ಮೂಲಂಗಿ ಈ 14 ಲಾಭಗಳನ್ನು ಕೇಳಿದರೆ ನೀವು ಈಗಲೇ ತಿನ್ನಲು ಶುರು ಮಾಡುತ್ತೀರಾ!
ಮನುಷ್ಯನಿಗೆ ತರಕಾರಿ ಹಾಗೂ ಹಣ್ಣುಗಳಿಂದ ಪೋಷಕಾಂಶಗಳು ಸಿಗುತ್ತದೆ. ಮೂಲಂಗಿಯನ್ನು ನಾನಾರೀತಿಯ ಆಹಾರದಲ್ಲಿ ಸೇರಿಸಿ ಸೇವನೆ ಮಾಡಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿರು ತರಕಾರಿಯನ್ನು ತಿಂದರೆ ರುಚಿಯಾಗಿರುತ್ತದೆ.
1, ಹಸಿರು ಮೂಲಂಗಿಯನ್ನು ತುರಿದು ಮತ್ತು ನಿಂಬೆರಸ ಸೇರಿಸಿ ಸೇವಿಸಿದರೆ ನೆಗಡಿ ನಿವಾರಣೆಯಾಗುತ್ತದೆ.
2,ಮೂಲಂಗಿ ಬೀಜವನ್ನು ತುರಿದು ಹಚ್ಚಿಕೊಳ್ಳುವುದರಿಂದ ಹುಳಕಡ್ಡಿ, ತುರಿ ಸಮಸ್ಯೆಗಳು ನಿವಾರಣೆಯಾಗುತ್ತದೆ.
3, ಹಸಿ ಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು ಮೂಗು, ಕಿವಿ ಮತ್ತು ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ.
4, ಚೇಳು ಕಚ್ಚಿದ ಭಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚುವುದರಿಂದ ವಿಷ ದೇಹಕ್ಕೆ ಸೇರುವುದಿಲ್ಲ ಮತ್ತು ಉರಿ ಕಡಿಮೆಯಾಗುತ್ತದೆ.
5, ಹಸಿ ಮೂಲಂಗಿ,ಕಾಳುಮೆಣಸು,ನಿಂಬೆ ರಸ,ಉಪ್ಪು ಬೆರೆಸಿ ಸೇವಿಸುವುದರಿಂದ ಕಾಮಾಲೆ ರೋಗ ಮತ್ತು ಕಣ್ಣಿನ ತೊಂದರೆ, ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ.
6, ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವು ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.
7, ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
8, ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಮಿನ್-ಸಿ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
9, ಮೂಲಂಗಿ ಸೇವನೆಯಿಂದ ಕ್ಯಾನ್ಸರ್ ರೋಗ ಬರುವುದನ್ನು ತಡೆಗಟ್ಟುತ್ತದೆ.
10, ಮೂಲಂಗಿ ಸೇವಿಸಿದರೆ ಬೇಗ ಹಸಿವು ಕೂಡ ಆಗುವುದಿಲ್ಲ. ಆದ್ದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳುವುಕ್ಕೆ ಸಹಾಯ ಮಾಡುತ್ತದೆ.
11,ಇನ್ನು ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ತುಂಬಾ ಒಳ್ಳೆಯದು.
12, ಮೂತ್ರಕೋಶ,ಮೂತ್ರಪಿಂಡವನ್ನು ಶುಚೀಕರಿಸಲು ಸಹಾಯಮಾಡುತ್ತದೆ.
13, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
14, ಅಸ್ತಮಾ, ಉಸಿರಾಟದ ತೊಂದರೆ ಇರುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.