ಬರೀ ಹೊಟ್ಟೆಯ ಬೊಜ್ಜು ಹೀಗೆ ಕರಗಿಸಿಕೊಳ್ಳಿ !

Health & Fitness

ಹೊಟ್ಟೆಯ ಮೇಲಿರುವಂತಹ ಕೊಬ್ಬನ್ನು ಕರಗಿಸುವ ಸುಲಭ ವಿಧಾನ ಯಾವುದು ಎಂದು ತಿಳಿಯೋಣ ಬನ್ನಿ.ಯಾರಿಗೆ ಯಾವುದೇ ರೀತಿಯ ಪಥ್ಯ ಮಾಡದೆ , ಉಪವಾಸ ಮಾಡದೆ , ಔಷಧ ಬಳಸದೆ , ವ್ಯಾಯಾಮ ಮಾಡದೆ ,ಈಜಾಡದೆ ಇನ್ನೂ ಇತ್ಯಾದಿಗಳನ್ನು ಮಾಡಲು ಕಷ್ಟ ಸಾಧ್ಯವಾಗಿರುತ್ತದೆಯೋ ಅಂತವರು ಏನೇ ಮಾಡಿದರೂ ಹೊಟ್ಟೆಯ ಬೊಜ್ಜನ್ನು ಕರಗಿಸಲು ಆಗುವುದಿಲ್ಲ ಎಂದು ಕೊಂಡರೆ ಅದು ತಪ್ಪು ಏಕೆಂದರೆ ಅಂಥವರಿಗಾಗಿಯೇ ಇಲ್ಲಿ ಹೊಟ್ಟೆಯ ಬೊಜ್ಜನ್ನು ಕರಗಿಸುವ ಸುಲಭ ವಿಧಾನದ ಬಗ್ಗೆ ತಿಳಿಸಲಿದ್ದೇವೆ ಬನ್ನಿ.

ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಿಂಡಿ ಮತ್ತು ಊಟಕ್ಕೆ ಮುನ್ನ ಕಪಾಲಭತಿ ಅಂದರೆ ಬೆಂಕಿಯ ಉಸಿರನ್ನು ಮಾಡಿ.

ಅಂದರೆ ಉಸಿರನ್ನು ಹೊರಗೆ ಹಾಕುತ್ತಾ ಹೊಟ್ಟೆಯನ್ನು ಬೆನ್ನಿಗೆ ಹೊಡೆಯುವುದು.ತೀವ್ರಗತಿಯಲ್ಲೂ ಅಲ್ಲ , ಮಂದಗತಿಯಲ್ಲಿ ಅಲ್ಲ ಮದ್ಯ ಗತಿಯಲ್ಲಿ ಹೀಗೆ ಮಾಡಿ.1ನೇ ದಿನ 10 ಬಾರಿ ,2ನೇ ದಿನ ಇಪ್ಪತ್ತು ಬಾರಿ ,3ನೇ ದಿನ 30 ಬಾರಿ ಮತ್ತು4ನೇ ದಿನ 40 ಬಾರಿ ಕಪಾಲಭತಿಯನ್ನು ಮಾಡಿ. ಮುಖ್ಯವಾಗಿ40 ಕ್ಕಿಂತ ಹೆಚ್ಚಿಗೆ ಮಾಡಲು ಹೋಗಬೇಡಿ.

ಈ ರೀತಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಿಂಡಿ ಊಟಕ್ಕೆ ಮುನ್ನ ಮಾಡುವುದರಿಂದ ಹೊಟ್ಟೆಯ ಭಾಗದ ಕೊಬ್ಬು ಹಂತ ಹಂತವಾಗಿ ಕಡಿಮೆಯಾಗುತ್ತ ಕರಗುತ್ತಾ ಬರುತ್ತದೆ.ಗರ್ಭಿಣಿಯರನ್ನು ಹೊರತುಪಡಿಸಿ ಬೇರೆ ಎಲ್ಲಾ ಜನರು ಈ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು.ಬಿಪಿ ಇರುವಂಥವರು ಕಪಾಲಭತಿಯನ್ನು ವೇಗವಾಗಿ ಮಾಡಬೇಡಿ,

ಹರ್ನಿಯಾ ಸಮಸ್ಯೆ ಇರುವಂಥವರು ಕಪಾಲಭತಿಯನ್ನು ಮಾಡುವ ಸಾಹಸಕ್ಕೆ ಹೋಗಬೇಡಿ.ಈ ರೀತಿ ಕಪಾಲಭತಿಯನ್ನು ಮಾಡುವುದರಿಂದ ಯಾವುದೇ ರೀತಿಯ ಪಥ್ಯ ವಿಲ್ಲದೆ , ಔಷಧಗಳನ್ನು ಸೇವಿಸದೆ ಹಂತಹಂತವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಂಡು ಕರಗಿಸಬಹುದು.

ಧನ್ಯವಾದಗಳು.

Leave a Reply

Your email address will not be published.