ಮನೆಯಲ್ಲಿ ಇಂತಹ ಫೋಟೋ ಇಡುವಾಗ ಈ ಎಡವಟ್ಟುಗಳನ್ನು ಮಾಡಬೇಡಿ!

Featured-Article

ನಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಬಗೆ ಬಗೆಯ ದೇವರ ಫೋಟೋಗಳನ್ನು ಇಟ್ಟು,
ಅವುಗಳನ್ನು ಪೂಜಿಸುತ್ತೇವೆ ಅದು ಆಗಿನ ಕಾಲದಿಂದ ಮಾಡ್ತಾ ಬಂದಿದ್ದೇವೆ.ಪ್ರತಿ ಮನೆಯಲ್ಲೂ ದೇವರ ಬೊಂಬೆಗಳನ್ನು ಇಡೋದಕ್ಕೆ ಒಂದು ಸೆಪರೇಟ್ ಜಾಗವನ್ನು ಮೀಸಲಿಟ್ಟಿದ್ದೇವೆ.ಇನ್ನು ಕೆಲವು ಮನೆಗಳಲ್ಲಿ ಚಿಕ್ಕ ಚಿಕ್ಕ ಮಂಟಪಗಳನ್ನು ನಿರ್ಮಿಸಿ ಅದಕ್ಕೆ ಅಂತ ಒಂದು ಸಪರೇಟ್ ಜಾಗವನ್ನು ಇಟ್ಟಿರುತ್ತಾರೆ
ಆದರೆ ನಮ್ಮಲ್ಲಿ ತುಂಬಾ ಜನಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ದೇವರುಗಳ ಫೋಟೊಗಳನ್ನು ಅಥವಾ ವಿಗ್ರಹಗಳನ್ನು ಮನೆಯ ದೇವರ ಮನೆಯಲ್ಲಿ ಇಡಬಾರದು.ಇಂತಹ ಫೋಟೋಗಳು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಇರುವವರಿಗೆ ಸುಖ ಸಂತೋಷಗಳು ಇರೋದಿಲ್ಲವಂತೆ ,ಆರ್ಥಿಕವಾಗಿ ಮಾನಸಿಕವಾಗಿ ನಷ್ಟ ಉಂಟಾಗುತ್ತದೆ.

*ಬೈರವ ದೇವರ ವಿಗ್ರಹ

ವಾಸ್ತುಶಾಸ್ತ್ರದ ಪ್ರಕಾರ ಭೈರವ ದೇವರ ವಿಗ್ರಹವನ್ನು ಅಥವಾ ಫೋಟೋಗಳನ್ನು ಮನೆಯಲ್ಲಿ ಇರಬಾರದಂತೆ.ಭೈರವ ದೇವರು ತಾಂತ್ರಿಕ ದೇವರಾದ ಕಾರಣ ತಾಂತ್ರಿಕ ಮಂತ್ರಗಳಿಂದ ಆತನನ್ನು ಸ್ಮರಿಸಬೇಕಾಗುತ್ತದೆಆದ ಕಾರಣ ಭೈರವನ ಫೋಟೋ ಇಡಬಾರದು.

ನಟರಾಜನ ವಿಗ್ರಹ

ಪರಮಶಿವನ ಮತ್ತೊಂದು ರೂಪ ನಟರಾಜ ಸ್ವಾಮಿಯ ರೂಪ .ವಾಸ್ತುಶಾಸ್ತ್ರದ ಪ್ರಕಾರ ನಟರಾಜ ಸ್ವಾಮಿ ವಿಗ್ರಹವನ್ನು ಮನೆಯಲ್ಲಿ ಇಡಬಾರದು ಇದಕ್ಕೆ ಮುಖ್ಯ ಕಾರಣ ಏನಂದ್ರೆ ನಟರಾಜನ ರೂಪದಲ್ಲಿರುವ ಶಿವ ತಾಂಡವ ಮಾಡ್ತಾ ಇರ್ತಾನೆ ಇದರಿಂದ ನಟರಾಜ ಸ್ವಾಮಿಯ ಬೊಂಬೆಗಳನ್ನು ಅಥವಾ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು.

ಶನಿ ದೇವರ ಫೋಟೋ ಗ್ರಹ ಶಾಂತಿಗಾಗಿ ಶನಿದೇವರ ಪೂಜೆ ಮಾಡ್ತೇವೆ ಮತ್ತು ಆರಾಧಿಸುತ್ತೇವೆ ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿದೇವರ ಫೋಟೋಗಳನ್ನು ಅಥವಾ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು.ಇನ್ನು ಶನಿದೇವರಿಗೆ ಮಾಡಿದ ಹಾಗೆ ರಾಹು ಕೇತುಗಳಿಗೆ ಕೂಡ ನಾವು ಪೂಜೆ ಮಾಡುತ್ತೇವೆ.ಆದರೆ ರಾಹು ಕೇತುಗಳ ಬೊಂಬೆಗಳನ್ನು ಮನೆಯಲ್ಲಿ ಇಡಬಾರದು ಯಾಕಂದ್ರೆ ರಾಹು ಕೇತು ಗ್ರಹಗಳು ಪಾಪ ಗ್ರಹಗಳಾಗಿರುವುದರಿಂದ ಇಡಬಾರದು.

ಉಗ್ರರೂಪದ ದೇವರ ಫೋಟೋಗಳು ದೇವರ ಕೋಣೆಯಲ್ಲಿ ಸೌಮ್ಯ ರೂಪದಲ್ಲಿರುವ ದೇವರ ಬೊಂಬೆಗಳನ್ನು ಮಾತ್ರ ಇಡಬೇಕು.ಉದಾಹರಣೆಗೆ ದುರ್ಗಾ ಮಾತೆ ಯಂತಹ ಉಗ್ರ ರೂಪ ಇರುವಂತಹ ಫೋಟೋ ಅಥವಾ ಗೊಂಬೆಗಳನ್ನು ನಾವು ದೇವರಕೋಣೆಯಲ್ಲಿ ಇಡಬಾರದು.

ಗಣಪತಿ ಫೋಟೊ ಮನೆಯ ಕೋಣೆಯಲ್ಲಿ ಎಲ್ಲರೂ ತಪ್ಪದೇ ಗಣಪತಿ ವಿಗ್ರಹವನ್ನು ಇಡುತ್ತೇವೆ ಆದ್ರೆ ಮನೆಯಲ್ಲಿ 3 ಕ್ಕಿಂತ ಅಧಿಕ ಗಣಪತಿ ಫೋಟೊಗಳು ಅಥವಾ ವಿಗ್ರಹಗಳಾಗಲಿ ಇಡ ಬಾರದಂತೆ .
ನಮ್ಮಲ್ಲಿ ಕೆಲವರು ನಮ್ಮ ದೇವರ ಕೋಣೆಯಲ್ಲಿ ಪೂಜೆ ಮಾಡುವುದಕ್ಕೆ ಶಂಖವನ್ನು ಬಳಸುತ್ತೇವೆ
ಆದರೆ ನಮ್ಮ ಮನೆಯಲ್ಲಿ ಎರಡು ಶಂಖ ಇದ್ದರೆ ಮಾತ್ರ ಕೂಡಲೇ ಅವುಗಳಲ್ಲಿ ಒಂದನ್ನು ತೆಗೆದು ಹಾಕಿ .
ಮನೆಯಲ್ಲಿ ಎರಡು ಶಂಖಗಳು ಇದ್ದರೆ ಅಶುಭ ಅಂತ ಹೇಳಲಾಗುತ್ತೆ .

ಶಿವಲಿಂಗ

ಮನೆಯಲ್ಲಿ ಎತ್ತರವಿರುವ ವಿಗ್ರಹಗಳನ್ನು ಇಡಬಾರದು.ಒಂದು ವೇಳೆ ನಿಮ್ಮ ದೇವರ ಕೋಣೆಯಲ್ಲಿ ಶಿವಲಿಂಗ ಇಡಬೇಕಾದರೆ ಆ ಲಿಂಗನ ನಿಮ್ಮ ಹೆಬ್ಬರಿಳಿಗಿಂತ ಉದ್ದ ಇರಬಾರದು.ಶಿವಲಿಂಗವನ್ನು ತುಂಬಾ ಪವಿತ್ರ ಲಿಂಗ ಅಂತ ನಾವು ಭಾವಿಸುತ್ತೇವೆಆದ್ದರಿಂದ ಚಿಕ್ಕ ಲಿಂಗವನ್ನು ಮಾತ್ರ ಬಳಸುವುದೇ ತುಂಬಾ ಶುಭ ಅಂತ ಹೇಳಬಹುದು.

ಸತ್ತವರ ಫೋಟೋ ಯಾವುದೇ ಕಾರಣಕ್ಕೂ ಮನೆಯಲ್ಲಿ ಸತ್ತವರ ಫೋಟೋಗಳಿದ್ದರೆ ಕೂಡಲೇ ಮನೆಯ ದಕ್ಷಿಣ ಭಾಗದಲ್ಲಿ ಇಡಿ ಇವುಗಳನ್ನು ಯಾವುದೇ ಕಾರಣಕ್ಕೂ ದೇವರ ಫೋಟೋಗಳ ಹತ್ತಿರ ಅಥವಾ ದೇವರ ಮನೆಯಲ್ಲಿ ಇಡಬಾರದು .

ಮುರಿದ ದೇವರ ವಿಗ್ರಹ

ಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಮುರಿದು ಹೋಗಿರುವ ವಿಗ್ರಹಗಳಿಗೆ ಪೂಜೆಯನ್ನು ಮಾಡಬಾರದು.
ಮುರಿದಿರುವ ವಿಗ್ರಹಗಳು ಇದ್ದರೆ ಅವುಗಳನ್ನು ನದಿ, ಕೆರೆ ಅಥವಾ ನೀರು ಇರುವ ಜಾಗದಲ್ಲಿ ನೀರಿನ ಒಳಗೆ ಬಿಟ್ಟುಬಿಡಬೇಕು.

ಡ್ಯಾಮೇಜ್ ಆಗಿರುವಂತಹ ದೇವರ ಫೋಟೋಗಳು ಇದ್ದರೂ ಸಹ ಅವುಗಳನ್ನು ನಿಮ್ಮ ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಹೋಗಿ ಸರಿ ಮಾಡಿ ಕೊಟ್ಟು ಬಿಡಿ
ಇದು ತುಂಬಾ ಒಳ್ಳೆಯದು.

ಸ್ನೇಹಿತರೇ ಈ ಮಾಹಿತಿಯನ್ನು ಹಿಂದೂಗಳ ಶಾಸ್ತ್ರ ಮತ್ತು ವಾಸ್ತುಶಾಸ್ತ್ರದ ಪ್ರಕಾರ ತಿಳಿಸಲಾಗಿದೆ.

ಧನ್ಯವಾದಗಳು.

Leave a Reply

Your email address will not be published.