ಮುಂಜಾನೆ ಎದ್ದು ಈ ಕೆಲಸ ತಪ್ಪದೇ ಮಾಡಿ, ಮನೆಯೊಳಗೆ ಲಕ್ಷ್ಮೀ ಆಗಮನದ ಜೊತೆಗೆ ಸುಖ ಶಾಂತಿ ನೆಲೆಸುತ್ತದೆ.
ಮನೆ ಪ್ರತಿಯೊಬ್ಬರಿಗೂ ಆಶ್ರಯವನ್ನು ನೀಡಿರುವ ತಾಣ. ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿ ಎನ್ನುವುದು ಇದ್ದಾಗ ಅದು ನಂದನ ವನ ದಂತೆ ಗೋಚರಿಸುತ್ತದೆ. ಮನೆಯಲ್ಲಿ ಇರುವವರಿಗೆ ಮನಸ್ಸಿನ ಶಾಂತಿ ನೆಮ್ಮದಿ ಅತ್ಯಗತ್ಯ. ಮನೆಯಲ್ಲಿ ಒಂದು ಸಕಾರಾತ್ಮಕ ಶಕ್ತಿಯ ಸಂಚಾರವಿರಬೇಕಾದುದು ಬಹಳ ಅತ್ಯಗತ್ಯವಾಗಿದೆ. ಅನೇಕ ಸಂದರ್ಭಗಳಲ್ಲಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳಿಂದಾಗಿ ಆ ಮನೆಯಲ್ಲಿ ವಾಸ ಮಾಡುವವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಸಂಕಷ್ಟದ ಜೀವನವನ್ನು ನಡೆಸುವುದನ್ನು ನಾವು ಗಮನಿಸಬಹುದು.
ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಸಕಾರಾತ್ಮಕತೆ ಇಲ್ಲ ಎಂದಾಗ ಹೊರಗೆ ಸಹಾ ಮನಸ್ಸನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಸಾಧ್ಯವಾಗಿ ಬಿಡುತ್ತದೆ. ಇದರಿಂದ ಆರ್ಥಿಕವಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಆದ್ದರಿಂದಲೇ ಮೊದಲು ಮನೆಯು ಸಂತೋಷದಿಂದ ಕೂಡಿರಬೇಕು, ಮನೆಯಲ್ಲಿ ಒಂದು ಸಕಾರಾತ್ಮಕ ಶಕ್ತಿಯ ಸಂಚಾರವಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಸಕಾರಾತ್ಮಕ ಶಕ್ತಿಯ ಸಂಚಾರಕ್ಕೆ ಕೆಲವು ಮಾರ್ಗಗಳನ್ನು ತಿಳಿಸಲಾಗಿದೆ.
ವಾಸ್ತು ಶಾಸ್ತ್ರ ದಲ್ಲಿ ತಿಳಿಸಿರುವ ಆ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರವಾಗುವುದು ಮಾತ್ರವೇ ಅಲ್ಲದೇ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ದೂರಾಗುತ್ತವೆ. ಹಾಗಾದರೆ ಯಾವುವು ಆ ವಿಧಾನಗಳು, ಯಾವ ಮಾರ್ಗದ ಮೂಲಕ ನಾವು ಸಕಾರಾತ್ಮಕ ಶಕ್ತಿಯನ್ನು ಸಂಚಯನ ಮಾಡಬಹುದು ಎನ್ನುವುದರ ಕಡೆಗೆ ನಾವು ಗಮನವನ್ನು ನೀಡೋಣ. ಈ ಮಾರ್ಗ ಅನುಸರಿಸಿದರೆ ಸಕಾರಾತ್ಮಕ ಶಕ್ತಿ ಸಂಚಯನದ ಜೊತೆಗೆ, ಮಹಾ ಲಕ್ಷ್ಮೀ ಕೂಡಾ ಒಲಿದು ಬರುವಳು.
ವಾಸ್ತುವಿನ ಪ್ರಕಾರ ಮನೆಯೊಳಗೆ ಸಕಾರಾತ್ಮಕ ಶಕ್ತಿಗಳು ಮನೆಯ ಮುಖ್ಯ ದ್ವಾರದ ಮೂಲಕ ಪ್ರವೇಶ ಮಾಡುತ್ತದೆ ಎನ್ನಲಾಗಿದೆ. ಆದ್ದರಿಂದಲೇ ಪ್ರತಿದಿನ ಮುಂಜಾನೆ ಬೇಗನೇ ಎದ್ದು ಮನೆಯ ಮುಖ್ಯದ್ವಾರದ
ಮುಂದೆ ಬಹಳ ಅಚ್ಚುಕಟ್ಟಾಗಿ ಕಸವನ್ನು ಗುಡಿಸಿ ಸ್ವಚ್ಚವಾಗಿಡಬೇಕು. ಈ ಕೆಲಸವು ಪ್ರತಿದಿನವೂ ಸಹಾ ನಡೆಯಬೇಕು ಹಾಗೂ ಮರೆಯದೇ ಪ್ರತಿದಿನ ಕಸ ಗುಡಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
ಕಸ ಗುಡಿಸಿದ ನಂತರ ದ್ವಾರದ ಎರಡೂ ಬದಿಯಲ್ಲಿ ನೀರಿನಿಂದ ಸ್ವಚ್ಚ ಮಾಡಬೇಕು. ಹೀಗೆ ನೀರಿನಿಂದ ಶುದ್ಧ ಮಾಡುವುದರಿಂದ ಮನೆಯೊಳಕ್ಕೆ ಸಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುತ್ತದೆ ಎಂದು ಹೇಳಲಾಗಿದೆ. ಈ ವಿಧಾನಗಳು ಬಹಳ ಸರಳವಾಗಿದ್ದು, ಈ ಸರಳ ವಿಧಾನಗಳ ಮೂಲಕವೇ ನಾವು ಮನೆಯೊಳಗೆ ಒಂದು ಸಕಾರಾತ್ಮಕತೆ ತರಲು ಸಾಧ್ಯವಿದೆ.