ಮದುವೆಯು ಎಲ್ಲರ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.ಇನ್ನೂ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಮದುವೆಯ ಸುಂದರ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ.ಇನ್ನು ಮುಖ್ಯವಾಗಿ ಚಾಣಕ್ಯ ನೀತಿ ಪ್ರಕಾರ ಯಾವ ರೀತಿಯ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ತಿಳಿಯೋಣ ಬನ್ನಿ..
ಮಹಿಳೆಯರ ಸೌಂದರ್ಯಕ್ಕಿಂತ ಗುಣಸ್ವಭಾವ ನಡೆವಳಿಕೆಗೆ ಹೆಚ್ಚು ಒತ್ತನ್ನು ನೀಡಬೇಕು
ಏಕೆಂದರೆ ಮಹಿಳೆಯ ಬಾಹ್ಯ ಸೌಂದರ್ಯಕ್ಕಿಂತ ಅವಳ ಆಂತರ್ಯ ಸೌಂದರ್ಯವೇ ಕೊನೆಯವರೆಗೂ ಉಳಿಯುವುದುಹಾಗಾಗಿ ಹುಡುಗರು ಯಾವುದೇ ಕಾರಣಕ್ಕೂ ಸುಂದರ ಹುಡುಗಿಯರ ಸೌಂದರ್ಯಕ್ಕೆ ಮರುಳಾಗಿ ಮೋಸ ಹೋಗಬೇಡಿ.
ಇನ್ನೂ ಯಾವ ಮಹಿಳೆ ಬುದ್ದಿಹೀನಳಾಗಿರುತ್ತಾಳೋ ಅಂಥವರನ್ನು ಮದುವೆಯಾಗಬಾರದು ಏಕೆಂದರೆ ನಮ್ಮ ಬಾಳ ಜ್ಯೋತಿಯನ್ನು ಬೆಳಗಿಸುವ ಹೆಣ್ಣು ಸದಾ ಬುದ್ಧಿವಂತಳಾಗಿರಬೇಕು ಹಾಗೂ ಹುಡುಗರ ಜೀವನವನ್ನು ಬೆಳಗಿಸಬೇಕು.
ಇನ್ನೂ ಯಾವ ಸ್ತ್ರೀ ಸುಂದರ ಮುಖವನ್ನು ಹೊಂದಿದ್ದು ಕಟೋರವಾದ ಹಠ ಸ್ವಭಾವದ ಗುಣವನ್ನು ಹೊಂದಿರುತ್ತಾಳೊ ಅಂಥವಳನ್ನು ಪುರುಷರು ಯಾವುದೇ ಕಾರಣಕ್ಕೂ ಮದುವೆಯಾಗಬಾರದು
ಏಕೆಂದರೆ ಇವರ ಕಠೋರ ಸ್ವಭಾವದಿಂದ ಗಂಡನಿಗೂ ಮೋಸ ಮಾಡಲು ಇವರು ಹಿಂದೇಟು ಹಾಕುವುದಿಲ್ಲ.
ಇನ್ನೂ ಯಾವ ಮಹಿಳೆ ಸುಳ್ಳು ಹೇಳುತ್ತಳೊ ಅಂಥವಳನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು ಏಕೆಂದರೆ ಮುಂದೆ ತನ್ನ ಗಂಡನಿಗೂ ಈಕೆ ಇದೇ ರೀತಿ ಸುಳ್ಳು ಹೇಳಿ ಮೋಸ ಮಾಡಬಹುದು.
ಇನ್ನೂ ಯಾವುದೇ ಕಾರಣಕ್ಕೂ ಸೌಂದರ್ಯಕ್ಕೆ ಮರುಳಾಗಿ ಸ್ವಭಾವ ಕೆಟ್ಟದಾಗಿರುವಂತಹ ಹುಡುಗಿಯರನ್ನು ಮದುವೆಯಾಗಬೇಡಿ.
ಮಹಿಳೆಯ ಕುಟುಂಬವು ಕೆಟ್ಟದಾಗಿದ್ದರೆ ಅಂತಹ ಪರಿವಾರದಿಂದ ಯಾವುದೇ ಕಾರಣಕ್ಕೂ ಮಹಿಳೆಯನ್ನು ಮದುವೆಯಾಗಬಾರದು ಏಕೆಂದರೆ ಕೆಟ್ಟ ಪರಿವಾರದಿಂದ ಬಂದಿರುವಂತಹ ಮಹಿಳೆಯರು ಸುಂದರ ಪರಿವಾರವನ್ನು ಹಾಳುಮಾಡ ಬಲ್ಲರು.
ಮೋಸ ಮಾಡುವ ಮಹಿಳೆಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು.
ಯಾವ ಮಹಿಳೆಗೆ ಮನೆಯ ಕೆಲಸದ ಬಗ್ಗೆ ಗೊತ್ತಿರುವುದಿಲ್ಲವೋ ಮತ್ತು ಮಾಡಲು ಬರುವುದಿಲ್ಲವೋ ಅಂತಹ ಮಹಿಳೆಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು.
ಧನ್ಯವಾದಗಳು.