ನಗು ಎಂಬುದು ಆರೋಗ್ಯಕರ: ನಕ್ಕು ನಗಿಸುವ ಈ ಜೋಕ್ ಗಳನ್ನು ಒಂದು ಸಲ ಓದಿ ನೋಡಿ, ನಗೆಗಡಲಲ್ಲಿ ತೇಲುವುದು ಖಚಿತ
ಜೀವನದಲ್ಲಿ ನಗುವು ಒಂದು ಸಿದ್ಧೌಷಧ ಇದ್ದ ಹಾಗೆ. ಖಿನ್ನತೆಗೆ ಒಳಗಾದ ಮನಸ್ಸುಗಳಿಗೆ ಮುದವನ್ನು ನೀಡುವ ಶಕ್ತಿ ನಗುವಿಗೆ ಇದೆ. ನಮ್ಮಲ್ಲಿ ಒಂದು ನವ ಚೈತನ್ಯವನ್ನು ಹಾಗೂ ಉತ್ಸಾಹವನ್ನು ನಗು ನಮಗೆ ನೀಡುತ್ತದೆ. ಅಂತಹ ನಗುವಿನ ಅಲೆಯನ್ನು ನಿಮ್ಮಲ್ಲಿ ಕೂಡಾ ಮೂಡಿಸುವ ಒಂದು ಸಣ್ಣ ಪ್ರಯತ್ನವು ಇಲ್ಲಿದೆ ನಿಮಗಾಗಿ. ನೀವು ನಗುತ್ತಿಲ್ಲ ಎಂದರೆ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆಗಾಗ ನಗುವುದನ್ನು ಕಲಿತುಕೊಳ್ಳಿ. ಎಷ್ಟು ಖುಷಿಯಾಗಿದ್ದರೆ ಅಷ್ಟು ನಮ್ಮ ಮನಸ್ಸು ಉಲ್ಲಾಸದಿಂದ ಇರುತ್ತವೆ ಎಂಬುದನ್ನು ಮರೆಯಬೇಡಿ.
ಜೋಕ್: ೧
- ಗುಂಡನ ಪಕ್ಕದ ಮನೆಯವನ ಹೆಸರು ಭಗವಂತ ಮತ್ತು ಅವರ ಮಗಳ ಹೆಸರು ಭಕ್ತಿ. ಒಂದು ದಿನ ಗುಂಡನ ಅಮ್ಮ ಹೇಳಿದರು
- ಅಮ್ಮ: ಗುಂಡ ನೀನು ಯಾವಾಗಲೂ ಭಗವಂತನ ಭಕ್ತಿಯ ಕಡೆ ಸದಾ ಗಮನ ಕೊಡು. ಭಕ್ತಿಗೆ ನಿನ್ನ ಮನವನ್ನು ಅರ್ಪಿಸು.
- ಗುಂಡ( ಮನಸ್ಸಿನಲ್ಲಿ): ಅಯ್ಯೋ ಅಮ್ಮಾ ಭಕ್ತಿ ಮೇಲೆ ಮನಸ್ಸು ಇಟ್ಟಿದ್ದೀನಿ, ಆದರೆ ಅವರಪ್ಪ ಭಗವಂತನಿಗೆ ಅದು ಅರ್ಥಾನೇ ಆಗ್ತಿಲ್ಲ.
ಜೋಕ್:೨
- ಚಪ್ಪಲಿ ಅಂಗಡಿಯಲ್ಲಿ
- ಅಂಗಡಿಯವನು – ಅಂಗಡಿಯಲ್ಲಿನ ಎಲ್ಲಾ ಬಾಕ್ಸ್ ಗಳಲ್ಲಿ ಇರುವ ಚಪ್ಪಲಿಗಳಲ್ಲಿ ಒಂದನ್ನು ಬಿಡದೆ ನಾನು ನಿಮಗೆ ತೋರಿಸಿದೆ ಮೇಡಂ, ಇನ್ನು ಯಾವುದೂ ಉಳಿದಿಲ್ಲ..
- ಮಹಿಳೆ – ಹಾಗಾದರೆ ಅಲ್ಲಿರುವ ಬಾಕ್ಸ್ ನಲ್ಲಿ ಏನಿದೆ?
ಅಂಗಡಿಯವನು- ಮೇಡಂ ನನ್ನ ಮೇಲೆ ಸ್ವಲ್ಪ ಕರುಣೆ ತೋರಿಸಿ, ಆ ಬಾಕ್ಸಲ್ಲಿ ನಾನು ತಿನ್ನೋಕೆ ಅಂತ ತಂದಿರೋ ಲಂಚ್ ಇದೆ.
ಜೋಕ್: ೩
- ಹುಡುಗಿ: ಮೋಡಗಳು ಗುಡುಗಿ ಸದ್ದಾದರೆ ನಿನ್ನ ನೆನಪಾಗುತ್ತದೆ, ತಂಪಾದ ಮಳೆ ಗಾಳಿ ಬೀಸಿದರೆ ನಿನ್ನ ನೆನಪಾಗುತ್ತದೆ. ಮಳೆ ಹನಿಗಳು ಉದುರಲು ಆರಂಭಿಸಿದರೆ ನನಗೆ ನಿನ್ನ ನೆನಪಾಗುತ್ತದೆ
- ಹುಡುಗ: ಸರಿ ಸರಿ ನನಗೆ ಗೊತ್ತಾಯ್ತು. … ನಿನ್ನ ಛತ್ರಿ ನಮ್ಮ ಮನೇಲೇ ಇದೆ.. ನಾಳೆ ತಂದು ಕೊಡ್ತೀನಿ ಸಾಯಬೇಡ..
ಜೋಕ್: ೪
- ಒಮ್ಮೆ ಮಹಾದೇವನು ಭೂಮಿಗೆ ಬಂದನು.
ಆತ ರಸ್ತೆಯಲ್ಲಿ ನಡೆದು ಬರುವಾಗ ಆತನಿಗೆ ಬಾಯಾರಿಕೆಯಾಯಿತು.
ಆತನ ಎದುರು ಒಬ್ಬ ಹಾಲು ಮಾರುವ ವ್ಯಕ್ತಿ ಕಂಡನು. ಮಹಾಶಿವನು ಆತನನ್ನು ತನಗೆ ಸ್ವಲ್ಪ ಹಾಲನ್ನು ಕೊಡು ಎಂದು ಕೇಳಿದನು.
ಹಾಲಿನವನು: “ಹಾಲು ಉಚಿತವಾಗಿ ಸಿಗೋದಿಲ್ಲ” ಎಂದ. - ಮಹಾಶಿವನು ಅಲ್ಲಿಂದ ಮುಂದೆ ಬಂದ :ಅಲ್ಲಿ ಒಬ್ಬ ಮತ್ತು ಮುಂದೆ ಹೋಗುವಾಗ ಒಬ್ಬ ಮದ್ಯ ಸೇವನೆ ಮಾಡಿದ ವ್ಯಕ್ತಿ ಕಂಡ
ಶಿವನು ನನಗೆ ಬಾಯಾರಿಕೆ ಆಗಿದೆ ಸ್ವಲ್ಪ ನನಗೂ ಕುಡಿಯಲು ಕೊಡುವೆಯಾ ಎಂದ.
ಕುಡುಕ: ನಿಮಗೆ ಎಷ್ಟು ಬೇಕೋ ಅಷ್ಟು ಕುಡಿಯಿರಿ, ಎಂದು ಹೇಳಿದನು. ಮಹಾಶಿವನಿಗೆ ತುಂಬಾ ಸಂತೋಷವಾಯಿತು.. - ಮಹಾಶಿವನು ಆಗ ಹಾಲು ಕೊಡುವವನಿಗೆ ಇನ್ನು ಮುಂದೆ ನೀನು ಮನೆ ಮನೆಗೆ ಹೋಗಿ ಹಾಲು ಕೊಡುವಂತಾಗಲಿ ಎಂದ. ಮದ್ಯ ಸೇವನೆ ಮಾಡುವವನನ್ನು ಜನರೇ ಅವನನ್ನು ಹುಡುಕಿ ಅವನ ಬರುವಂತಾಗಲಿ ಎಂದು ಹರಸಿದ.
ಜೋಕ್: ೫
- ಹೆಂಡತಿ: ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ?
- ಗಂಡ : ಷಹಜಹಾನ್ ಗಿಂತ ಹೆಚ್ಚಾಗೇ ಪ್ರೀತಿಸ್ತೀನಿ.
- ಹೆಂಡತಿ: ಹಾಗಾದ್ರೆ ನಾನು ಸತ್ತ ಮೇಲೆ ನನಗೆ ನೀವು ಕೂಡಾ ತಾಜ್ ಮಹಲ್ ಅನ್ನು ನಿರ್ಮಾಣ ಮಾಡ್ತೀರಾ?
- ಗಂಡ : ಅಯ್ಯೋ ಹುಚ್ಚಿ ನಾನು ಈಗಾಗಲೇ ಜಮೀನು ತಗೊಂಡಿದ್ದೀನಿ, ನೀನೇ ತಡ ಮಾಡ್ತಾ ಇದ್ಯಾ ಅಷ್ಟೇ..
ಜೋಕ್: ೬
- ಹೊಸದಾಗಿ ಮದುವೆಯಾಗಿತ್ತು ಒಂದು ದಿನ ಬೆಳಿಗ್ಗೆ ಗಂಡ ಹೆಂಡತಿಯ ಮೇಲೆ ನೀರು ಎರಚಿದ…
- ಹೆಂಡತಿ (ಕೋಪದಿಂದ ನಿದ್ರೆಯಿಂದ ಮೇಲೆದ್ದು) ಯಾಕ್ರೀ ನೀರು ಹಾಕಿದ್ದು ಏನಾಗಿದೆ ನಿಮಗೆ?ಗಂಡ – ನಿಮ್ಮ ತಂದೆ, “ನನ್ನ ಮಗಳು ಹೂವಿನ ಮೊಗ್ಗಿನ ಹಾಗೆ, ಅದನ್ನು ಒಣಗದೇ ಇರೋ ಹಾಗೆ ನೋಡ್ಕೋ ಅಂದಿದ್ರಲ್ವ.. ಅದಕ್ಕೆ ಕಣೇ”
ಜೋಕ್-೭
- ಒಬ್ಬ ಸರ್ದಾರ್ ಜಿ ಹೆಂಡ್ತಿ ಪ್ರಜ್ಞೆ ತಪ್ಪಿ ಬಿದ್ಲು..ಡಾಕ್ಟರ್ – ಆಕೆ ಸತ್ತಿದ್ದಾಳೆ ಆಕೆ ದೇಹವನ್ನು ಎತ್ತಿಕೊಂಡು ಹೋಗಿ ಅವಳ ಅಂತಿಮ ಸಂಸ್ಕಾರ ಮಾಡಲು ಸಿದ್ಧರಾದರು. ಆಕೆಯ ಚಿತೆಗೆ ಬೆಂಕಿ ಇಡುವ ವೇಳೆಗೆ ಅವಳು ಎದ್ದು ಕುಳಿತು ಅಯ್ಯೋ “ನಾನು ಜೀವಂತವಾಗಿದ್ದೀನಿ .. !!” ರೀ ಅಂದಳು..
- ಸರ್ದಾರ್: ಸಾಕು ಬಾಯಿ ಮುಚ್ಚು, ನೀನೇನು ಡಾಕ್ಟರ್ಗಿಂತ ಕಾಸ್ತಿ ತಿಳ್ಕೊಂಡು ಇದ್ಯಾ?
ಬೇಗ ಬೆಂಕಿ ಇಡಿ, ಇಲ್ದೇ ಇದ್ರೆ ಇವಳು ಇನ್ನೂ ಮಾತಾಡ್ತಾನೇ ಇರ್ತಾಳೆ ಅಂದ..