ಚರ್ಮದಲ್ಲಿ ಸೋಂಕುಗಳು ದೇಹದ ಒಳಗಿನ ಅಂಶದ ಪ್ರಭಾವದಿಂದ ಕಂಡುಬರುತ್ತವೆ. ಯಾವ ಸಂದರ್ಭದಲ್ಲಿ ಆದರು ಆರೋಗ್ಯದ ತೊಂದರೆ ಎದುರಗಾಬಹುದು. ಆದರೆ ಚರ್ಮದ ಹಲವಾರು ಸಮಸ್ಯೆಗಳಿಗೆ ಪ್ರತಿದಿನ ಬಳಕೆ ಮಾಡುವ ನೈಸರ್ಗಿಕ ಆಹಾರ ಪದಾರ್ಥಗಳಲ್ಲಿ ಪರಿಹಾರವನ್ನು ಕಂಡು ಹಿಡಿದಿದ್ದಾರೆ ಹಿರಿಯರು.
ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವೆಂದರೆ ಬೆಂಡೆಕಾಯಿ. ಬೆಂಡೆಕಾಯಿಯಲ್ಲಿ ಕಂಡುಬರುವ ಲೋಳೆ ರಸ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ಇಂಪ್ಲೇಮೆಂಟರಿ ಮತ್ತು ಚರ್ಮದ ಭಾಗದಲ್ಲಿ ತೇವಾಂಶವನ್ನು ಹಾಗೆ ಹಿಡಿದು ಇಡುವಂತಹ ಗುಣಲಕ್ಷಣಗಳನ್ನು ಪಡೆದಿದೆ.
ಸೋರಿಯಾಸಿಸ್ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಬೆಂಡೆಕಾಯಿ ಉತ್ತಮ. ಸೋರಿಯಾಸಿಸ್ ಸಮಸ್ಯೆಯನ್ನು ಹೊಂದಿರುವವರು ಚರ್ಮದ ಕೆರೆತವನ್ನು ಅನುಭವಿಸುತ್ತಿರುತ್ತಾರೆ. ಇಂತಹವರಿಗೆ ಬೆಂಡೆ ಕಾಯಿ ಲೋಳೆ ನೈಸರ್ಗಿಕ ಆಯಿಂಟ್ಮೆಂಟ್ ಆಗಿ ಕೆಲಸ ಮಾಡುತ್ತದೆ.ಅಷ್ಟೇ ಅಲ್ಲದೆ ನೋವಿನ ಭಾಗದಲ್ಲಿ ತಪ್ಪನ್ನು ಒದಗಿಸುತ್ತದೆ.
ಇನ್ನು ಮೊಡವೆ ಸಮಸ್ಯೆ ಇರುವವರಿಗೆ ಉತ್ತಮ. ಯಾಕೆಂದರೆ ಬೆಂಡೆಕಾಯಿ ಯಾವುದೇ ಚರ್ಮದ ಸೋಂಕನ್ನು ನಿವಾರಣೆ ಮಾಡುವ ಶಕ್ತಿಯನ್ನು ಪಡೆದಿದೆ. ವಿಪರೀತ ಮೊಡವೆ ಸಮಸ್ಯೆಯಿಂದ ಬಳಳುತ್ತಿರುವವರು ಇದನ್ನು ಬಳಕೆ ಮಾಡುವುದರಿಂದ ಮೊಡವೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ಅಷ್ಟೇ ಅಲ್ಲದೆ ಚರ್ಮದಲ್ಲಿ ದದ್ದು,ಅಲರ್ಜಿ ಮೊದಲಾದ ಯಾವುದೇ ರೀತಿಯ ಚರ್ಮದ ಸಮಸ್ಯೆಗೂ ಬೆಂಡೆಕಾಯಿ ಉತ್ತಮ ಪರಿಹಾರವನ್ನು ಒದಗಿಸುತ್ತದೆ.
ಬಳಸುವ ವಿಧಾನ : ಮೊದಲಿಗೆ ಎರಡು ಬೆಂಡೆ ಕಾಯಿ ಸಣ್ಣದಾಗಿ ಹೆಚ್ಚಿ. ನಂತರ ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ರೀತಿ ತಯಾರಿ ಮಾಡಿಕೊಳ್ಳಿ.ಯಾವುದೇ ಕಾರಣಕ್ಕೂ ನೀರನ್ನು ಸೇರಿಸಬೇಡಿ.ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸಂಪೂರ್ಣವಾಗಿ ಒಣಗಳು ಬಿಡಿ. ನಂತರ ಬರಿ ನೀರಿನಿಂದ ತೊಳೆಯಿರಿ. ಇನ್ನು ಸೋರಿಯಸಿಸ್ ಸಮಸ್ಸೆಯಿಂದ ಬಳಲುತ್ತಿರುವವರು ರಾತ್ರಿ ಹಚ್ಚಿ ಬೆಳಗ್ಗೆ ತೊಳೆಯಿರಿ.