ಮದುವೆಯಾಗುವ ಸೂಕ್ತ ವಯಸ್ಸು ಯಾವುದು!

Featured-Article

ಪುರುಷ ಮತ್ತು ಸ್ತ್ರೀಯರಲ್ಲಿ ಸಂತಾನವನ್ನು ಪಡೆಯಲು ಸೂಕ್ತ ವಯಸ್ಸು ಯಾವುದು
ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಪ್ರತಿಯೊಂದಕ್ಕೂ ಅದರದ್ದೇ ಆದ ವಯಸ್ಸು ಇದ್ದೇ ಇರುತ್ತದೆ ಅದೇ ರೀತಿ ಸರಿಯಾದ ವಯಸ್ಸಿನಲ್ಲಿ ಮದುವೆಯಾಗಿ ಸರಿಯಾದ ವಯಸ್ಸಿಗೆ ಮಕ್ಕಳನ್ನು ಪಡೆಯುವುದು ಕೂಡ 1 ಮುಖ್ಯವಾದ ವಿಷಯ.

ಈಗಿನ ಕಾಲದಲ್ಲಿ ಮಹಿಳೆ ಮತ್ತು ಪುರುಷರು ತಮ್ಮ ಒತ್ತಡದ ಜೀವನಶೈಲಿಯಿಂದ , ಸಮಾನತೆ ದೃಷ್ಟಿಯಿಂದ ಮತ್ತು ವೃತ್ತಿಜೀವನದ ಸಲುವಾಗಿ ಬಹಳ ತಡವಾಗಿ ಮದುವೆಯಾಗುತ್ತಿದ್ದಾರೆ ಹಾಗೂ ಇದರಿಂದ ಕೆಲವರಿಗೆ ಮಕ್ಕಳಾಗಲು ತಡವಾದರೆ ಇನ್ನೂ ಕೆಲವೊಬ್ಬರಿಗಂತೂ ನೈಸರ್ಗಿಕವಾಗಿ ಮಕ್ಕಳ ಆಗುವುದು ಕಷ್ಟ ಸಾಧ್ಯವಾಗುತ್ತಿದೆ.ಹಾಗಾಗಿ ಅನೈಸರ್ಗಿಕ ಕ್ರಮದ ಮೊರೆ ಹೋಗಿ ಮಕ್ಕಳನ್ನು ಪಡೆಯಬೇಕಾಗುತ್ತದೆ.

ಇದರಿಂದ ಮಕ್ಕಳ ಗುಣಮಟ್ಟದಲ್ಲಿ , ಮಕ್ಕಳ ಬೆಳವಣಿಗೆಯಲ್ಲಿ , ಆರೋಗ್ಯದ ಗುಣಮಟ್ಟವನ್ನು ನೀವೇ ಊಹಿಸಿ.ಯಾಕೆಂದರೆ ನೈಸರ್ಗಿವಾಗಿ ಹುಟ್ಟುವ ಮಕ್ಕಳಲ್ಲಿಯೇ ಆರೋಗ್ಯ ಕೊರತೆಯಿರುತ್ತದೆ ಅಂತಹುದರಲ್ಲಿ ಅನೈಸರ್ಗಿಕವಾಗಿ ಹುಟ್ಟುವ ಮಕ್ಕಳಲ್ಲಿ ಎಷ್ಟು ಆರೋಗ್ಯ ಕೊರತೆ ಇರಬಹುದು ಎಂದು ನೀವೇ ಊಹಿಸಿ.

ವೃತ್ತಿ ಜೀವನ ಮುಖ್ಯ ನಿಜ ಅದೇ ರೀತಿ ಮುಂದಿನ ಸಂತತಿಯನ್ನು ಬೆಳೆಸುವುದು ಅಷ್ಟೇ ಮುಖ್ಯ ಅಲ್ಲವೇ
ಹಾಗಾಗಿ ಸರಿಯಾದ ಸಮಯಕ್ಕೆ ಮಗುವನ್ನು ಮಾಡಿಕೊಳ್ಳುವುದು ಅಷ್ಟೇ ಮುಖ್ಯ ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

ಇನ್ನು ಮದುವೆಯಾಗಲು ಮತ್ತು ಸಂತಾನೋತ್ಪತ್ತಿ ಮಾಡಲು ಪುರುಷರ ವಯಸ್ಸು 20ರ ನಂತರ 25 ರಿಂದ ಮತ್ತು 30 ರ ಒಳಗೆ ಮಾಡಿಕೊಳ್ಳಬೇಕು.10 ವರ್ಷದ ಅವಧಿಯಲ್ಲಿ ವೀರ್ಯದ ಗುಣಮಟ್ಟ ಚೆನ್ನಾಗಿರುತ್ತದೆ ಹಾಗಾಗಿ ಆ ಸಮಯದಲ್ಲಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಬೇಕು.

ಇನ್ನೂ ವಯಸ್ಸಾಗುತ್ತಾ ಹೋದಂತೆ ವೀರ್ಯದ ಗುಣಮಟ್ಟ ಅಷ್ಟಾಗಿ ಇರುವುದಿಲ್ಲ ಹಾಗಾಗಿ ಅಂತಹ ಸಮಯದಲ್ಲಿ ನೀವು ಮಕ್ಕಳನ್ನು ಪಡೆಯಲು ಕಷ್ಟಸಾಧ್ಯ ಆದರೆ ಸಾಧ್ಯವಾಗುವುದಿಲ್ಲ ಎಂದಂತಲ್ಲ.

ಆದರೆ ಮಹಿಳೆಯರು ಇಲ್ಲಿ ಮುಖ್ಯವಾಗಿ ವಯಸ್ಸು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.18 ರ ನಂತರ 25 ರಿಂದ 30ರೊಳಗೆ ಮುದುವೆಯಾಗಿ ಸಂತಾನವನ್ನು ಪಡೆದುಕೊಳ್ಳಬೇಕು.ಇದು ಮಹಿಳೆಯರ ಆರೋಗ್ಯ ದೃಷ್ಟಿಕೋನದಿಂದ ,ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಒಳ್ಳೆಯದು.

ಯಾಕೆಂದರೆ ಮಹಿಳೆಯು 18 ವರ್ಷ ತುಂಬಿದ ನಂತರ ಅವಳ ಅಂಗ ಪ್ರತ್ಯಂಗಗಳು ಸದೃಢವಾಗಿರುತ್ತವೆ
ಅಂದರೆ ಗಟ್ಟಿಮುಟ್ಟಾಗಿರುತ್ತವೆ ಮಗುವನ್ನು ಹೆರಲು ಶಕ್ತಿಯುತವಾಗಿರುತ್ತಾರೆ ಹಾಗಾಗಿ ಆ ಸಂದರ್ಭದಲ್ಲಿ ಗರ್ಭಿಣಿಯಾದರೆ ಮಗುವನ್ನು ಹೆತ್ತು ನಷ್ಟ ಹೊಂದಿದ ರಕ್ತ ಇನ್ನಿತರ ಪೌಷ್ಟಿಕಾಂಶ ದೊರೆಯುತ್ತದೆ.

ಅತಿ ಹೆಚ್ಚು ವಯಸ್ಸಾದಾಗ ತಾಯಿಯಾದರೆ ಮಕ್ಕಳನ್ನು ಪಡೆಯುವ ಸಮಯ ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಮಗುವಾದರೆ ಮೊಟ್ಟೆ ಬಿಡುಗಡೆಯಾದರೂ ಆರೋಗ್ಯವಂತ ಮೊಟ್ಟೆ ಬಿಡುಗಡೆ ಯಾಗುವುದಿಲ್ಲ ಹಾಗಾಗಿ ಅಷ್ಟೊಂದು ಈ ವಯಸ್ಸು ಹಿತಕರವಲ್ಲ ಎಂಬುದು ವೈದ್ಯ ಡಾಕ್ಟರ್ ಪಿ ಕೆ ಪ್ರವೀಣ್ ಬಾಬು ಅವರ ಅಭಿಪ್ರಾಯವಾಗಿದೆ.

ಧನ್ಯವಾದಗಳು.

Leave a Reply

Your email address will not be published.