ದಿನನಿತ್ಯ ಬಳಸುವ ಈ ಪುಡಿಗಳಲ್ಲಿ ಮನೆಯಲ್ಲೇ ಕಲಬೆರಕೆ ಕಂಡು ಹಿಡಿಯುವ ಟಿಪ್ಸ್!

0
69

ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಅಚ್ಚಖಾರದ ಪುಡಿ, ಅರಿಶಿಣದ ಪುಡಿಯನ್ನು ಯಾರು ಸಹ ಉಪಯೋಗಿಸುವುದಿಲ್ಲ. ಬಹಳಷ್ಟು ಜನರು ರೆಡಿಮೇಡ್ ಪ್ಯಾಕೆಟ್ ಗಳನ್ನು ಬಳಸುತ್ತಾರೆ ಆದರೆ ಅದು 100% ಶುದ್ಧ ಇದೆಯೋ ಇಲ್ಲವೋ ಎಂದು ಯಾರಿಗೂ ಸಹ ಗೊತ್ತಿರುವುದಿಲ್ಲ. ಪ್ರತಿದಿನ ಬಳಸುವ ಅಚ್ಚಖಾರದ ಪುಡಿ, ಅರಿಶಿಣದ ಪುಡಿ ಮತ್ತು ಇಂಗು ಇದರಲ್ಲಿ ಕಲಬೆರಕೆ ಇದಿಯೋ ಇಲ್ಲವೋ ಎಂದು ತಿಳಿಯುವುದಕ್ಕೆ ಈ ನಿಯಮಗಳನ್ನು ಅನುಸರಿಸಿ.

ಕೆಲವುಸರಿ ಅಚ್ಚಖಾರದ ಪುಡಿಯಲ್ಲಿ ಇಟ್ಟು ಮಿಶ್ರಣ ಮಾಡಿರುತ್ತಾರೆ.ಇದರ ಬಗ್ಗೆ ಯಾರಿಗೂ ಸಹ ತಿಳಿದಿರುವುದಿಲ್ಲ. ಮೊದಲು ಒಂದು ಚಿಕ್ಕ ಬೌಲ್ ಗೆ ಸ್ವಲ್ಪ ಖಾರದ ಪುಡಿ ಹಾಕಿ. ನಂತರ ನೀರು ಹಾಕಿಕೊಂಡು ಚೆನ್ನಾಗಿ ಪೇಸ್ಟ್ ತರ ಮಾಡಿ ನಿಮ್ಮ ಕೈ ಮೇಲೆ ಹಾಕಿಕೊಂಡು ಚೆನ್ನಾಗಿ ರಬ್ ಮಾಡಬೇಕು.ಅದರಲ್ಲಿ ಮಣ್ಣು ಮಣ್ಣಾಗಿದ್ದಾರೆ ಅದರಲ್ಲಿ ಕಲಬೆರಕೆ ಆಗಿದೆ ಎಂದು ಅರ್ಥ.

ಕೆಲವು ಪ್ಯಾಕೆಟ್ ಗಳಲ್ಲಿ ಫೂಡ್ ಕಲರ್ ಬಳಕೆ ಮಾಡಿರುತ್ತಾರೆ. ಇದನ್ನು ಹೇಗೆ ಕಂಡು ಹಿಡಿಯಲು ಒಂದು ಗ್ಲಾಸ್ ನೀರಿಗೆ ಅರ್ಧ ಚಮಚ ಖಾರದ ಪುಡಿ ಹಾಕಿ 5 ನಿಮಿಷ ಬಿಟ್ಟು ನೋಡಿದರೆ ಖಾರದ ಪುಡಿ ಗ್ಲಾಸ್ ಕೆಳ ಭಾಗದಲ್ಲಿ ಇರುತ್ತದೆ ಮತ್ತು ಮೇಲೆ ಇರುವ ನೀರು ತುಂಬಾ ಕ್ಲಿಯರ್ ಆಗಿ ಇರುತ್ತಾರೆ.ಕಲಬೆರಕೆ ಇರುವ ಖಾರದ ಪುಡಿಯನ್ನು ನೀರಿಗೆ ಹಾಕಿದರೆ ತಕ್ಷಣ ನೀರಿನ ಕಲರ್ ಕೆಂಪು ಆಗಿರುತ್ತದೆ. 5 ನಿಮಿಷ ಬಿಟ್ಟು ನೋಡಿದರು ನೀರಿನ ಬಣ್ಣ ಬದಲಾಗುವುದಿಲ್ಲ.

ಇದೆ ರೀತಿ ಅರಿಶಿಣದ ಪುಡಿಯನ್ನು ಚೆಕ್ ಮಾಡಬಹುದು. ಒಂದು ಗ್ಲಾಸ್ ನೀರಿಗೆ 1 ಚಮಚ ಅರಿಶಿಣ ಹಾಕಿ ನೋಡಿ. ಶುದ್ಧ ಇರುವ ಅರಿಶಿಣದ ಪುಡಿಯ ನೀರು ಲೈಟ್ ಆಗಿ ಕಲರ್ ಇರುತ್ತದೆ ಹಾಗೂ ಕೆಲವು ಅರಿಶಿಣದ ಪುಡಿಯಲ್ಲಿ ಫುಡ್ ಕಲರ್ ಹಾಕಿರುತ್ತಾರೆ.ಇದನ್ನು ನೀರಿಗೆ ಹಾಕಿ 5 ನಿಮಿಷ ಬಿಟ್ಟು ನೋಡಿದರೆ ನೀರು ಫುಲ್ ಹಳದಿ ಬಣ್ಣದಲ್ಲಿ ಇರುತ್ತದೆ.

ಅದೇ ರೀತಿ ಇಂಗಲ್ಲಿ ಕಲಬೆರಕೆ ಇದೆಯೋ ಇಲ್ಲವೋ ಎಂದು ತಿಳಿಯಲು ಹೀಗೆ ಮಾಡಿ. 1 ಚಮಚ ಇಂಗು ತೆಗೆದುಕೊಂಡು ಗ್ಯಾಸ್ ಆನ್ ಮಾಡಿ ಇಡೀ. ಶುದ್ಧ ಇಂಗು ಆಗಿದ್ದರೆ ಇಂಗು ಕರ್ಪೂರದ ಹಾಗೆ ಉರಿಯುತ್ತದೆ. ಕರ್ಪೂರದ ಹಾಗೆ ಉರಿಯದಿದ್ದರೆ ಅದರಲ್ಲಿ ಕಲಬೆರಕೆ ಆಗಿದೆ ಎಂದು ಅರ್ಥ. ಆದಷ್ಟು ಮನೆಯಲ್ಲಿ ಈ ಪುಡಿಗಳನ್ನು ಮಾಡಿ ಬಳಸಿ.

LEAVE A REPLY

Please enter your comment!
Please enter your name here