಇದರಿಂದ 10 ಸೆಕೆಂಡ್ ಒಳಗೆ ನಿಮ್ಮ ದೇಹದ ಆಕ್ಸಿಜನ್ ಲೆವೆಲ್ ಅನ್ನು ತಿಳಿದುಕೊಳ್ಳಬಹುದು. ಆಕ್ಸಿಜನ್ ಲೇವೆಲ್ ಕಡಿಮೆಯಾದರೆ ಇದು ಸೂಚನೆಯನ್ನು ನೀಡುತ್ತದೆ.ಆಕ್ಸಿಜನ್ ಕಡಿಮೆಯಾದರೆ ಕರೋನಾ ಸಮಸ್ಯೆ ಅಲ್ಲ. ಅದು ಕೋವಿಡ್ ಟೆಸ್ಟ್ ಮಾಡುವ ಮೂಲಕ ತಿಳಿದುಬರುತ್ತದೆ.

ಪಲ್ಸ್ ಆಕ್ಸಿ ಮೀಟರ್ ಬಳಸುವಾಗ ಈ ಕೆಲವೊಂದು ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.ಕೈಗಳು ತಣ್ಣಗೆ ಇದ್ದಾರೆ ಅವಾಗ ಈ ಪಲ್ಸ್ ಆಕ್ಸಿ ಮೀಟರ್ ಅನ್ನು ಬಳಸಬೇಡಿ. ಇದರಿಂದ ಆಕ್ಸಿಜನ್ ಲೆವೆಲ್ ಏರುಪೇರು ಆಗುವ ಸಾಧ್ಯತೆ ಇದೆ.

ಕೈಗಳನ್ನು ಉಜ್ಜಿ ನಂತರ ಬಿಸಿ ಮಾಡಿಕೊಂಡು ಬಳಸಿ. ನೈಲ್ ಪಾಲಿಶ್ ಹಚ್ಚಿದ್ದಾರೆ ಬಳಸಬೇಡಿ.ಇದರಿಂದ ಆಕ್ಸಿ ಮೀಟರ್ ನಲ್ಲಿ ರೀಡಿಂಗ್ ಏರು ಪೆರು ಕಾಣಿಸಬಹುದು. ಇದೆಲ್ಲ ಗಮನದಲ್ಲಿಟ್ಟುಕೊಂಡು ಪಲ್ಸ್ ಆಕ್ಸಿ ಮೀಟರ್ ಅನ್ನು ಬಳಸಿ. ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಾದರೆ ಮೆದುಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ಇದರಿಂದ ಮನುಷ್ಯ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಇದರಿಂದ ಇಂತಹ ಸಮಯದಲ್ಲಿ ಈ ಉಪಕರಣ ತಂದಿಟ್ಟುಕೊಳ್ಳುವುದು ಒಳ್ಳೆಯದು.

Leave a Reply

Your email address will not be published.