ಉತ್ತರ ದಿಕ್ಕಿನ ಬಾಗಿಲು ಯಾರಿಗೆ ಶುಭ? ಯಾರಿಗೆ ಅಶುಭ?

0
20439

ಉತ್ತರದ ಬಾಗಿಲು ಅಂದರೆ ನಂದಿಯ ಬಾಗಿಲು ಇನ್ನೂ ಯಾವುದೇ ಕಾರಣಕ್ಕೂ ಮನೆಯ ನೈರುತ್ಯ ಭಾಗ ತಗ್ಗಿನಲ್ಲಿ ಇರಬಾರದು ಅಂದರೆ ಮನೆಯ ನೈರುತ್ಯ ಭಾಗ ಬೇರೆ ಎಲ್ಲಾ ಭಾಗಗಳಿಗಿಂತ 2 ಇಂಚಿನಷ್ಟು ಎತ್ತರವಿರಬೇಕು.ಮನೆಯ ದೇವಮೂಲೆ ತಗ್ಗಿರಬೇಕು ಜೊತೆಗೆ ದೇವರ ಮೂಲೆಯಲ್ಲಿ ಸ್ವಲ್ಪ ಜಾಗ ಬಿಟ್ಟಿರಬೇಕು ಹಾಗೂ ಮುಖ್ಯವಾಗಿ ದೇವಮೂಲೆಯಲ್ಲಿ ಯಾವುದೇ ಕಾರಣಕ್ಕೂ ಭಾರವಾದ ವಸ್ತುಗಳನ್ನು ಇಡಬಾರದು.

ಸಾಮಾನ್ಯವಾಗಿ ನಾವೆಲ್ಲರೂ ತಿಳಿದಿರುವ ಹಾಗೆ ನೈರುತ್ಯ ಭಾಗದಲ್ಲಿ ಕುಬೇರಮೂಲೆ ಇದೆ ಎಂದು ತಿಳಿದಿದ್ದೇವೆ ಆದರೆ ಸತ್ಯವೇನೆಂದರೆ ಉತ್ತರ ಭಾಗದಲ್ಲಿ ಕುಬೇರ ಮೂಲೆ ಇದೆ.ಪೂರ್ವ ಮತ್ತು ಉತ್ತರ ಭಾಗದಲ್ಲಿ ಬಾಗಿಲನ್ನು ಇಟ್ಟರೆ ಶುಭ ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ.ಪಶ್ಚಿಮ ಮತ್ತು ದಕ್ಷಿಣಕ್ಕೆ ಬಾಗಿಲನ್ನು ಇಡುವುದಾದರೆ ವಾಸ್ತು ಶಾಸ್ತ್ರಜ್ಞರನ್ನು ಸಂಪರ್ಕಿಸಿ ಮುಂದುವರಿಯಿರಿ.

ಇನ್ನೂ ಉತ್ತರ ಬಾಗಿಲು ಪ್ರತಿಯೊಬ್ಬರಿಗೂ ಶುಭವನ್ನೇ ತರುತ್ತದೆ ಯಾವುದೇ ಕಾರಣಕ್ಕೂ ಅದರಿಂದ ನಷ್ಟ ಉಂಟಾಗುವ ಸಮಸ್ಯೆ ಇರುವುದಿಲ್ಲ ಆದರೆ ಕೆಲವು ಜನಗಳಿಗೆ ಜನ್ಮ ಸ್ಥಾನದಲ್ಲಿ ಪಂಚಭೂತಗಳನ್ನು ಗಮನಿಸಿ ನಿರ್ಧರಿಸಬೇಕು.ಇನ್ನು ಉತ್ತರ ದಿಕ್ಕಿಗೆ ಗುರು ಗ್ರಹ ಇರುತ್ತಾನೆ ಹಾಗಾಗಿ ಉತ್ತರ ದಿಕ್ಕಿಗೆ ಬಾಗಿಲು ಇಟ್ಟವರು ಗುರುಗ್ರಹವನ್ನು ಪ್ರಾರ್ಥಿಸಿದರೆ ಅಭಿವೃದ್ಧಿ ಹೊಂದುತ್ತಾರೆ.

ಇನ್ನೂ ಉತ್ತರ ಬಾಗಿಲಾಗಲೀ ಅಥವಾ ಇನ್ನಾವುದೇ ದಿಕ್ಕಿಗೆ ಬಾಗಿಲನ್ನು ಇಡಬೇಕಾದರೂ ವಾಸ್ತು ತಜ್ಞರನ್ನು ಸಂಪರ್ಕಿಸಿ ವಿಚಾರ ಮಾಡಿ ಮುಂದುವರಿಯಿರಿ ಹೀಗೆ ಮಾಡುವುದರಿಂದ ನಿಮ್ಮ ಮನೆ ಶ್ರೇಯಸ್ಕರವಾಗಿರುತ್ತದೆ.ನಿಮ್ಮ ಮನೆಯ ಸದಸ್ಯರೆಲ್ಲರೂ ಸುಖವನ್ನು ಅನುಭವಿಸಲು ವಾಸ್ತು ಪ್ರಕಾರ ಮನೆಯನ್ನು ನಿರ್ಮಾಣ ಮಾಡಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here