ಪಿತ್ತ ದೇಹದ ವ್ಯಾಧಿ ಕ್ಷಮತ್ವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮದ್ದು ಮನೆಯಲ್ಲಿಯೇ ಇದೆ!

0
3547

ವ್ಯಾಧಿಕ್ಷಮತ್ವ

ವ್ಯಾಧಿಕ್ಷಮತ್ವವನ್ನು ಮುಪ್ಪಿನ ನಂತರ ಗಳಿಸಬೇಕಾದರೆ ಏನು ಮಾಡಬೇಕು?ಸಮತೋಲನ ಆಹಾರವನ್ನು ಸೇವಿಸಬೇಕು.ಸಮತೋಲನ ಆಹಾರವೆಂದರೆ ಷಡ್ರಸ ಯುಕ್ತ ಆಹಾರ ಅಂದರೆ ನಮ್ಮ ಆಹಾರದಲ್ಲಿ 6 ರೀತಿಯ ರುಚಿಯಾದ ಆಹಾರ ವಿರಬೇಕು.ಮಧುರ , ಆಮ್ಲ , ಕಟು, ತಿಕ್ತ , ಕಷಾಚಿ , ಲವಣ (ಸಿಹಿ, ಹುಳಿ, ಉಪ್ಪು, ಖಾರ, ಒಗರು, ಕಹಿ) ಎನ್ನುವ ರುಚಿಗಳು ನಮ್ಮ ಆಹಾರದಲ್ಲಿ ಪ್ರತಿದಿನ ಇರಬೇಕು ನಮ್ಮ ಆಹಾರದಲ್ಲಿ ಸೇವಿಬೇಕು.

ಸಮತೋಲನವಾದ ಆಹಾರವನ್ನು ಸೇವಿಸುವುದರಿಂದ ವ್ಯಾಧಿಕ್ಷಮತ್ವ ವೃದ್ಧಿಯಾಗುತ್ತದೆ.ಸಮತೋಲನವಾದ ಆಹಾರ ಪದಾರ್ಥಗಳು ಯಾವುವು ಎಂದು ನೋಡುವುದಾದರೆ ಮೊದಲಿಗೆ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಷಡ್ರಸವಿದೆ ಎಲ್ಲಾ ರೀತಿಯ ರುಚಿಯೂ ನೆಲ್ಲಿಕಾಯಿಯಲ್ಲಿದೆ ಉಪ್ಪನ್ನು ಬಿಟ್ಟು
ಹಾಗಾಗಿ ಪ್ರತಿದಿನ ನೆಲ್ಲಿಕಾಯಿಯ ಉಪ್ಪಿನ ಕಾಯಿಯನ್ನು ತಿನ್ನುವುದರಿಂದ ವ್ಯಾಧಿ ಕ್ಷಮತ್ವ ವೃದ್ಧಿಸುತ್ತದೆ.

ಶ್ವಾಸಕೋಶಕ್ಕೆ ಸಂಬಂಧಪಟ್ಟ ವ್ಯಾಧಿಕ್ಷಮತ್ವವನ್ನು ವೃದ್ಧಿಗೊಳಿಸಲು ಯಾವ ಔಷಧವೂ ವನ್ನಾದರೂ ತೆಗೆದುಕೊಳ್ಳಿ ಆದರೆ ಅದರ ಜೊತೆಗೆ ಜೇನನ್ನು ಸೇರಿಸಿಕೊಂಡು ಸೇವಿಸಿ.ಜೇನು ಶ್ವಾಸಕೋಶ ವ್ಯಾಧಿಕ್ಷಮತ್ವಕ್ಕೆ 1ಉತ್ತಮ ಮದ್ದಾಗಿದೆ.ಶ್ವಾಸಕೋಶದ ಇನ್ಫೆಕ್ಷನ್ ಗೆ ಜೇನು ಉತ್ತಮ ಮನೆಮದ್ದಾಗಿದೆ.ದೇಹದ ಮೇಲಿನ ಭಾಗವನ್ನು ಕಫದ ಸ್ಥಾನ

ದೇಹದ ಮಧ್ಯಭಾಗ ಅಂದರೆ ಹೊಟ್ಟೆಯು ಪಿತ್ತ ಸ್ಥಾನವಾಗಿದೆ ದೇಹದ ಕೆಳಭಾಗವನ್ನು ವಾತಸ್ಥಾನ.ಯಾವುದೇ ರೀತಿಯ ಕಫಕ್ಕೆ ಸಂಬಂಧಪಟ್ಟ ತೊಂದರೆಗಳಿದ್ದರೂ ಯಾವುದೇ ಔಷಧಗಳ ಜೊತೆಗೆ ಜೇನನ್ನು ಬಳಸಿ.ಪಿತ್ತ ಸ್ಥಾನದಲ್ಲಿ ಅಗ್ನಿಯಿದೆ.ಅಗ್ನಿ ಇರುವುದು ಜಠರದಲ್ಲಿ ಅಂದರೆ ತಿಂದಂತಹಾ ಆಹಾರವನ್ನು ಪಚನಗೊಳಿಸಲು ಅಗ್ನಿ ಸರಿಯಾಗಿರಬೇಕು.

ಅಗ್ನಿ ಸ್ಥಾನದಲ್ಲಿ ಯಾವುದೇ ರೀತಿಯ ತೊಂದರೆ ಯಾದಾಗ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ .ಇನ್ನೂ ದೇಹದ ಯಾವುದೇ ತೊಂದರೆಗೆ ನೀವು ಸೇವಿಸುವ ಔಷಧವು ಹೊಟ್ಟೆಯಲ್ಲಿ ಅಗ್ನಿ ಸರಿಯಾಗಿದ್ದರೆ ಮಾತ್ರ ಸರಿಯಾಗಿ ಜೀರ್ಣವಾಗುತ್ತದೆ.ನಾವು ಕೆಲವೊಮ್ಮೆ ಮಾತ್ರೆ , ಮದ್ದುಗಳನ್ನು , ಔಷಧವನ್ನು ತೆಗೆದುಕೊಂಡಾಗ
ದೇಹದಲ್ಲಿ ಇದು ಸರಿಯಾಗಿ ಕೆಲಸ ಮಾಡಬಲ್ಲದು.

ಇನ್ನು ಹೊಟ್ಟೆಯ ಜಠರಾಗ್ನಿ ತಣ್ಣಗಾಗುತ್ತಾ ಹೋದಂತೆ ನಮ್ಮ ದೇಹಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ.ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳಿಗೆ ಔಷಧದ ಜೊತೆಗೆ ಹಸುವಿನ ಶುದ್ಧ ತುಪ್ಪದ ಜೊತೆಗೆ ಸೇವಿಸಿ.ಹೊಟ್ಟೆಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಪ್ಪ ಬಹಳ ಸಹಾಯ ಮಾಡುತ್ತದೆ ಹಾಗೂ ಹೊಟ್ಟೆಯ ತೊಂದರೆ ಗುಣಮುಖವಾಗುತ್ತದೆ.

ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸಿ ಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ವೀಡಿಯೊವನ್ನು ಸಂಪೂರ್ಣವಾಗಿ ನೋಡಿ.

ಧನ್ಯವಾದಗಳು.

LEAVE A REPLY

Please enter your comment!
Please enter your name here