ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ದಿನವೇ ಚಕ್ರವರ್ತಿ ಚಂದ್ರಚೂಡ್ ಗೆ ಶಾ ಕ್ ಕೊಟ್ಟ ವೈಷ್ಣವಿ ಗೌಡ
ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಈಗಾಗಲೇ ಆರಂಭವಾಗಿದೆ. ನಿನ್ನೆ ಸಂಜೆಯಿಂದಲೇ ಬಿಗ್ ಬಾಸ್ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಬಿಗ್ ಬಾಸ್ ಬಂದಾಗಿದೆ. ಬಿಗ್ ಬಾಸ್ ನ ಸೆಕೆಂಡ್ ಇನ್ನಿಂಗ್ಸ್ ಆರಂಭವಾದ ಮೊದಲ ದಿನವೇ ಮನೆಯೊಳಗೆ ಕಾಲಿಟ್ಟಂತಹ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬಹಳ ಅನಿರೀಕ್ಷಿತವಾದ ಅನುಭವ ಆಗಿದೆ.
ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೊಮ್ಮೆ ಬಂದಿದ್ದು, ಸ್ಪರ್ಧೆ ನಿಲ್ಲುವಾಗ ಇದ್ದ 12 ಜನ ಸದಸ್ಯರೊಂದಿಗೆ ಆಟ ಮುಂದುವರೆದಿದೆ. ಇನ್ನು ಮೊದಲ ದಿನವೇ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿತ್ತು. ಅದು ನೇರವಾಗಿ ನಾಮಿನೇಟ್ ಮಾಡುವಂತಹ ಪ್ರಕ್ರಿಯೆ ಆಗಿತ್ತು. ಈ ವೇಳೆ ಬಹಳಷ್ಟು ಜನ ಚಕ್ರವರ್ತಿ ಚಂದ್ರಚೂಡ್ ಅವರಿಗೆ ನೇರವಾಗಿ ಕೆಲವು ವಿಷಯಗಳನ್ನು ಹೇಳಿ ನಾಮಿನೇಟ್ ಮಾಡಿದ್ದಾರೆ.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳು ತಾವು ನಾಮಿನೇಟ್ ಮಾಡುವ ಸದಸ್ಯರ ಹೆಸರನ್ನು ಸೂಚಿಸುವ ಜೊತೆಗೆ ಕಾರಣವನ್ನು ಹೇಳಿ, ನಾಮಿನೇಟ್ ಮಾಡುತ್ತಿರುವ ಸ್ಪರ್ಧಿಯ ಫೋಟೋವನ್ನು ಬೆಂಕಿಗೆ ಹಾಕಬೇಕಿತ್ತು. ಈ ವೇಳೆಯಲ್ಲಿ ಬಹಳಷ್ಟು ಜನರು ಚಕ್ರವರ್ತಿ ಚಂದ್ರಚೂಡ್ ಅವರ ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾರೆ.
ಬಿಗ್ ಬಾಸ್ ಅರ್ಧಕ್ಕೆ ನಿಂತು ಸ್ಪರ್ಧಿಗಳು ಹೊರಗಡೆ ಬಂದ ಮೇಲೆ ಬಿಗ್ ಬಾಸ್ ನ ಹಿಂದಿನ ಸಂಚಿಕೆಗಳನ್ನು ನೋಡಿ ಪ್ರತಿಯೊಬ್ಬರ ಮಾತು ಹಾಗೂ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ ಬಂದಿದ್ದಾರೆ. ಮನೆಯಲ್ಲಿ ತಾವು ಹೇಗಿರಬೇಕೆಂಬ ಯೋಜನೆ ಅವರಲ್ಲಿ ಖಂಡಿತವಾಗಿ ಇದ್ದೇ ಇರುತ್ತದೆ.
ಸೆಕೆಂಡ್ ಇನ್ನಿಂಗ್ಸ್ ನಲ್ಲಿ ನಾಮಿನೇಷನ್ ವೇಳೆಯಲ್ಲಿ ಮೊದಲ ಇನಿಂಗ್ಸ್ ನಲ್ಲಿ ಹೆಚ್ಚು ಮಾತನಾಡದೆ ನಿಶಬ್ದವಾಗಿ ಇರುತ್ತಿದ್ದ ವೈಷ್ಣವಿ ಗೌಡ ಅವರು ಚಕ್ರವರ್ತಿ ಚಂದ್ರಚೂಡ್ ಅವರನ್ನು ನಾಮಿನೇಟ್ ಮಾಡುತ್ತಾ, ಅವರ ವಿರುದ್ಧ ಆಡಿದ ಮಾತುಗಳಿಂಸ ಆಶ್ಚರ್ಯವನ್ನು ಒಂದು ಮಾಡಿದ್ದಾರೆ.ವೈಷ್ಣವಿ ಅವರು ಮಾತನಾಡುತ್ತಾ ಕುಟುಂಬ ಅನ್ನುವುದು ನಿಮಗೆ ಮಾತ್ರವಲ್ಲ, ನಮಗೂ ಕುಟುಂಬ ಎನ್ನುವುದು ಇದೆ.
ಅದನ್ನು ನೀವು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು.. ಯಾರ ಬಗ್ಗೆಯಾದರೂ ಮಾತನಾಡಬೇಕಾದರೆ, ಯಾರ ಬಗ್ಗೆ ಏನು ಮಾತನಾಡುತ್ತಿದ್ದೇನೆ ಎಂದು ಸರಿಯಾಗಿ ಆಲೋಚನೆ ಮಾಡಿದರೆ ಮಾತ್ರವೇ ಗೌರವ ಸಿಗುತ್ತದೆ ಎಂದು ಹೇಳುತ್ತಾ, ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮನೆಯಲ್ಲಿರುವ ಅರ್ಹತೆ ಇಲ್ಲ ಎಂದು ಅವರ ಫೋಟೋ ಬೆಂಕಿಗೆ ಹಾಕಿದ್ದಾರೆ.