ಕೊರೋನಾ ನಾಶಮಾಡಲು ಈ ಹುಡುಗಿ ಮಾಡಿರುವ ಐಡಿಯಾ ಏನು ಗೊತ್ತಾ?

Featured-Article

ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಸಮುದಾಯ ಅದರಲ್ಲೂ ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರದಲ್ಲಿ
ತೊಡಗಿಕೊಳ್ಳುತ್ತಿದ್ದಾರೆ.ಇನ್ನೂ ಈ ಕೋವಿಡ್ ಸಮಯದಲ್ಲಿ ಈ ಪುಟ್ಟ ಪೋರಿ ಆವಿಷ್ಕಾರ ಮಾಡಿರುವುದು ಅಂತಿಂಥ ವಸ್ತುವನ್ನಲ್ಲ. ಇದನ್ನು ನೀವು ಬಳಸಿದರೆ ಸಾಕು ಕೊರೊನಾ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಹಾಗೂ 1 ವೇಳೆ ಸುಳಿದರೂ ಅದು ಉಳಿಯುವುದಿಲ್ಲ.

ಇನ್ನೂ ಮಹಾಮಾರಿ ಕೊರೊನಾವನ್ನು ಓಡಿಸಲು ಈ ಹುಡುಗಿ ಮಾಡಿರುವ ಹೊಸ ಪ್ಲಾನ್ ಏನು ಗೊತ್ತಾ?ಕಂಡುಹಿಡಿದಿರುವುದಾದ್ರೂ ಏನನ್ನು?ಎಂದು ತಿಳಿಯೋಣ ಬನ್ನಿ.

ಈ ಹುಡುಗಿಯ ಹೆಸರು ದಿಗಂತಿಕಾ ಬೋಸ್.ಪಿಯುಸಿ ವಿದ್ಯಾರ್ಥಿನಿ.ಪಶ್ಚಿಮ ಬಂಗಾಳದ ಪೂರ್ಭ ಬೃಂದಾವನ ಜಿಲ್ಲೆಯ ಈ ಬಾಲೆ ಕೊರೋನಾ ಸೋಂಕು ಗೆಲ್ಲುವ ಮಾಸ್ಕ್ ಒಂದನ್ನು ಕಂಡು ಹಿಡಿದಿದ್ದಾಳೆ.ಈ ಬಾಲೆ ಕೊರೊನಾದ ಮೊದಲನೆಯ ಅಲೆಯಲ್ಲಿಯೇ ಈ ಮಾಸ್ಕ್ ಅನ್ನು ಅನ್ವೇಷಣೆ ಮಾಡಿದ್ದರು ಆದರೆ ಇದು ಪರಿಚಯವಾಗಿರಲಿಲ್ಲವಷ್ಟೇ.

ಈ ಮಾಸ್ಕ್ ನ ಮ್ಮುಖ್ಯ ವಿಶೇಷತೆಯೇನೆಂದರೆ ಈ ಮಾಸ್ಕ್ ನಲ್ಲಿ 3 ಚೇಂಬರ್ ಗಳಿದ್ದುಮೊದಲನೇ ಚೇಂಬರ್-ಧೂಳು ಮತ್ತು ಇನ್ನಿತರ ಕಣಗಳನ್ನು ತಡೆಯುತ್ತದೆ ನಂತರ ಎರಡನೇ ಚೇಂಬರ್ ಗೆ ಗಾಳಿ ಬರುತ್ತದೆ ಹಾಗೂಮೂರನೇ ಚೇಂಬರ್ ನಿಂದ ಕೆಮಿಕಲ್ ಚೇಂಬರ್ ಎಂದು ಕರೆಯಲಾಗುತ್ತದೆ
ಸೋಪು ಮತ್ತು ನೀರಿನ ಮಿಶ್ರಣ ಈ ಚೇಂಬರ್ ನಲ್ಲಿದ್ದು ಅಲ್ಲಿಯೇ ವೈರಸ್ ಸಾವನ್ನಪ್ಪುತ್ತದೆ.

ಇನ್ನೂ ವಿಶೇಷವೆಂದರೆ ಸೋಂಕಿತ ವ್ಯಕ್ತಿ ಇದನ್ನು ಧರಿಸಿದರೆ ಆತನಿಂದ ವೈರಸ್ ಬೇರೆ ಯಾರಿಗೂ ಹರಡುವ ಸಾಧ್ಯತೆಯೂ ಇರುವುದಿಲ್ಲ.ಸದ್ಯ ಈ ಹೊಸ ಮಾಸ್ಕ್ ಮುಂಬಯಿನ ಮ್ಯೂಸಿಯಂ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ವ್ಯವಸ್ಥೆಯಲ್ಲಿ ಪೂರಕ ವಾತಾವರಣ ಸಿಕ್ಕರೆ ಈ ಪ್ರಯತ್ನಕ್ಕೆ ಖಂಡಿತವಾಗಿ ಒಳ್ಳೆ ಪ್ರತಿಫಲ ಸಿಗುವ ಸಾಧ್ಯತೆ ಹೆಚ್ಚಿದೆ.

ದಿಗಂತಿಕಾ ಬೋಸ್ ಅವರ ಈ ಪ್ರಯತ್ನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಧನ್ಯವಾದಗಳು.

Leave a Reply

Your email address will not be published.