Latest Breaking News

ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗೆ ಭೀಷ್ಮ ಪಿತಾಮಹ ನೀಡಿದ ಅತ್ಯಮೂಲ್ಯ ಸಲಹೆಗಳು

0 23

Get real time updates directly on you device, subscribe now.

ಮಹಾಭಾರತ ಎನ್ನುವುದು ಕುರುಕ್ಷೇತ್ರ ಯು ದ್ಧ ದಿಂದ ಮಾತ್ರವೇ ಹೆಸರು ವಾಸಿಯಲ್ಲ. ಈ ಮಹಾಕಾವ್ಯವು ಮಾನವ ಕುಲಕ್ಕೆ ಮೌಲ್ಯಗಳ ಪಾಠವನ್ನು ಹೇಳುತ್ತಿದೆ. ಮಹಾಭಾರತ ಕಥೆಯಲ್ಲಿ ಕುರುವಂಶದ ಹಿರಿಯನಾದ ಮಹಾಮಹಿಮ ಭೀಷ್ಮನ ತ್ಯಾಗದ ಕಥೆಯನ್ನು ನಾವೆಂದಿಗೂ ಸಹಾ ಮರೆಯಲಾಗದು. ಭೀಷ್ಮ ಪಿತಾಮಹನ ಜೀವನವೇ ಒಂದು ಯಾಗ ಎನ್ನುವುದನ್ನು ನಿರಾಕರಿಸಲಾಗದು. ಧರ್ಮದ ಹಾದಿಯಲ್ಲಿ, ಕೊಟ್ಟ ಮಾತಿಗೆ ತಕ್ಕ ಹಾಗೆ ನಡೆದ ಭೀಷ್ಮ ಪಿತಾಮಹನು ಶಿಖಂಡಿಯ ಆಗಮನದೊಂದಿಗೆ ಕುರುಕ್ಷೇತ್ರ ಸಂಗ್ರಾಮದಲ್ಲಿ ಹತ್ತನೇ ದಿನದ ಹೋ ರಾಟ ದಲ್ಲಿ ಶರಶಯ್ಯೆಯ ಮೇಲೆ ಮಲಗುತ್ತಾನೆ. ಆ ಸಂದರ್ಭದಲ್ಲಿ ಆರೋಗ್ಯ ಹಾಗೂ ಆಯಸ್ಸಿಗೆ ಸಂಬಂಧಿಸಿದಂತೆ ಭೀಷ್ಮ ಪಿತಾಮಹನು ಹೇಳಿದ ಅಮೂಲ್ಯ ಮಾತುಗಳಿವು.

ಇವುಗಳನ್ನು ಅತ್ಯುತ್ತಮ ಸಲಹೆಗಳಾಗಿಯೂ ನಾವು ಸ್ವೀಕರಿಸಬಹುದಾಗಿದೆ. ಹಾಗಾದರೆ ಯಾವುವು ಆ ಅಮೂಲ್ಯವಾದ ಮಾತುಗಳು ಎಂದು ತಿಳಿಯೋಣ ಬನ್ನಿ‌.

ನಾವು ಸದಾ ನಮ್ಮ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮನಸ್ಸು ಬಯಸಿದ್ದನ್ನೆಲ್ಲಾ ತಿನ್ನುತ್ತಾ ಹೋದರೆ ನಮ್ಮ ಆರೋಗ್ಯ ಹಾಳಾಗುವುದು ಮಾತ್ರವೇ ಅಲ್ಲದೇ ಆಯುಷ್ಯ ಕ್ಷೀಣವಾಗುವುದು.

ನಾವು ಎಂದೂ ಸಹಾ ಮಿಥ್ಯವನ್ನು ನುಡಿಯಬಾದರು. ನುಡಿಯುವ ಒಂದು ಮಿಥ್ಯವೂ ಸಹಾ ಇತರರ ಪ್ರಾಣಕ್ಕೆ ಸಂಚಕಾರವಾಗಬಹುದು.

ಲೌಕಿಕ ವಿಷಯಗಳ ಕಡೆಗೆ ಹೆಚ್ಚಾಗುವ ಆಸೆಗಳಿಗೆ ಕಡಿವಾಣ ಹಾಕಬೇಕು. ನಮಗೆ ಆಸೆ ಇರಬೇಕು ಆದರೆ ಅದೇ ವೇಳೆ ಅತಿಯಾಸೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕಟುವಾದ ಮಾತುಗಳನ್ನು ಕೇಳುವ ಸಂದರ್ಭ ಬಂದಾಗ, ಅದನ್ನು ಕೇಳಿದ ನಂತರ ತಿರುಗಿ ಮಾತನಾಡಬಾರದು. ಏಕೆಂದರೆ ಯಾರು ಕಹಿಯಾದ ಅಥವಾ ಕಟುವಾದ ಮಾತುಗಳನ್ನು ನುಡಿಯುತ್ತಾರೋ ಅವರು ಎಂದಿಗೂ ಒಳ್ಳೆಯ ವ್ಯಕ್ತಿಯಾಗಿರುವುದಿಲ್ಲ. ಅವರಿಂದ ನಿಮ್ಮ ಜೀವಕ್ಕೆ ಅಪಾಯ ಒದಗಲೂಬಹುದು.

ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ. ಮನಸ್ಸಿಗೆ ಎಷ್ಟೇ ನೋವಾದರೂ ಸಹಿಸಿಕೊಂಡು ಶಾಂತವಾಗಿರಲು ಮತ್ತು ತಾಳ್ಮೆಯಿಂದ ಇರುವುದನ್ನು ಕಲಿಯಬೇಕು.

ಅತಿಥಿಗಳಿಗೆ, ಅಸಾಹಯಕರಿಗೆ ಮತ್ತು ನಿರಾಶ್ರಿತರಿಗೆ ಆಶ್ರಯ ನೀಡುವುದು.

ಧರ್ಮನಿಂದನೆ ಮಾಡಬೇಡಿ ಹಾಗೂ ಅಂತಹ ನಿಂದನೆಯಿಂದ ದೂರವಾಗಿಯೇ ಇರಿ.

ನಿಯಮಿತವಾಗಿ ಧರ್ಮಗ್ರಂಥಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅವುಗಳನ್ನು ಕೇಳುವುದು ಸಹಾ ಒಂದು ಉತ್ತಮವಾದ ಕಾರ್ಯ.

ಹಗಲಿನ ವೇಳೆಯಲ್ಲಿ ಎಂದೂ ಮಲಗಬೇಡಿ.

ನೀವು ಇತರರಿಂದ ಗೌರವವನ್ನು ಬಯಸಬೇಡಿ ಆದರೆ ನೀವು ಎಲ್ಲರನ್ನು ಗೌರವಿಸುವುದನ್ನು ಮರೆಯಬೇಡಿ.

ಕೋಪಕ್ಕೆ ಒಳಗಾಗಬೇಡಿ. ಕೊನೆಯದಾಗಿ ರುಚಿಗಾಗಿ ತಿನ್ನದೇ ನಿಮ್ಮ ಉತ್ತಮ ಆರೋಗ್ಯ ಕ್ಕಾಗಿ ತಿನ್ನುವುದನ್ನು ಕಲಿಯಿರಿ.

ಪಿತಾಮಹ ಭೀಷ್ಮ ನುಡಿದಂತಹ ಈ ಒಂದೊಂದು ಮಾತು ಸಹಾ ಪ್ರಸ್ತುತ ಜೀವನದಲ್ಲಿ ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ಮಾರ್ಗಸೂಚಿಗಳಾಗಿವೆ ಎಂಬುದು ಅಕ್ಷರಶಃ ಸತ್ಯವಾಗಿದೆ.

Get real time updates directly on you device, subscribe now.

Leave a comment