ಮನೆ ಮಾಲೀಕರಿಗೆ ದೊಡ್ಡ ಅಘಾತ //ಬಾಡಿಗೆ ಮನೆಗಳಿಗೆ ಹೊಸ ನಿಯಮ //ಬಾಡಿಗೆದಾರರಿಗೆ ಗುಡ್ ನ್ಯೂಸ್ // ರಾಜ್ಯ ಸರ್ಕಾರದಿಂದ ಆದೇಶ!
ಬಾಡಿಗೆ ಮನೆಯಲ್ಲಿ ಇರುವವರಿಗೆ ಹಾಗೂ ಮನೆಯನ್ನು ಬಾಡಿಗೆ ಕೊಟ್ಟವರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ ಜಾರಿಗೆ ತರಲಾಗಿದೆ.ನೀವು ಬಾಡಿಗೆ ಕೊಟ್ಟಿರುವ ಮನೆಯ ಮಾಲೀಕರಾಗಿದ್ದಾರೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ತಪ್ಪದೆ ಇದನ್ನು ಪೂರ್ತಿ ಓದಿ.
ಬಾಡಿಗೆದಾರರಿಗೆ ಅದಿನಿಯಮಕ್ಕೆ ಕುರಿತಂತೆ ರಾಜ್ಯ ಸರ್ಕಾರದಿಂದ ಹೊಸ ಅದಿನಿಯಮ ತರಲು ಮುಂದಾಗಿದ್ದು ಅದರ ಪ್ರಮುಖ ಅಂಶಗಳು ಬಾಡಿಗೆದಾರರು ಹಾಗೂ ಮಾಲೀಕರು ಯಾವುದೇ ಒಪ್ಪಂದ ಮಾಡಿಕೊಂಡರು ಅದರಲ್ಲಿ ಗೌರ್ನಮೆಂಟ್ ಆಫ್ ಕರ್ನಾಟಕ ಮೂಗು ತೂರಿಸುವುದಿಲ್ಲ.ಅವರ ಇಬ್ಬರ ಅಗ್ರಿಮೆಂಟ್ ಫೈನಲ್ ಮತ್ತು ಇನ್ನು ಮುಂದೆ ಏನೇ ಆದರು ಅವರಿಬ್ಬರೂ ಕುಳಿತು ಬಗೆಹರಿಸಿಕೊಳ್ಳಬೇಕು.
ಮನೆಯ ಬಾಡಿಗೆ ಹೆಚ್ಚಾಳದ ಮೇಲೆ ನಿಯಂತ್ರಣ ತರಲು ಸರ್ಕಾರ ಮುಂದಾಗಿದೆ. ಏಕೆಂದರೆ ಕೆಲವು ಕಡೆ ಮೂಗಿಗಿಂತ ಮೂಗುತಿ ಭಾರ ಅನ್ನುವ ರೀತಿ ಇದೆ. ಅಷ್ಟೇ ಅಲ್ಲದೆ ಅವೈಜ್ಞಾನಿಕ ಬಾಡಿಗೆ ಅದರಿಂದ ಉಂಟಾಗುತ್ತಿರುವ ತಲೆ ನೋವುಗಳಿಂದ ಮುಕ್ತಿ ಕೊಡಲು ಸರ್ಕಾರ ನಿರ್ಧರಿಸಿದೆ. ಆರೋಪಚಾರಿಕ ಬಾಡಿಗೆ ಮಾರುಕಟ್ಟೆಯನ್ನ ಸೃಜಿಸು ಯೋಜನೆ ಸರ್ಕಾರವು ಮುಂದಾಗಿದೆ ಹಾಗೂ ಬಾಡಿಗೆಕರಾರು ಮತ್ತು ದಸ್ತಾ ವೇಜುಗಳನ್ನು ಸಲ್ಲಿಸಲು ವೇದಿಕೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.
ಯಾವುದೇ ಹಣಕಾಸಿನ ವ್ಯವಹಾರದಲ್ಲಿ ಗರಿಷ್ಟ ಮಿತಿ ಇರುವುದಿಲ್ಲ.ಒಪ್ಪಂದದ ಮೇರೆಗೆ ಬಾಡಿಗೆ ನಿರ್ಧಾರ ಮಾಡಬಹುದು. ಗರಿಷ್ಠ ತಿಂಗಳ ಬಾಡಿಗೆಗೆ ಸಮನಾದ ಭದ್ರತಾ ಠೇವಣಿ ಅಂದರೆ ಅಡ್ವಾನ್ಸ್ ಮಾತ್ರ ಪಡೆಯಬೇಕು.ಇದನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಸಾಧ್ಯತೆ ಇದೆ. ಬಾಡಿಗೆ ನ್ಯಾಯಾಧೀಕರಣ ಸ್ಥಾಪನೆ ಕೇಸ್ ವಿಚಾರಣೆಗೆ ಜಿಲ್ಲಾ ನ್ಯಾಯಾಧೀಶ ನೇಮಕ ಮಾಡಲಾಗುವುದು.ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ 60 ದಿನಗಳ ಒಳಗೆ ಕೇಸ್ ಇತ್ಯಾರ್ಥ ಮಾಡಬೇಕು. ಯಾವುದೇ ಕಾರಣಕ್ಕೂ ಇದನ್ನು ವಿಳಂಬ ಮಾಡುವಂತಿಲ್ಲ.ಬಾಡಿಗೆ ನ್ಯಾಯಾಲಯ ಆದೇಶದ ವಿರುದ್ಧ ಮೇಲ್ಮನವಿ ಮಧ್ಯ ಕಾಲಿನ ಆದೇಶವನ್ನು ಹೊರಡಿಸುವುದುಕ್ಕೆ ಅವಕಾಶವಿದೆ.
ಮೂರಕ್ಕಿಂತ ಹೆಚ್ಚು ಮುಂದೂಡುವಿಕೆಗೆ ಅವಕಾಶ ನೀಡುವಂತಿಲ್ಲ.ಬಾಡಿಗೆದಾರರು ಮತ್ತು ಭೂಮಾಲಿಕರಿಗೆ ಇದರಿಂದ ಲಾಭ ಹೆಚ್ಚಾಗುವ ನಿರೀಕ್ಷೆ. ಔಪಚಾರಿಕ ಬಾಡಿಗೆ ಮಾರುಕಟ್ಟೆಯ ಸೃಷ್ಟಿಗೆ ಆದ್ಯತೆ. ಈ ಕುರಿತು ಕಾನೂನು ಚೌಕಟ್ಟಿನಲ್ಲಿ ಕುಲಂಕುಶವಾಗಿ ಪರಿಶೀಲನೆ ಮಾಡಲಾಗುವುದಾಗಿ ತಿಳಿಸಲಾಗಿದೆ. ಬಾಡಿಗೆ ವಲಯದಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ.ಸಮಗ್ರ ಆರ್ಥಿಕ ವ್ಯವಸ್ಥೆ ಉತ್ತೇಜಿಸುವುದು ಅನಿರೀಕ್ಷಿತ ವಿಪತ್ತು ಎದುರಾದಾಗ ಇಬ್ಬರ ಒಪ್ಪಂದಗಳ ಆಧಾರದ ಮೇಲೆ ಮುಂದುವರಿಕೆಗೆ ಅನುಮತಿ ನೀಡುವುದು.
ಪ್ರಸ್ತುತ ಜಾರಿಯಲ್ಲಿರುವ ಕಾನೂನು ತಿದ್ದುಪಡಿ ಮಾಡುವ ಅಗತ್ಯ ಹಾಗೂ ಬಾಡಿಗೆದಾರ ಮಾಲೀಕನ ಹಿತ ಆಸಕ್ತಿಗಳ ಸಮತೋಲನ ಮಾಡಲಾಗುವುದು. ಹೊಸ ಬಾಡಿಗೆದಾರರಿಗೆ ಲಿಖಿತ ಒಪ್ಪಂದ ಕಡ್ಡಾಯ. ಭೂಮಾಲೀಕ ಅವಶ್ಯಕ ಪೂರೈಕೆಗಳನ್ನು ತಡೆಯುವಂತಿಲ್ಲ. ಬಾಡಿಗೆ ಅವಧಿಯು ಚಾಲ್ತಿಯಲ್ಲಿ ಇರುವಾಗ ಬಾಡಿಗೆದಾರರನ್ನು ಹೊರ ಹಾಕುವಂತಿಲ್ಲ.ಬಾಡಿಗೆ ಅವಧಿ ಮುಕ್ತಾಯ ಆದನಂತರ ಖಾಲಿ ಮಾಡದೇ ಇರುವ ಸಂದರ್ಭದಲ್ಲಿ ಹೆಚ್ಚಿಸಿದ ಬಾಡಿಗೆ ಹಣವನ್ನು ಬಾಡಿಗೆದರ ಕೊಡಬೇಕು. ಮೊದಲೆರಡು ತಿಂಗಳು ಮೂರು ಪಟ್ಟು ಮತ್ತು ನಾಲ್ಕು ಪಟ್ಟು ಬಾಡಿಗೆ ನೀಡಬೇಕು. ಮಾಲೀಕನ ಒಪ್ಪಿಗೆ ಇಲ್ಲದೆ ಬಾಡಿಗೆದಾರ ಯಾವುದೇ ಬದಲಾವಣೆ ಮಾಡುವಂತಿಲ್ಲ.