ಅಬ್ಬಾಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡೊತರ ಆಗಿದ್ದು ಯಾಕೆ ಏನಾಯ್ತು ಅವರ ಸಿನಿ ಜೀವನ!

Featured-Article

ಅಬ್ಬಾಸ್ 90ರ ದಶಕದ ದಕ್ಷಿಣ ಭಾರತದ ಒಬ್ಬ ಯೂತ್ ಫ್ಯಾಷನ್ ಐಕಾನ್. ಅದರಲ್ಲೂ 1996,1997ರ ಸಮಯದಲ್ಲಿ ಸೌತ್ ಇಂಡಿಯನ್ ಸಿನಿಮಾದಲ್ಲಿ ಅಬ್ಬಾಸ್ ಎಂಬ ಹೆಸರು ಒಂದು ಸಂಚಲನ ಸೃಷ್ಟಿ ಮಾಡಿತ್ತು. ಯಾವುದೇ ಹುಡುಗಿಯರನ್ನು ನಿಮ್ಮ ಬಾಯ್ ಫ್ರೆಂಡ್ ಹೇಗಿರಬೇಕು ಎಂದು ಕೇಳಿದರೆ ತಕ್ಷಣ ಅಬ್ಬಾಸ್ ಅಂತೆ ಇರಬೇಕು ಎಂದು ಹೇಳುತ್ತಿದ್ದರು.ಆಗಿನ ಕಾಲದ ಎಲ್ಲಾ ಹುಡುಗರು ಅಬ್ಬಾಸ್ ತರ ಹೇರ್ ಸ್ಟೈಲ್ ಮತ್ತು ಸ್ಟೈಲ್ ಅನ್ನು ಕಾಪಿ ಮಾಡುತ್ತಿದ್ದರು.

ಮೂಲತಃ ಪಶ್ಚಿಮ ಬಂಗಾಲದವರು ಆಗಿದ್ದ ಅಬ್ಬಾಸ್ ತಮಿಳು ಚಿತ್ರದಿಂದ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದವರು.1996 ರಲ್ಲಿ ತೆರೆ ಕಂಡ ಅವರ ಮೊಟ್ಟ ಮೊದಲ ಚಿತ್ರ ಕದಲ್ ದೇಶಂ. ಆ ಕಾಲದಲ್ಲಿ ಬಹಳ ಸದ್ದನ್ನು ಮಾಡಿದ ಚಿತ್ರವಿದು. ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಅದ್ದೂರಿ ಪ್ರದರ್ಶನ ತೆರೆ ಕಂಡಿದ್ದರಿಂದ ತಮಿಳು ಹಾಗೂ ತೆಲುಗು ಸಿನಿಮಾರಂಗಕ್ಕೆ ಹೊಸ ಹೀರೋ ಸಿಕ್ಕಿದಂತಾಯಿತು. ಅಬ್ಬಾಸ್ ಅವರ ಇಂಟರ್ವ್ಯೂ, ನಟನೆ ಕೇಳುವುದಕ್ಕೆ ಜನರು ತುಂಬಾ ಇಷ್ಟ ಪಡುತ್ತಿದ್ದರು. ಆರಂಭದಲ್ಲಿ ಅವರ ಬೇಡಿಕೆ ತುಂಬಾ ಚೆನ್ನಾಗಿತ್ತು. ತೆಲುಗು, ತಮಿಳು, ಮಲಯಾಳಂ ಎಲ್ಲಾ ಕಡೆಯಿಂದನು ಅವರಿಗೆ ಬೇಡಿಕೆ ತುಂಬಾನೇ ಇತ್ತು.

ಅಬ್ಬಾಸ್ ಅವರ ಸಿನಿಮಾ ತೆರೆ ಕಂಡಾಗ ಎಲ್ಲಾ ಕಡೆಯಿಂದ ನಿರೀಕ್ಷೆ ಮೀರಿದ ಪ್ರತಿಕ್ರಿಯೆ, ಪ್ರಶಂಸೆಗಳು ವ್ಯಕ್ತವಾಗಿದ್ದವು.ನಂತರ ಅಬ್ಬಾಸ್ ಅವರು ತಮ್ಮ ಸಂಭಾವನೆ ಏರಿಕೆ ಮಾಡಿದ್ರು ಸಹ ಕಥೆ ಚಾಯ್ಸ್ ಮಾಡುವುದರಲ್ಲಿ ಸೋತು ಬಿಟ್ಟರು.ಇದೆ ಅವರಿಗೆ ಸಿನಿ ಕ್ಯಾರಿಯರ್ ನಲ್ಲಿ ಸೋಲುವುದಕ್ಕೆ ಒಂದು ಕಾರಣವಾಯಿತು.ಇದರಿಂದಾನೆ ಸೂಪರ್ ಹಿಟ್ ಆಗಿರುವ ಜೀನ್ಸ್ ಚಿತ್ರ ಕೂಡ ಮಿಸ್ ಆಯಿತು.ಅಬ್ಬಾಸ್ ಕೇವಲ ಹಣ ಬರುವಂತಹ ದಾರಿಯನ್ನು ನೋಡಿಕೊಂಡರು ವರೆತು ಉತ್ತಮ ಕಥೆಗೆ ಮತ್ತು ಪಾತ್ರದ ಮಹತ್ವಕ್ಕೆ ಅವರು ಆಲೋಚಿಸಲಿಲ್ಲ.

ಅದೇ ಕಾರಣದಿಂದ ಅವರ ಡೇಟ್ಸ್ ಶಂಕರ್ ಅವರಿಗೆ ಸಿಗದೇ. ಇಂತಹ ಅಪೂರ್ವ ಚಿತ್ರ ಪ್ರಶಾಂತ್ ಅವರಿಗೆ ಸಿಕ್ಕಿತು.ಸಣ್ಣ ಸಣ್ಣ ಪಾತ್ರವನ್ನು ಒಪ್ಪಿಕೊಂಡ ಅಬ್ವಸ್ ಅವರು ಹೀರೋ ಆಗುವುದಕ್ಕೆ ಸಾಧ್ಯ ಆಗುವುದಿಲ್ಲ ಅನ್ನೋವುದರ ಬಗ್ಗೆ ಯೋಚನೆ ಮಾಡಲಿಲ್ಲ.ಅವರಿಗೆ ಮೊದಲೇ ತಮಿಳು ಮಾತನಾಡುವುದಕ್ಕೆ ಬರುತ್ತಿರಲಿಲ್ಲ ಕೇವಲ ಹಿಂದಿ, ಬಂಗಾಲಿ, ಇಂಗ್ಲಿಷ್ ನಲ್ಲಿ ಹಿಡಿತವಿದ್ದು ಬಹಳ ಕಷ್ಟ ಪಟ್ಟು ತಮಿಳು ಕಲಿಯುವುದಕ್ಕೆ ಆರಂಭಿಸಿದರು.ಆದರು ಸಹ ಅವರ ಕೆರಿಯರ್ ಮುಗಿದು ಹೋಗಿತ್ತು.

ಮೊದಲು ಇವರ ತಮಿಳು ಚಿತ್ರಕ್ಕೆ ಧ್ವನಿಯನ್ನು ನೀಡುತ್ತಿರುವವರು ಜಿ, ಏನ್ ವಿಕ್ರಮ್. ಅವರ ಧ್ವನಿ ಅಬ್ಬಾಸ್ ಅವರಿಗೆ ಸಕ್ಕತ್ ಸೂಟ್ ಆಗುತ್ತಿತ್ತು.1996ರಲ್ಲಿ ಬಂದಿದ್ದ ಕದಲ್ ದೇಶಂ ಬಿಟ್ಟರೆ ಮುಂದೆ ಬಂದ ಯಾವ ಸಿನಿಮಾ ಕೂಡ ಚೆನ್ನಾಗಿ ಮೂಡಿ ಬಂದಿಲ್ಲ.ಅಬ್ಬಾಸ್ ಅವರ ನಟನೆ ಎಂದರೆ ಕೇವಲ ಹಣ ಮಾಡುವುದು ಮತ್ತು ಒಂದೇ ತರ ಪಾತ್ರವನ್ನು ಮಾಡುವುದು ಎಂದು ನಂಬಿದವರು. ಇನ್ನು ಅವರ ನಟನೆಯ ಕಡೆಗೆ ಯಾವತ್ತಿಗೂ ಗಂಭೀರವದ ಗಮನವನ್ನು ಕೊಡಲಿಲ್ಲ.ಮದುವೆ ಬಳಿಕ ಚೆನೈ ನಲ್ಲಿ ನೆಲೆಸಿ ಸಿಕ್ಕ ಸಿಕ್ಕ ಪತ್ರದಲ್ಲಿ ನಟಿಸುವುದಕ್ಕೆ ಆರಂಭಿಸಿದರು.

ಅವರ ಬೇಡಿಕೆ ಕಡಿಮೆ ಆದಂತೆ ಅವಮಾನ ಸಹಿಸಲಾಗದೆ ನ್ಯೂಜಿಲ್ಯಾಂಡ್ ಗೆ ಪತ್ನಿಯ ಜೊತೆ ಹೋಗಿ ಅವರಿಗೆ ಇಷ್ಟವಾದ ಕನ್ಸ್ಟ್ರಕ್ಷನ್ ಮ್ಯಾನೇಜಾರ್,ಪೆಟ್ರೋಲ್ ಬಂಕ್ ಲಿ ಕೆಲಸ ಮಾಡುತ್ತಿದ್ದಾರೆ. ಸಾಧ್ಯಕ್ಕೆ ಪತ್ನಿ ಹಾಗೂ ಮಕ್ಕಳ ಜೊತೆ ಸಣ್ಣ ಬಿಸಿನೆಸ್ ಮಾಡಿಕೊಂಡು ಸಂತೋಷದಿಂದ ಇದ್ದಾರೆ.ಹೀಗೆ ಒಂದು ವಿಡಿಯೋ ಸಂದರ್ಶನವೊಂದರಲ್ಲಿ ಮಾತಾಡಿದ್ದಾರೆ ಈಗಲೂ ನಾನು ಆರಾಮಾಗಿ ಸಂತೋಷದಿಂದ ನನ್ನ ಫ್ಯಾಮಿಲಿ ಜೊತೆ ಇದ್ದೇನೆ. ಇನ್ನು ಭಾರತ ಜನರ ಋಣವನ್ನು ಯಾವತ್ತಿಗೂ ಮರೆಯುವುದಿಲ್ಲ.ಇಲ್ಲಿ ಯಾವುದು ಶಾಶ್ವತ ಅಲ್ಲ ಹಣ, ಕೀರ್ತಿ ಇದೆಲ್ಲ ಕ್ಷಣಿಕ. ಜನರ ಪ್ರೀತಿ ವಿಶ್ವಾಸವೇ ಸತ್ಯ.ನಿರ್ಮಲ ಒಳ್ಳೆಯ ಮನಸ್ಸು ಇರುವ ಅಬ್ಬಾಸ್ ಅವರಿಗೆ ಇನ್ನು ಮುಂದೆ ಆದರು ಒಳ್ಳೆಯ ಅವಕಾಶ ಸಿಗಲಿ.

Leave a Reply

Your email address will not be published.