ವೈರಸ್ ವಿರುದ್ಧ ಹೋರಾಡುವ ಕಷಾಯ!ದೇಹಕ್ಕೆ ತಂಪು ಶರೀರಕ್ಕೆ ಶಕ್ತಿ ಕೊಡುವ ಬೇರು!

Featured-Article

ಲಾವಂಚ ಬೇರು ಅಥವಾ ಮಡಿವಾಳ ಬೇರು

ಇದು 1 ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಬೇರಾಗಿದೆ.ಇದನ್ನು ಹಿಂದಿನ ಕಾಲದಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತಿತ್ತು.ಲಾವಂಚ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ ಹಾಗೂ ಇದು ವೈರಸ್ ನಿರೋಧಕ ಗುಣವನ್ನು ಹೊಂದಿದೆ ಹಾಗಾಗಿ ಅನೇಕ ತರಹದ ವೈರಸ್ ಗಳನ್ನು ಇದು ಕೊಲ್ಲುತ್ತದೆ.

ಇನ್ನು ನಮ್ಮ ದೇಹವನ್ನು ತಂಪಾಗಿಡಲು ಮುಖ್ಯವಾಗಿ ಈ ಬೇರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಇನ್ನೂ ಬೇಸಿಗೆ ಕಾಲದಲ್ಲಿ ನಮ್ಮ ದೇಹದ ದಣಿವನ್ನು ನೀಗಿಸಲು ಮತ್ತು ನಮ್ಮ ದೇಹವನ್ನು ತಂಪಾಗಿಡಲು ಈ ಲಾವಂಚದ ಬಳಕೆ ಉತ್ತಮ.

ಇನ್ನು ಈ ಲಾವಂಚದ ಕಷಾಯವನ್ನು ಸೇವಿಸುವುದರಿಂದ ದೇಹ ತಂಪಾಗುತ್ತದೆ, ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ, ಹೊಟ್ಟೆ ಉರಿ ನಿವಾರಣೆಯಾಗುತ್ತದೆ, ಕೆಲವು ರೀತಿಯ ಚರ್ಮ ಸಂಬಂಧಿತ ಸಮಸ್ಯೆಗಳು ದೂರಾಗುತ್ತದೆ.ಹೀಗೆ ಇನ್ನೂ ಹತ್ತು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಲಾವಂಚ ಬೇರಿನಲ್ಲಿ ನಾವು ಕಾಣಬಹುದಾಗಿದೆ.

ಲಾವಂಚ ಬೇರಿನ ಕಷಾಯ ಮಾಡಿಕೊಳ್ಳುವ ವಿಧಾನ :

ಈಗ ಮುಖ್ಯವಾಗಿ ಬೇಸಿಗೆಯಾಗಿರುವುದರಿಂದ ಲಾವಂಚ ಬೇರಿನ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ಕೆಲವೊಮ್ಮೆ ಕೆಲವು ಆಹಾರ ಪದಾರ್ಥಗಳಿಂದ ನಮ್ಮ ದೇಹ ಉಷ್ಣದಿಂದ ಕೂಡಿದಾಗ ಈ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ದೇಹ ತಂಪಾಗುತ್ತದೆ.ಅನೈಸರ್ಗಿಕವಾಗಿ ತಯಾರಾದ ತಂಪಾದ ಪಾನೀಯಗಳನ್ನು ಸೇವಿಸುವುದರಿಂದ ದೇಹಕ್ಕೆ ಎಷ್ಟು ಹಾನಿಕಾರವೋ ಅಷ್ಟೇ ಉತ್ತಮ ಒಳ್ಳೆಯ ಗುಣವನ್ನು ಈ ಲಾವಂಚ ಬೇರಿನ ಕಷಾಯ ಹೊಂದಿದೆ.

ಮೊದಲಿಗೆ 1 ಪಾತ್ರೆಗೆ 4 ಲೋಟ ನೀರಿಗೆ ಚಿಕ್ಕದಾಗಿ ಕಟ್ ಮಾಡಿಟ್ಟುಕೊಂಡಿರುವ ಲಾವಂಚದ ಬೇರನ್ನು ಹಾಕಿ ಸಣ್ಣ ಉರಿಯಲ್ಲಿ 1 ಲೋಟ ಆಗುವವರೆಗೆ ಕುದಿಸಿ ನಂತರ ಸೋಸಿಕೊಂಡು ಕುಡಿಯಿರಿ.

ಇನ್ನು ವಾರದಲ್ಲಿ 2 ರಿಂದ 3 ಬಾರಿ ಈ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ದೇಹ ತಂಪಾಗುತ್ತದೆ ಹಾಗೂ ಕೆಲವು ರೀತಿಯ ಜ್ವರಗಳನ್ನು ಗುಣಪಡಿಸುವಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡುತ್ತದೆ.

ಈ ಕಷಾಯವನ್ನು ಮಾಡಿ ಇಟ್ಟುಕೊಂಡು ಆಗಾಗ ಬಾಯಾರಿಕೆಯಾದಾಗ ಸೇವಿಸಬಹುದಾಗಿದೆ.

ಧನ್ಯವಾದಗಳು.

Leave a Reply

Your email address will not be published.