ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಹುತ್ತ ಬೆಳೆದಿದ್ದರೆ ಅಥವಾ ಜೇನು ಇಟ್ಟಿದ್ದರೆ ಏನು ಅರ್ಥ ಎಂಬುದರ ಬಗ್ಗೆ ತಿಳಿಯೋಣ ಬನ್ನಿ..
ಕೆಲವೊಮ್ಮೆ ಆಕಸ್ಮಿಕವಾಗಿ ಮನೆಯ ಪಕ್ಕದಲ್ಲಿ ಹಾಗೂ ಒಮ್ಮೊಮ್ಮೆ ಮನೆಯ ಒಳಗೆ ಹುತ್ತ ಬೆಳೆಯುತ್ತದೆ ಹಾಗೂ ಅದೇ ರೀತಿ ಮನೆಯೊಳಗೆ ಕೆಲವೊಮ್ಮೆ ಜೇನು ಗೂಡನ್ನು ಕಟ್ಟುತ್ತದೆ.ಹೀಗೆ ಹುತ್ತ ಮತ್ತು ಜೇನು ಏನನ್ನು ಸೂಚಿಸುತ್ತದೆ ಎಂದು ಶಾಸ್ತ್ರದ ಪ್ರಕಾರ 8 ದಿಕ್ಕಿನ ಅನುಗುಣವಾಗಿ ತಿಳಿದುಕೊಳ್ಳಬೇಕು.ಇನ್ನು ಯಾವ ದಿಕ್ಕಿಗೆ ಯಾವ ಫಲ ಎಂದು ನೋಡುವುದಾದರೆ
ಮನೆಯ ಪೂರ್ವ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಅಥವಾ ಹುತ್ತ ಬೆಳೆದರೆ ಉತ್ತಮ ಲಾಭ.ಆಗ್ನೇಯ ಮೂಲೆಯಲ್ಲಿ ಜೇನುಗೂಡು ಕಟ್ಟಿದರೆ ಅಥವಾ ಹುತ್ತ ಬೆಳೆದರೆ ಆಪ್ತಸ್ನೇಹಿತರ ಆಗಮನ ಅಥವಾ ಸ್ನೇಹಿತರಿಂದ ನಮ್ಮ ಜೀವನಕ್ಕೆ ಅನುಕೂಲ ಆಗಬಹುದು ಎನ್ನುವ ಸೂಚನೆಯನ್ನು ನೀಡುತ್ತದೆ.
ದಕ್ಷಿಣ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಅಥವಾ ಹುತ್ತ ಬೆಳೆದರೆ ಮುಂಬರುವ ದಿನಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ ಎಂದು ಸೂಚಿಸುತ್ತದೆ.ನೈರುತ್ಯದಲ್ಲಿ ಜೇನುಗೂಡು ಕಟ್ಟಿದರೆ ಅಥವಾ ಹುತ್ತ ಬೆಳೆದರೆ ಅದು ದಾರಿದ್ರ್ಯವನ್ನು ಸೂಚಿಸುತ್ತದೆ.
ಜೀವನದಲ್ಲಿ ತಡೆದುಕೊಳ್ಳಲಾರದ ಕಷ್ಟ ಬಂದು ಯಶಸ್ಸು ಸಿಗದಂತಾಗುತ್ತದೆ ಎಂಬುದರ ಮುನ್ಸೂಚನೆಯಾಗಿರುತ್ತದೆ.ಪಶ್ಚಿಮ ದಿಕ್ಕಿನಲ್ಲಿ ಜೇನು ಕಟ್ಟಿದ್ದರೆ ಅಥವಾ ಹುತ್ತ ಬೆಳೆದರೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಮುನ್ಸೂಚನೆಯಾಗಿರುತ್ತದೆ ಅಥವಾ ಬಂಧುಗಳಿಗೆ ಲಾಭ ಎನ್ನುವುದನ್ನು ಸೂಚಿಸುತ್ತದೆ.ವಾಯುವ್ಯದಲ್ಲಿ ಜೇನುಗೂಡು ಕಟ್ಟಿದರೆ ಅಥವಾ ಹುತ್ತ ಬೆಳೆದರೆ ಅಂದುಕೊಂಡ ಕೆಲಸವೂ ಸುಗಮವಾಗಿ ನಡೆಯಲಿದೆ ಎಂಬುದರ ಸೂಚನೆ.
ಉತ್ತರ ದಿಕ್ಕಿನಲ್ಲಿ ಜೇನು ಕಟ್ಟಿದ್ದರೆ ಅಥವಾ ಹುತ್ತ ಬೆಳೆದರೆ ವಿಶೇಷವಾದ ದ್ರವ್ಯಲಾಭ ಪ್ರಾಪ್ತಿ.ಈಶಾನ್ಯ ದಿಕ್ಕಿನಲ್ಲಿ ಜೇನುಗೂಡು ಕಟ್ಟಿದರೆ ಅಥವಾ ಹುತ್ತ ಬೆಳೆದರೆ ಬಹಳ ಒಳ್ಳೆಯ ಲಾಭ ದೊರೆಯುತ್ತದೆ.
ಇನ್ನು ಮನೆಯ ಮಧ್ಯಭಾಗದಲ್ಲಿ ಜೇನುಗೂಡು ಕಟ್ಟಿದರೆ ಅಥವಾ ಹುತ್ತ ಬೆಳೆದರೆ ಸ್ತ್ರೀಯರಿಂದ ವಿಶೇಷವಾದ ದ್ರವ್ಯ ಲಾಭ ಉಂಟಾಗುತ್ತದೆ ಮತ್ತು ಅನುಕೂಲಕರವಾದ ಜೀವನ ನಿಮ್ಮದಾಗುತ್ತದೆ ಎಂಬುದರ ಸೂಚನೆ.
ಇನ್ನು ಜೇನುಗೂಡು ನೈರುತ್ಯ ದಿಕ್ಕಿನಲ್ಲಿ ಕಟ್ಟಿದರೆ ಅದಕ್ಕಿಂತ ಮಹಾ ಘೋರವಾದ ಅನಾಹುತದ ಸೂಚನೆ ಯಾಗಿರುತ್ತದೆ.
ಧನ್ಯವಾದಗಳು.