ಈ ರಾಶಿಯ ಜನರು ಹೆಚ್ಚು ಮೋಸ ಹೋಗುತ್ತಾರೆ.ಇನ್ನೂ ಈ ರಾಶಿಯ ಗಂಡು ಮಕ್ಕಳಿಗಿಂತ ವಿಶೇಷವಾಗಿ ಹೆಣ್ಣುಮಕ್ಕಳು ಮೋಸ ಹೋಗುತ್ತಾರೆ.ಇನ್ನೂ ಈ ರಾಶಿಯವರು ಯಾವ್ಯಾವ ರೀತಿ ಮೋಸ ಹೋಗುತ್ತಾರೆ ಎಂದು ನೋಡುವುದಾದರೆ
ಒಡಹುಟ್ಟಿದವರಲ್ಲಿ ಮೋಸ , ಹೆತ್ತ ತಂದೆ ತಾಯಿಗಳಿಗೂ ಮೋಸ ,ಸಾಮಾಜಿಕವಾಗಿ ಬಹಳ ಗೌರವವನ್ನು ಸಂಪಾದಿಸುತ್ತಾರೆ ಆದರೆ ಮನೆಯಲ್ಲಿ ಇವರನ್ನು ಯಾರೂ ನಂಬುವುದಿಲ್ಲ.ಬಾಹ್ಯವಾಗಿ ಎಷ್ಟೇ ಗಳಿಸಿದರೂ ಆಂತರಿಕವಾಗಿ ಇವರು ಶೂನ್ಯ ದವರಾಗಿರುತ್ತಾರೆ ಏಕೆಂದರೆ ಹೊರಗಡೆ ಇವರು ಎಷ್ಟೇ ಘನತೆ , ಗೌರವ , ಯಶಸ್ಸನ್ನು ಗಳಿಸಿದರು ಮನೆಯಲ್ಲಿ ಇವರನ್ನು ಯಾರೂ ನಂಬುವುದಿಲ್ಲ ಹಾಗಾಗಿ ಇವರಿಗೆ ಮಾನಸಿಕ ಚಿಂತೆ , ಮಾನಸಿಕವಾಗಿ ಸ್ಥಿಮಿತ ಕಳೆದುಕೊಳ್ಳುವುದು ಹಾಗೂ ನೆಮ್ಮದಿ ಇಲ್ಲದಂತಾಗುತ್ತದೆ.
ಇನ್ನೂ ಆ ಮೋಸ ಹೋಗುವಂತಹ ರಾಶಿಗಳು ಯಾವುವೆಂದರೆ ಮಕರ ರಾಶಿ , ಕುಂಭ ರಾಶಿ ಹಾಗೂ ವೃಷಭ ರಾಶಿ
ಈ 3 ರಾಶಿಯವರಿಗೆ ಸದಾ ಕಾಲ ತೊಂದರೆ ಕಟ್ಟಿಟ್ಟ ಬುತ್ತಿ.ಮಾನಸಿಕವಾಗಿ ಚಿತ್ರಹಿಂಸೆ ಅನುಭವಿಸುತ್ತಾರೆ.
ಈ ರಾಶಿಯ ಹೆಣ್ಣುಮಕ್ಕಳಿಗೆ ದಾಂಪತ್ಯ ಜೀವನದಲ್ಲಿ ತೊಂದರೆ ಉಂಟಾಗುತ್ತದೆ.ಗಂಡು ಮಕ್ಕಳಾಗಿದ್ದರೆ ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗುತ್ತದೆ.ಒಟ್ಟಾರೆಯಾಗಿ ಸಕಲ ತೊಂದರೆಗಳೆಲ್ಲ ಈ ರಾಶಿಯವರೇ ಅನುಭವಿಸುತ್ತಾರೆ.
ಹಾಗಾಗಿ ಈ ತೊಂದರೆಯಿಂದ ಸ್ವಲ್ಪವಾದರೂ ಪರಿಹಾರ ನೆಮ್ಮದಿ ಕಂಡುಕೊಳ್ಳಲು ದುರ್ಗಾ ದೇವಿಯ ಆರಾಧನೆಯನ್ನು ಮಾಡಿ. ಪ್ರತಿದಿನ ದುರ್ಗಾದೇವಿಯ ಆರಾಧನೆ ಮಾಡುವುದರಿಂದ ನಿಮ್ಮ ತೊಂದರೆಗಳು ಕನಿಷ್ಠ ಪಕ್ಷವಾದರೂ ದೂರಾಗಬಹುದು.
ಇನ್ನು ಪ್ರತಿ ಸೋಮವಾರ ,48 ಸೋಮವಾರಗಳವರೆಗೂ ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಣೆ ಮಾಡಿ ನಿಮ್ಮ ಮನಸ್ಸಿನ ಕೋರಿಕೆಗಳನ್ನು ಬೇಡಿಕೊಳ್ಳಿ.ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳು ನಿಮಗೆ ಕೊಂಚ ನಿವಾರಣೆಯಾಗಬಲ್ಲದು.
ನಂಬಿಕೆ ,ಆತ್ಮ , ವಿಶ್ವಾಸ ವನ್ನು ಬಹಳ ಜನರ ಮೇಲೆ ಈ 3 ರಾಶಿಯವರು ಇಟ್ಟಿರುತ್ತಾರೆ
ಆದರೆ ಇವರಿಗೆ ಕೊನೆಗೆ ನಂಬಿಕೆದ್ರೋಹ , ಆತ್ಮವಂಚನೆ ವಿಶ್ವಾಸಘಾತವಾಗುತ್ತದೆ.
ಈ ರಾಶಿಯವರು ಜೀವನಪೂರ್ತಿ ತ್ಯಾಗಮಯಿಯಾಗಿ ಬದುಕಬೇಕಾಗುತ್ತದೆ ಹಾಗೂ ಇವರ ಜೀವನದಲ್ಲಿ ಅದೃಷ್ಟ ಇದ್ದರೂ ಇವರು ಅನುಭವಿಸುವ ಯೋಗ ವನ್ನು ಅದೃಷ್ಟವನ್ನು ಪಡೆದುಕೊಂಡು ಬಂದಿರುವುದಿಲ್ಲ.
ಧನ್ಯವಾದಗಳು.