ವೈರಸ್ ವಿರುದ್ಧ ಗೆಲ್ಲಲು ನೆಲನೆಲ್ಲಿಯ ಕಷಾಯ ಖಂಡಿತಾ ಸಹಾಯ ಮಾಡಬಲ್ಲದು!

Featured-Article

ನೆಲನೆಲ್ಲಿ

ನೆಲದ ಮೇಲೆ ಬೆಳೆಯುವ ಧಾತ್ರಿಯೇ ನೆಲನೆಲ್ಲಿ.ನೆಲ ನೆಲ್ಲಿಯೂ ವೈರಸ್ ನಿರೋಧಕ ಗುಣವನ್ನು ಹೊಂದಿದೆ.
ಲಿವರ್ ಗೆ ತೊಂದರೆ ಕೊಡುವ ಹೆಪಟೈಟಿಸ್ ಎ,ಬಿ,ಸಿ ಇವೆಲ್ಲವಕ್ಕೂ ನೆಲನಲ್ಲಿ 1 ಉತ್ತಮ ಔಷಧ.ಇನ್ನೂ ಹತ್ತು ಹಲವಾರು ರೀತಿಯ ವೈರಸ್ ಗಳನ್ನು ತಡೆಯುವಲ್ಲಿ ನೆಲನೆಲ್ಲಿ ಬಹಳ ಸಹಕಾರಿ.

ಚಿಕ್ಕ ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ , ಸರಿಯಾಗಿ ಹಸಿವಾಗದಿದ್ದರೆ , ಬಾಯಿಗೆ ರುಚಿ ಸಿಗದಿದ್ದರೆ , ಚರ್ಮದ ಸಮಸ್ಯೆಗಳಿಗೆ , ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ , ನೆಗಡಿಗೆ , ಅಲರ್ಜಿ ತೊಂದರೆಗಳಿಗೆ , ಮದ್ಯಪಾನ ಮಾಡುವವರಿಗೆ(ಲಿವರ್ ಗೆ ಹಾನಿ ನಿರೋಧಕ ) ಹಾಗೂ ಮುಖ್ಯವಾಗಿ ಜ್ವರಕ್ಕೆ
ನೆಲನೆಲ್ಲಿ ತುಂಬಾ ಒಳ್ಳೆಯದು.ನೆಲನೆಲ್ಲಿಯ 1 ಸಂಪೂರ್ಣ ಗಿಡವನ್ನು ಬೇರಿನ ಸಮೇತ ಅಥವಾ ಬೇರು ಇಲ್ಲದೆ ವಾರಕ್ಕೆ 2 ರಿಂದ 3 ಬಾರಿ ಕಷಾಯ ಮಾಡಿಕೊಂಡು ಕುಡಿಯುವುದಾದರೆ ಒಬ್ಬರಿಗೆ ಇದು 1 ಸಾಕು.

ಕಷಾಯವನ್ನು ಮಾಡುವ ವಿಧಾನ:ಮೊದಲಿಗೆ ನೆಲನೆಲ್ಲಿಯ ಗಿಡವನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ.ಈಗ 1ಪಾತ್ರೆಗೆ 4ಲೋಟ ನೀರು ಹಾಕಿ ಇದಕ್ಕೆ ಕಟ್ ಮಾಡಿಟ್ಟು ಕೊಂಡಿರುವ ನೆಲನೆಲ್ಲಿಯ ಗಿಡವನ್ನು ಹಾಕಿ
ಸಣ್ಣ ಉರಿಯಲ್ಲಿ 1 ಲೋಟ ನೀರು ಆಗುವವರೆಗೆ ಕುದಿಸಿ ನಂತರ 1 ಲೋಟದಲ್ಲಿ ಸೋಸಿಕೊಳ್ಳಿ.

ಈ ಕಷಾಯವನ್ನು ವಾರದಲ್ಲಿ 2 ರಿಂದ 3 ಬಾರಿ ಕುಡಿಯುವುದರಿಂದ ಲಿವರ್ ಗೆ ಸಂಬಂಧಪಟ್ಟ ತೊಂದರೆಗಳು , ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆಗಳು ಕಡಿಮೆಯಾಗಿ ವೈರಸ್ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಸೂಚನೆ: ಇದನ್ನು ಅತಿಯಾಗಿ ಸೇವನೆ ಮಾಡುವುದರಿಂದ ಚರ್ಮ,ಒಣಗಿದಂತಾಗುವುದು ಹಾಗಾಗಿ ನಿಮ್ಮದು ಒಣ ಚರ್ಮವಾಗಿದ್ದರೆ ಇದನ್ನು ಸೇವನೆ ಮಾಡುವ ದಿನ ಒಳ್ಳೆಯ ಕೊಬ್ಬನ್ನು ಅಂದರೆ ಶುದ್ಧವಾದ ತುಪ್ಪ, ಶುದ್ಧವಾದ ಎಣ್ಣೆಯನ್ನು ಹಾಗೂ ಕೆಲವು ಒಣ ಹಣ್ಣುಗಳನ್ನು ಸೇವಿಸಿ.

ಧನ್ಯವಾದಗಳು.

Leave a Reply

Your email address will not be published.