ಈ ಆಹಾರಗಳನ್ನು ತಿನ್ನುವುದನ್ನು ಬಿಟ್ಟರೆ ಬೊಜ್ಜು ,ತೂಕ ಕರಗುವುದಿಲ್ಲ!
ಈಗಿನ ಜನ ಸಾಮಾನ್ಯರಲ್ಲಿ ಬೊಜ್ಜು ಹೆಚ್ಚಾಗುತ್ತಿರುವುದು ಮತ್ತು ತೂಕ ಹೆಚ್ಚಾಗಿರುವುದು 1 ಪ್ರಮುಖ ಸಮಸ್ಯೆಯಾಗಿದೆ.ಇನ್ನೂ ಇಂತಹ ಬೊಜ್ಜನ್ನು ನಿವಾರಣೆ ಮಾಡುವಂಥಹ ಪರಿಣಾಮಕಾರಿಯಾದ ಸುಲಭವಾದ ವಿಧಾನಗಳನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಇನ್ನೂ ಕೆಟ್ಟ ಕೊಬ್ಬನ್ನು ಒಳ್ಳೆಯ ಕೊಬ್ಬಿನ ಮೂಲಕ ತೆಗೆಯಬೇಕು.ಹಾಗಾಗಿ ಹಾಲು ,ಮೊಸರು ,ಬೆಣ್ಣೆ ,ತುಪ್ಪ ,ಎಣ್ಣೆ ,ತೆಂಗಿನಕಾಯಿ ,ಅನ್ನ ,ಎಣ್ಣೆ ಇತ್ಯಾದಿಗಳನ್ನು ಬಿಟ್ಟು ಇನ್ನೂ ಕೊಬ್ಬನ್ನು ಬಿಟ್ಟರೆ ಕೊಬ್ಬು ಕಡಿಮೆಯಾಗುತ್ತದೆಚಪಾತಿ,ರೊಟ್ಟಿ ತಿಂದರೆ ಬೊಜ್ಜು ನಿವಾರಣೆಯಾಗುತ್ತದೆ ಎಂಬುದು ಶುದ್ಧ ಸುಳ್ಳು.
ಇನ್ನೂ ವೈಜ್ಞಾನಿಕವಾಗಿ ನಾವು ತೂಕ ಕಡಿಮೆ ಮಾಡಿಕೊಳ್ಳಲು ಯಾವ ತರಹದ ಪೋಷಕಾಂಶಗಳುಳ್ಳ ಆಹಾರಗಳನ್ನು ಸೇವಿಸಬೇಕು ಎಂದು ನೋಡುವುದಾದರೆ.ನಮ್ಮ ದೇಹದ ತೂಕವನ್ನು ಮುಖ್ಯವಾಗಿ ಕಡಿಮೆ ಮಾಡಿಕೊಳ್ಳಲು ಬೇಕಾಗಿರುವುದು ಹೆಚ್ಚು ಕೊಬ್ಬು.
ಉದಾಹರಣೆಗೆ ಮಕ್ಕಳ ಬೇಬಿ ಸಿರೆಲ್,ಅದರಲ್ಲಿ ಎಲ್ಲಾ ರೀತಿಯ ಪೋಷಾಕಾಂಶಗಳು ಇದೆ ಹಾಗಾಗಿ ಮಕ್ಕಳಿಗೆ 3 ತಿಂಗಳಿನಿಂದ ಕೊಡಲು ಪ್ರಾರಂಭ ಮಾಡುತ್ತಾರೆ.ಇನ್ನು ಅದೇಇನ್ನು ತಾಯಿಯ ಹಾಲನ್ನು ಕುಡಿಯುತ್ತಿರುವಾಗ ಯಾವುದೇ ಮಕ್ಕಳಿಗೆ ಬೊಜ್ಜು ಶೇಖರಣೆಯಾಗುವುದಿಲ್ಲ.ಯಾವಾಗ ರೆಡಿಮೇಡ್ ಆಹಾರದ ಮೇಲೆ ಅವಲಂಬಿತವಾಗುತ್ತದೆಯೋ ಆಗ ಮಕ್ಕಳ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದು ಶುರುವಾಗುತ್ತದೆ.
ಏಕೆಂದರೆ ಮಕ್ಕಳ ಆಹಾರದಲ್ಲಿ ಕಾರ್ಬೋಹೈಡ್ರೇಟ್ 90 % ,ಫ್ಯಾಟ್ 5% ಮತ್ತು ಪ್ರೋಟಿನ್ 5% ಇದೆ.ತಾಯಿಯ ಎದೆ ಹಾಲಿನಲ್ಲಿ ಕಾರ್ಬೋಹೈಡ್ರೇಟ್ 38% , ಫ್ಯಾಟ್ 55% ಮತ್ತು ಪ್ರೋಟಿನ್ 7% ಇದೆ.ಹಾಗಾಗಿ ಹೆಚ್ಚು ಕೊಬ್ಬು ಇರುವಂತಹ ಆಹಾರವನ್ನು ಸೇವಿಸುವುದರಿಂದ ಕೊಬ್ಬನ್ನು ನಿವಾರಣೆ ಮಾಡಿಕೊಳ್ಳಬಹುದು.
ಇನ್ನೂ ನಿಸರ್ಗಮನೆ ಒಬೆಸಿಟಿ ಕ್ಲಬ್ ನಲ್ಲಿ ಯಾವ ರೀತಿ ಆಹಾರ ಕ್ರಮಗಳನ್ನು ನೀಡುತ್ತಾರೆ ಎಂದು ನೋಡುವುದಾದರೆಆಹಾರದಲ್ಲಿನ ಕಾರ್ಬೊಹೈಡ್ರೇಟ್ ಅಂಶವನ್ನು ಪೂರ್ತಿ ಕಡಿಮೆ ಮಾಡಿ ಪ್ರೋಟೀನನ್ನು ಸ್ವಲ್ಪ ಹೆಚ್ಚು ಮಾಡಿ ಮತ್ತು ಒಳ್ಳೆಯ ಕೊಬ್ಬನ್ನು ಹೆಚ್ಚು ಮಾಡಲಾಗುತ್ತದೆ.
ಧನ್ಯವಾದಗಳು.