ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಸಾಕಷ್ಟು ವಿಷಯಗಳನ್ನು ಬಿಚ್ಚಿಡುತ್ತೆ.ಒಬ್ಬ ವ್ಯಕ್ತಿಯ ಕೈಯಲ್ಲಿ ಸಾಕಷ್ಟು ರೇಖೆಗಳು ಇರುತ್ತೆ ನಮ್ಮ ಕೈಯಲ್ಲಿರುವ ಕೊನೆಯ ಬೆರಳು ನಮ್ಮ ಜೀವನದ ರಹಸ್ಯ ಹೇಳುತ್ತೆ ಅಂತ ತುಂಬಾ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ
ಅಂತಹ ರಹಸ್ಯದ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..
ಕೊನೆಯ ಬೆರಳು ಚಿಕ್ಕದಾಗಿದ್ದರೆ ,ನಮ್ಮ ಉಂಗುರ ಬೆರಳಿಗಿಂತ ಸುಪೀರಿಯರ್ ಗಂಟಿಗಿಂತ ಚಿಕ್ಕದಾದ ಎತ್ತರವಾದ ಕಿರುಬೆರಳು ಹೊಂದಿದ್ದರೆ -ನೀವು ಜನರ ಮಧ್ಯೆ ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ ಅಂತ ಹೇಳಲಾಗುತ್ತೆ ,ಜೊತೆಗೆ ನಿಮಗೆ ದೊಡ್ಡ ದೊಡ್ಡ ಕನಸುಗಳಿವೆ ,ಆಸೆಗಳು ಇರುತ್ತೆ ಅಂತ ಹೇಳಲಾಗುತ್ತೆ ,
ತುಂಬಾ ಅಂಜಿಕೆಯ ಸ್ವಭಾವದಿಂದ ಕೆಲವು ಅವಕಾಶಗಳಿಂದ ದೂರ ಉಳಿಯುವ ಸಾಧ್ಯತೆ ಜಾಸ್ತಿ ಇರುತ್ತಂತೆ ಆದರೆ ನೀವು ಅಂದುಕೊಂಡಿದ್ದನ್ನು ಸಾಧಿಸುವ ಛಲ ಇರುತ್ತೆ .
ಈವೆನ್ ಫಿನ್ಗರ್-ಅಂದ್ರೆ ನಿಮ್ಮ ಕಿರುಬೆರಳು ಉಂಗುರದ ಬೆರಳಿನ ಸುಪೀರಿಯರ್ ಗಂಟಿನಷ್ಟು ಇದ್ದರೆ –
ನಿಮ್ಮದು ಸಮತೋಲನದ ವ್ಯಕ್ತಿತ್ವ ಎನ್ನಲಾಗುತ್ತದೆ.ಬೇರೆಯವರು ನಿಮ್ಮನ್ನು ಕಿರಿಕಿರಿ ಮಾಡ್ಬೇಕು ಅಂದ್ರೆ ಅವರು ಹೆಚ್ಚು ಶ್ರಮ ಪಡಬೇಕಾಗುತ್ತದೆ.ಜೊತೆಗೆ ನೀವು ಬೇಗ ಒತ್ತಡಕ್ಕೆ ಬೀಳುವ ಅವಕಾಶ ಇರುವುದಿಲ್ಲ ನಿಮ್ಮ ಈ ನಡವಳಿಕೆಯಿಂದ ಜನರು ನಿಮ್ಮನ್ನು ತುಂಬಾ ಒಳ್ಳೆಯ ವ್ಯಕ್ತಿ ಅಂತ ಕರೀತಾರೆ ಆದರೆ ಜನರು ಅಂದು ಕೊಳ್ಳುವುದಕ್ಕಿಂತ ಹೆಚ್ಚಾದ ಉತ್ಸಾಹ ನಿಮ್ಮಲ್ಲಿ ಇರುತ್ತೆ.
ಉದ್ದವಾದ ಕಿರುಬೆರಳು ,ಕಿರುಬೆರಳು ಉದ್ದ ಬೆರಳಿನ ಸುಪಿರೀಯರ್ ಗಂಟಿಗಿಂತ ಎತ್ತರದಲ್ಲಿ ಇದ್ರೆ –
ನೀವು ತುಂಬಾ ಉತ್ಸಾಹದಿಂದ ಇರ್ತೀರಾ.ನಿಮಗೆ ಸಾಮಾಜಿಕವಾಗಿ ಹೆಚ್ಚಿನ ಗೌರವ ಸಿಗುತ್ತೆ.ಎಲ್ಲರ ಜೊತೆಗೆ ಬೆರೆತುಕೊಂಡು ಇರುವುದಕ್ಕೆ ಇಷ್ಟಪಡ್ತೀರಾ ಆದರೆ ಜನರು ನಿಮ್ಮನ್ನು ನಂಬಬೇಕು ಅಂದ್ರೆ ನೀವು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ.
ನಿಮ್ಮ ಕಿರುಬೆರಳು ಒಂದೇ ಎತ್ತರವನ್ನು ಹೊಂದಿದ್ದರೆ ,ಸಾಮಾನ್ಯವಾಗಿ ಕಿರುಬೆರಳು ಉಂಗುರದ ಬೆರಳಿಗಿಂತ ಚಿಕ್ಕದಾಗಿದ್ದರೆ -ಜನರು ನಿಮ್ಮನ್ನು ನಂಬುವಂತೆ ಮಾಡಲು ನೀವು ತುಂಬಾ ಕಷ್ಟಪಡಬೇಕಾಗುತ್ತದೆ.
ನಿಮ್ಮ ಕಿರು ಬೆರಳು ಉಂಗುರದ ಬೆರಳಿನಷ್ಟೇ ಉದ್ದವಿದ್ದರೆ -ನೀವು ತುಂಬಾ ಅಪರೂಪದ ವ್ಯಕ್ತಿತ್ವವನ್ನು ಹೊಂದಿರುತ್ತೀರಿ.ಇಂತಹ ವ್ಯಕ್ತಿಗಳು ಸ್ವಲ್ಪ ಶ್ರಮದ ಮೂಲಕ ಅತ್ಯುನ್ನತ ಹುದ್ದೆಯನ್ನು ಪಡೀತಾರೆ
ಅಷ್ಟೇ ಅಲ್ಲದೆ ಅದರಲ್ಲಿ ಯಶಸ್ಸು ಸಹ ಸಿಗುತ್ತೆ.
ಯಾರ ಕೈನ ಕೊನೆ ಬೆರಳು ಉಂಗುರದ ಬೆರಳಿನ ಉಗುರಿನ ವರೆಗೆ ಇರುತ್ತೋ ಅಂಥವರು ಭಾಗ್ಯಶಾಲಿ ಆಗ್ತಾರೆ ಅಂತ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತೆ.ಎಲ್ಲಾ ಬೆರಳುಗಳು ಸಾಮಾನ್ಯ ಉದ್ದಕ್ಕಿಂತ ಚಿಕ್ಕದಾಗಿದ್ದರೆ – ಅಂಥವರು ಆತುರದಲ್ಲಿ ಕೆಲಸ ಮಾಡ್ತಾರೆ ಅಂತ ಹೇಳಲಾಗುತ್ತೆ ಅಷ್ಟೇ ಅಲ್ಲದೆ ವ್ಯವಹಾರವೂ ಸಹ ತಾಳ್ಮೆ ಇಲ್ಲದೆ ಆತುರದಿಂದ ಮಾಡ್ತಾರಂತೆ.ನಿಮ್ಮ ಬೆರಳಿನ ಉದ್ದ ಸಾಮಾನ್ಯವಾಗಿ ಇದ್ದರೆ ಅವರು ಮನೆಯಲ್ಲಿ ಗೌರವಕ್ಕೆ ಪಾತ್ರರಾಗಿರ್ತಾರೆ ಅಷ್ಟೇ ಅಲ್ಲದೆ ಸಮಾಜದಲ್ಲಿ ಅಂತಹ ಅರ್ಹತೆಯ ಕೆಲಸಗಳನ್ನು ಮಾಡ್ತಾರೆ .
ಧನ್ಯವಾದಗಳು.