ಅಂಗೈ ರೇಖೆಗಳ ಹಿಂದಿರುವ ರಹಸ್ಯಗಳು!

Featured-Article

ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ನಮ್ಮ ಹಸ್ತದ ರೇಖೆಗಳನ್ನು ಗಮನಿಸಿ ನಮ್ಮ ಮುಂದಿನ ಜೀವನವನ್ನು ತಿಳಿದುಕೊಳ್ಳಬಹುದಾಗಿದೆ.ಇನ್ನೂ ಹಸ್ತದ ರೇಖೆಯಿಂದ ಕಂಕಣಭಾಗ್ಯ , ಸಂತಾನಭಾಗ್ಯ , ಜೀವನದಲ್ಲಿ ಯಶಸ್ಸು , ಆಯಸ್ಸು ವೃದ್ಧಿ , ಹಣದ ವಿಚಾರ , ಹಣೆಬರಹ ಹೇಗಿದೆ ಮತ್ತು ಇನ್ನಿತರ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ.ಇನ್ನೂ ಹಸ್ತ ಸಾಮುದ್ರಿಕಾ ಶಾಸ್ತ್ರವನ್ನು ನಮ್ಮ ಭಾರತ ದೇಶ ಮಾತ್ರವಲ್ಲದೆ ಟಿಬೇಟಿಯನ್, ಚೀನಾ , ಸುಮೇರಿಯಾ, ಬಾಬಿಲೋನಿಯ ಮತ್ತು ಇಸ್ರೇಲ್ ನಂತಹ ದೇಶಗಳಲ್ಲಿ ತಮ್ಮ ಮುಂದಿನ ಜೀವನದ ಭವಿಷ್ಯವನ್ನು ತಿಳಿದುಕೊಳ್ಳಲು ಬಳಸುತ್ತಾರೆ.ಇನ್ನೂ ಅಂಗೈ ನೋಡಿ ಶಾಸ್ತ್ರ ಹೇಳುವವರು ಮುಖ್ಯವಾಗಿ ಅಂಗೈಯೊಳಗೆ ಇರುವ 5 ರೇಖೆಗಳನ್ನು ಗಮನಿಸುತ್ತಾರೆ.

ಇನ್ನೂ ಆ 5 ಮುಖ್ಯವಾದ ರೇಖೆಗಳು ಯಾವುವು ಎಂದರೆ ಜೀವನ ರೇಖೆ , ಹೃದಯ ರೇಖೆ , ಆರೋಗ್ಯ ರೇಖೆ , ವಿಧಿ ರೇಖೆ ಮತ್ತು ತಲೆಯ ರೇಖೆ.ಈ 5 ರೇಖೆಗಳ ಆಧಾರದ ಮೇಲೆ ಒಬ್ಬ ಮನುಷ್ಯನ ಭವಿಷ್ಯವನ್ನು ಅಂದಾಜಿಸಿ ನಿರ್ಧರಿಸಲಾಗುತ್ತದೆ.ಇನ್ನೂ 2 ಅಂಗೈಗಳನ್ನು ಒಟ್ಟುಗೂಡಿಸಿ ನೋಡಿಕೊಂಡಾಗ 2 ಅಂಗೈನ ಹೃದಯ ರೇಖೆ ಕೂಡಿಕೊಂಡು ಅರ್ಧ ಚಂದ್ರಾಕಾರ ಮೂಡಿದರೆ ಏನು ಅರ್ಥ ಎಂದು ತಿಳಿಯೋಣ ಬನ್ನಿ

ಹೆಬ್ಬೆರಳನ್ನು ಬಿಟ್ಟು ಬೇರೆ ಬೆರಳುಗಳನ್ನು ಭೂಮಿ, ನೀರು, ಅಗ್ನಿ , ವಾಯುಗಳ ಸಂಕೇತವೆಂದು ಹೇಳಲಾಗುತ್ತದೆ.ಅಂಗೈಯಲ್ಲಿ ಕಿರುಬೆರಳಿನಿಂದ ತೋರುಬೆರಳಿನ ವರೆಗೆ ಇರುವ ರೇಖೆಯನ್ನು ಹೃದಯ ರೇಖೆ ಎಂದು ಕರೆಯಲಾಗುತ್ತದೆ ಇದನ್ನು ಪ್ರೀತಿಯ ರೇಖೆ ಎಂದು ಸಹ ಕರೆಯಲಾಗುತ್ತದೆ.

ಓರ್ವ ವ್ಯಕ್ತಿಯ ಭಾವನೆ ಶಾರೀರಿಕ ಸಂಬಂಧದ ಬಗ್ಗೆ ಈ ರೇಖೆ ತಿಳಿಸುತ್ತದೆ.ಇನ್ನು ಈ ಹೃದಯ ರೇಖೆಯನ್ನು ಎರಡೂ ಕೈಯನ್ನು ಜೋಡಿಸಿ ಹಿಡಿದುಕೊಂಡು ನೋಡಿದಾಗ ಕೆಲವರಿಗೆ 2 ರೇಖೆಗಳು ಒಂದೇ ರೀತಿ ಇರುತ್ತದೆ ಮತ್ತು ಇನ್ನು ಕೆಲವರಿಗೆ 1 ಕೈನ ರೇಖೆ ಗಿಂತ ಇನ್ನೊಂದು ಕೈನ ರೇಖೆ ಭಿನ್ನವಾಗಿರುತ್ತದೆ.ಇನ್ನೂ ಮುಖ್ಯವಾಗಿ ಎರಡೂ ಕೈಗಳನ್ನು ಜೋಡಿಸಿ ಹಿಡಿದುಕೊಂಡಾಗ ಕೆಲವರಿಗೆ ಹೃದಯ ರೇಖೆ ಕೂಡಿಕೊಂಡು ಅರ್ಧ ಚಂದ್ರಾಕಾರ ರೂಪಗೊಳ್ಳುತ್ತದೆ.ಕೆಲವರಿಗೆ ನೇರ ರೇಖೆ ಇನ್ನೂ ಕೆಲವರಿಗೆ ಅಸ್ತವ್ಯಸ್ತವಾಗಿ ಇರುತ್ತದೆಇನ್ನು ಈ ರೀತಿ ಹಿಡಿದುಕೊಂಡಾಗ ನೇರ ರೇಖೆ ಉಂಟಾದರೆ ಅವರು ಜೀವನದಲ್ಲಿ ಪ್ರಶಾಂತತೆಯನ್ನು ಬಯಸುತ್ತಾರೆ.ದಯೆ ಜಾಸ್ತಿ ಹಾಗೂ ಮೃದು ಸ್ವಭಾವದವರು ಆಗಿರುತ್ತಾರೆ.ನೇರ ರೇಖೆ ಹೊಂದಿದ್ದಲ್ಲಿ ಅಂಥವರು ಅರೇಂಜ್ಡ್ ಮ್ಯಾರೇಜ್ ಆಗುವುದು ಬಹುತೇಕ ಖಚಿತ.

ಇನ್ನೂ ಅಸ್ತವ್ಯಸ್ತ ಗೊಂಡ ರೇಖೆಯು ಅಂಥವರು ಅವರ ಜೀವನದಲ್ಲಿ ಬಹಳ ಏರಿಳಿತಗಳನ್ನು ಕಾಣಲಾಗುತ್ತದೆ.ಇವರಿಗೆ ಕ್ರಮ ಬದ್ಧವಾಗಿ ಬದುಕುವುದು ಇಷ್ಟವಾಗುವುದಿಲ್ಲ ಹಾಗಾಗಿ ಇವರು ಆನೆ ನಡೆದದ್ದೇ ದಾರಿ ಎಂಬಂತಹ ಸ್ವಭಾವದವರಾಗಿರುತ್ತಾರೆ.ಪ್ರತಿಯೊಬ್ಬರನ್ನು ಬಹಳ ಆತ್ಮೀಯತೆಯಿಂದ ಹೊಂದಿಕೊಳ್ಳುತ್ತಾರೆ.ಇನ್ನು ಇವರು ತಮಗಿಂತ ಹಿರಿಯ ವ್ಯಕ್ತಿಗಳನ್ನು ವರಿಸುತ್ತಾರೆ.

ಇನ್ನೂ ಬಹಳ ಮುಖ್ಯವಾಗಿ ವಿಶೇಷವಾಗಿ ಅರ್ಧ ಚಂದ್ರಾಕಾರ ಮೂಡಿದರೆ ಅಂಥವರ ಮನಸ್ಸು ಬಹಳ ದೃಢವಾಗಿರುತ್ತದೆ ಹಾಗೂ ಬಹಳ ಪ್ರೀತಿ ಪಾತ್ರರಾಗಿರುತ್ತಾರೆ.ಇನ್ನೂ ಬೇರೆಯವರಿಗೆ ಬಹಳ ಆತ್ಮೀಯತೆಯಿಂದ ಪ್ರೀತಿ ತೋರಿಸುತ್ತಾರೆ ಆದರೆ ಇತರರಿಂದ ಏನನ್ನೂ ಅಪೇಕ್ಷಿಸುವುದಿಲ್ಲ.ಇನ್ನು ಇವರು ಬಹಳ ಆಕರ್ಷಕ ವಾಗಿ ಕಾಣಿಸುತ್ತಾರೆ.ಇನ್ನೂ ಬಾಲ್ಯದ ಗೆಳೆಯ ಅಥವಾ ಗೆಳತಿಯೊಡನೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಧನ್ಯವಾದಗಳು.

Leave a Reply

Your email address will not be published.