ರಾತ್ರೋ ರಾತ್ರಿ ವರ್ಲ್ಡ್ ಸ್ಟಾರ್ ಆದ ರಾಣಿಯನ್ನು ನೋಡಲು ಜನವೋ ಜನ!
ಇತ್ತೀಚಿನ ದಿನಗಳಲ್ಲಿ ರಾತ್ರೋ ರಾತ್ರಿ ಸ್ಟಾರ್ ಆಗೋ ಜನರನ್ನು ನೋಡಿದ್ದೀರಾ.ಈಗ ಪ್ರಾಣಿಗಳ ಸರದಿಯಲ್ಲಿ ಇದೆ. ಆ ಪ್ರಾಣಿ ಯಾವುದು ಎಂದರೆ ಹಸು. ಹಸು ಒಂದು ರಾತ್ರೋ ರಾತ್ರಿ ಮಿಡಿಯಾ ಸ್ಟಾರ್ ಆಗಿದೆ. ಹಸು ಹೇಗೆ ಸ್ಟಾರ್ ಅಯ್ತು ಎನ್ನುವುದನ್ನು ತಿಳಿಯಲು ಪೂರ್ತಿ ಓದಿ.
ಆ ಹಸು ಹುಟ್ಟಿರೋದು ಬಗ್ಲಾದೇಶದ ಚಾರಿ ಗ್ರಾಮದಲ್ಲಿ.ಇದರ ಆಕರ್ಷಣೆ ಏನು ಎಂದರೆ ಕುಬ್ಜವಾಗಿ ಇರುವುದು.ಕೇವಲ 26kg ತೂಕವಿರುವ ಈ ಹಸು 56CM ಅಷ್ಟೇ ಎತ್ತರವಾಗಿ ಇರುವ ಈ ಹಸು ಈಗ ರಾತ್ರೋ ರಾತ್ರಿ ಸ್ಟಾರ್ ಆಗಿದೆ.ಇತ್ತೀಚಿಗೆ ಸೋಶಿಯಲ್ ಮಿಡಿಯಾದಲ್ಲಿ ಕುಬ್ಜ ಹಸುವಿನ ಒಂದಷ್ಟು ಫೋಟೋಗಳು ವೈರಲ್ ಆಗಿದೆ. ಇದನ್ನು ನೋಡಿದ ಸಾಕಷ್ಟು ಜನರು ಆಶ್ಚರಿಗೊಂಡಿದ್ದಾರೆ.
ನಂತರ ಹೇಗಾದರೂ ಮಾಡಿ ಹಸುವನ್ನು ನೋಡಲೇ ಬೇಕು ಎಂದು ಹಸು ಇರುವ ಗ್ರಾಮಕ್ಕೆ ಜನರು ಬರುತ್ತಿದ್ದಾರೆ.ಅಷ್ಟೇ ಅಲ್ಲದೆ ಈ ಹಸು ಗಿನ್ನಿಸ್ ರೆಕಾರ್ಡ್ ನಲ್ಲಿ ಇರುವ ಹಸುವಿಗಿಂತಲೂ 10CM ಚಿಕ್ಕದಾಗಿದ್ದು ಈ ಹಸುವನ್ನು ಗಿನ್ನಿಸ್ ರೆಕಾರ್ಡ್ ಗೆ ಸೇರಿಸಲು ಮೂರು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ.ಇಂತಹ ಕರೋನ ಸಮಯದಲ್ಲೂ 15000 ಕ್ಕೂ ಹೆಚ್ಚು ಜನರು ಬಂದು ಈ ಹಸುವನ್ನು ನೋಡಿದ್ದಾರೆ ಎಂದು ಹೇಳಲಾಗಿದೆ.