ಗರ್ಭಾವಸ್ಥೆಯಲ್ಲಿ ತುಳಸಿ ಟಿ ಪ್ರಯೋಜನಗಳು!
ತುಳಸಿಯನ್ನು ಹೋಲಿ ಬೇಸಿಲ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ.ಸಿಹಿ ಮತ್ತು ಖಾರದ ಸುವಾಸನೆಯುಳ್ಳ ಲವಂಗಕ್ಕೆ ಹತ್ತಿರವಾಗಿರುವ ಮಿಂಟ್ ಕುಟುಂಬಕ್ಕೆ ಸೇರಿರುವ ಸಸ್ಯವಾಗಿದೆ.ತುಳಸಿ ಟಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಇದನ್ನು ಸೇವಿಸಿದರೆ ಬಹಳ ಒಳ್ಳೆಯದು.
ತನ್ನ ಮತ್ತು ಮಗುವಿನ ಆರೋಗ್ಯದ ಕುರಿತು ಹೆಚ್ಚಿನ ಮುತುವರ್ಜಿಯನ್ನು ಗರ್ಭಿಣಿಯರು ವಹಿಸ ಬೇಕಾಗುತ್ತದೆ.ಇನ್ನೂ ತಮ್ಮ ಮತ್ತು ತಮ್ಮ ಮಗುವಿನ ಆರೋಗ್ಯ ವನ್ನು ಸುಗಮವಾಗಿ ಕಾಪಾಡಿಕೊಳ್ಳಲು ಕೆಲವು ತಂಪಾದ ಪಾನೀಯಗಳನ್ನು ಮತ್ತು ಕೆಲವು ಆಹಾರಗಳನ್ನು ತ್ಯಜಿಸುವುದು ಗರ್ಭಿಣಿಯರಿಗೆ ಅತ್ಯಅಗತ್ಯ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಇನ್ನೂ ತಜ್ಞರು ಗರ್ಭಿಣಿಯರಿಗೆ ವಿಶೇಷವಾಗಿ ಶಿಫಾರಸು ಮಾಡಿರುವ ಪಾನೀಯವೆಂದರೆ ಅದೇ ತುಳಸಿ ಟೀ.ಇದಕ್ಕೆ ಮುಖ್ಯ ಕಾರಣ ಸೋಂಕುಗಳು ಮತ್ತು ಇತರ ಆರೋಗ್ಯ ಸಮಸ್ಯೆ ಗಳಿಂದ ನಿಮ್ಮ ಹೃದಯ ಮತ್ತು ಶ್ವಾಸಕೋಶ ಗಳನ್ನು ಸ್ವಚ್ಚವಾಗಿಡಲು ಹಾಗೂ ಆರೋಗ್ಯಕರವಾಗಿಡಲು ತುಳಸಿಯನ್ನು ಬಳಸಿದರೆ ಉತ್ತಮ ಲಾಭವನ್ನು ಪಡೆಯಬಹುದು.ತುಳಸಿಯಲ್ಲಿ ಡಿಟಾಕ್ಸಿಫಿಕೇಶನ್ ಹೇರಳವಾಗಿದೆ.
ಇನ್ನು ಗರ್ಭಿಣಿ ಸ್ತ್ರೀಯರು ತಮ್ಮ ಆಹಾರ ಕ್ರಮದಲ್ಲಿ ಕೆಫಿನ್ ಅಂಶವನ್ನು ಸಂಪೂರ್ಣವಾಗಿ ತ್ಯಜಿಸುವುದು ಬಹಳ ಉತ್ತಮ.ಇನ್ನೂ ತುಳಸಿಯಲ್ಲಿ ಕೆಫಿನ್ ಅಂಶ ಇಲ್ಲದಿರುವುದರಿಂದ ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಇದನ್ನು ಯಾವುದೇ ಅನುಮಾನವಿಲ್ಲದೆ ಸೇವಿಸಬಹುದಾಗಿದೆ.ಫ್ರೀ ರಾಡಿಕಲ್ಸ್ ನಿಂದ ಉಂಟಾಗುವ ರೋಗಗಳಿಂದ ದೇಹನ್ನು ಕಾಪಾಡುವ ಆಂಟಿ ಆಕ್ಸಿಡೆಂಟ್ ಗಳು ತುಳಸಿಯಲ್ಲಿ ಸಂಪೂರ್ಣವಾಗಿ ಇವೆ.
ಫ್ರೀ ರಾಡಿಕಲ್ಸ್ ಗಳನ್ನು ತಟಸ್ಥಗೊಳಿಸುತ್ತದೆ ಹಾಗೂ ಇದರಿಂದ ರೋಗದ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.ಗರ್ಭಾವಸ್ಥೆಯಲ್ಲಿ ಸಂದಿ ನೋವು ,ಸ್ನಾಯು ನೋವು , ಸ್ನಾಯುಗಳ ಸೆಳೆತ ಬಹಳ ಸಾಮಾನ್ಯವಾಗಿರುತ್ತದೆ ಆದರೆ ಇದಕ್ಕೆ ಭಯಪಡದೆ ಪ್ರತಿನಿತ್ಯ ತುಳಸಿ ಚಹಾವನ್ನು ಕುಡಿಯಿರಿ ಹಾಗೂ ಇದರಿಂದ ನಿಮ್ಮ ಮೂಳೆಗಳಿಗೆ ಮತ್ತು ಸ್ನಾಯುಗಳಿಗೆ ಬಲ ವನ್ನು ತುಳಸಿ ಚಹಾ ನೀಡುತ್ತದೆ.
ಇನ್ನೂ ಗರ್ಭಾವಸ್ಥೆಯು ಒತ್ತಡ ಪೂರ್ಣ ಸಮಯವಾಗಿರುತ್ತದೆ ಹಾಗಾಗಿ ಗರ್ಭಿಣಿ ಸ್ತ್ರೀಯರು ಆದಷ್ಟು ಒತ್ತಡ ನಿವಾರಿಸುವ ಕೆಲವು ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಮತ್ತು ಆಹಾರವನ್ನು ಸೇವಿಸಬೇಕು.
ಇನ್ನೂ ಒತ್ತಡ ನಿವಾರಣೆಗೆ ತುಳಸಿ ಚಹಾ ಕೂಡ 1 ಪ್ರಮುಖ ಗುಣವನ್ನು ಹೊಂದಿದೆ.
ಇನ್ನೂ ತುಳಸಿ ಚಹಾವನ್ನು ಸೇವಿಸುವುದರಿಂದ ದೇಹದಲ್ಲಿ ಖುಷಿ ಉತ್ಪಾದನೆಯಾಗುವ ಸೆರೋಟಿನಿನ್ ಹಾರ್ಮೋನ್ ಅನ್ನು ಆ್ಯಕ್ಟಿವೇಟ್ ಮಾಡಿ ಬಿಡುಗಡೆಗೊಳಿಸುತ್ತದೆ ಮತ್ತು ಮನಸ್ಸನ್ನು ಶಾಂತ ಮಾಡಿಸುವ ಪ್ರಕೃತಿಯನ್ನು ತುಳಸಿ ಚಹಾ ಹೊಂದಿರುತ್ತದೆ.
ಇನ್ನೂ ತುಳಸಿ ಚಹಾವನ್ನು ಮಾಡುವ ವಿಧಾನ :ಮೊದಲಿಗೆ 1 ಪಾತ್ರೆಗೆ 1 ಲೋಟ ನೀರು ಹಾಕಿ ಅದು ಬಿಸಿ ಆದ ಮೇಲೆ 15 ರಿಂದ 20 ತುಳಸಿ ಎಲೆಗಳನ್ನು ಹಾಕಿ ಪುನಃ 5 ರಿಂದ 10 ನಿಮಿಷಗಳ ಕಾಲ ಕುದಿಸಿ ನಂತರ ಲೋಟದಲ್ಲಿ ಸೋಸಿಕೊಂಡು ತುಳಸಿ ಚಹಾವನ್ನು ಕುಡಿಯಿರಿ.
ಇನ್ನೂ ಆಯುರ್ವೇದದ ಪ್ರಕಾರ ದಿನದಲ್ಲಿ ಯಾರು 2 ಬಾರಿ ತುಳಸಿ ಚಹವನ್ನು ಸೇವಿಸುತ್ತಾರೆಯೋ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ.
ಇನ್ನೂ ನಿಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ತುಳಸಿ ಚಹಾವನ್ನು ಸೇವಿಸುವುದು ಉತ್ತಮವೇ ಇಲ್ಲವೇ ಎಂದು ವೈದ್ಯರನ್ನು ಸಂಪರ್ಕಿಸಿ ತಿಳಿದು ನಂತರ ತುಳಸಿ ಚಹಾ ಸೇವಿಸಿ.
ಧನ್ಯವಾದಗಳು.