ಉತ್ತರ ಪ್ರದೇಶದ ಹಿತವಾ ಜಿಲ್ಲೆಯ ಉಸ್ರಹರ್ ಪೊಲೀಸ್ ಸ್ಟೇಷನ್ ಗೆ ಓರ್ವ ರೈತ ಯಾವುದೊ ದೂರನ್ನು ಕೊಡುವುದಕ್ಕೆ ಬಂದಿರುತ್ತಾನೆ.ಮಾಮೂಲಿ ಬಿಳಿ ಬಟ್ಟೆಯನ್ನು ಧರಿಸಿದ ಆ ರೈತ ತಲೆಗೆ ಒಂದು ಮಾಸಿದ ಪೇಟವನ್ನು ಸುತ್ತಿದ್ದರು.ಅವರನ್ನು ನೋಡಿ ಒಬ್ಬ ಅಧಿಕಾರಿ ಯಾರು ಎಂದು ವಿಚಾರಿಸುತ್ತಾರೆ.ಆ ರೈತ ನನ್ನ ಎಮ್ಮೆಗಳು ಕಳೆದು ಹೋಗಿದೇ ಎಂದು ಹೇಳುತ್ತಾ ಅಧಿಕಾರಿ ಹತ್ತಿರ ಅದಕ್ಕೆ ಸಂಬಂಧಿಸಿದ ದೂರನ್ನು ಕೊಡುವುದಕ್ಕೆ ಬಂದಿದೀನಿ ದಯವಿಟ್ಟು ನನ್ನ ದೂರನ್ನು ಸ್ವೀಕರಿಸಿ ಎಂದು ಕೇಳಿಕೊಳ್ಳುತ್ತಾನೆ.
ಅಲ್ಲಿ ಇದ್ದ ಒಬ್ಬ ಅಧಿಕಾರಿ ಎಲ್ಲಿ ಕಳೆಯಿತು, ಯಾವಾಗ ಎಂದು ಪ್ರಶ್ನೆ ಮೇಲೆ ಪ್ರೆಶ್ನೆ ಕೇಳುತ್ತಿರುವುದನ್ನು ನೋಡಿ ರೈತ ಗಾಬರಿಗೊಂಡು ಅಧಿಕಾರಿಗಳ ಪ್ರೆಶ್ನೆಗೆ ಗಲಿಬಿಲಿ ಆಗಿರುವಂತೆ ಕಂಡ. ತನ್ನ ಮಾತಿನಿಂದ ಅಧಿಕಾರಿಗಳಿಗೆ ಕೋಪ ಬಂದಿರಬಹುದು ಎಂದು ಬೇಸರದಿಂದ ಅಲ್ಲಿಂದ ಹೊರಡಲು ಸಿದ್ದನಾದ. ಆಗ ಅಲ್ಲಿ ಇದ್ದ ಇನ್ನೊಬ್ಬ ಅಧಿಕಾರಿ ರೈತನನ್ನು ಕರೆದು ತನ್ನ ಟೀ ಖರ್ಚಿಗೆ ಹಣವನ್ನು ಕೊಟ್ಟರೆ ನಿನ್ನ ದೂರಿನ ಅರ್ಜಿ ಬರೆದುಕೊಡುವುದಾಗಿ ಎಂದು ತಿಳಿಸುತ್ತಾನೆ.
ಆಗ ರೈತ ಅಯ್ಯ ನಾನು ಒಬ್ಬ ಸಾಧಾರಣ ಬಡರೈತ ನನ್ನ ಬಳಿ ಅಷ್ಟ ಹಣ ಎಲ್ಲಿ ಬರಬೇಕು.ನನ್ನ ಹತ್ತಿರ ಸ್ವಲ್ಪ ಹಣ ಇದೆ ಇದನ್ನೇ ತೆಗೆದುಕೊಂಡು ದೂರನ್ನು ಬರೆದು ಕೊಡಿ ಎಂದು ಕೇಳುತ್ತಾನೆ.ರೈತ ಅಷ್ಟು ಕೇಳಿಕೊಂಡರು ಅವರ ವರ್ತನೆ ಬದಲಾಗಲಿಲ್ಲ.ಅಧಿಕಾರಿಗಳು ಹಣದ ಆಸೆಯಿಂದ ಎಷ್ಟು ಕೊಡುತ್ತಾರೋ ಅಷ್ಟ್ ಕೊಡಲಿ ಎಂದು ಕೇಳುತ್ತಾರೆ. ಬಡ ರೈತ ಜೇಬಿನಿಂದ 35ರೂಪಾಯಿ ಅನ್ನು ಕೊಡುತ್ತನೇ. ನಂತರ ಒಬ್ಬ ಅಧಿಕಾರಿ ದೂರನ್ನು ಬರೆದು ಇದಕ್ಕೆ ನಿನ್ನ ಸಹಿ ಬೇಕು ನೀನು ಹೆಬ್ಬಟ್ಟು ಗಿರಾಕಿನ ಎಂದು ಗೇಲಿ ಮಾಡುತ್ತಾರೆ.
ಆಗ ರೈತ ನಾನು ಹೆಬ್ಬಟ್ಟು ಯಾಕೆ ಸಹಿಯನ್ನೇ ಮಾಡುತ್ತೇನೆ ಎಂದು ಹೇಳಿದಾಗ ಅವರು ಹೌದ ಸರಿ ಎಂದು ಪೆನ್ನು ಅನ್ನು ರೈತನಿಗೆ ಕೊಡುತ್ತಾರೆ. ನಂತರ ರೈತ ಚರಣ್ ಸಿಂಗ್ ಚೌದರಿ ಎಂದು ಇಂಗ್ಲಿಷ್ ನಲ್ಲಿ ಬರೆದದ್ದು ಅಲ್ಲದೆ ತಮ್ಮ ಜೇಬಿನಲ್ಲಿ ಇದ್ದ ಸರಕಾರಿ ಸಿಲ್ ತೆಗೆದುಕೊಂಡು ಅದನ್ನು ಪ್ಯಾಡ್ ಗೆ ಹೊತ್ತಿ ನಂತರ ಪತ್ರದ ಮೇಲೆ ಸಿಲ್ ಹಾಕಿದರೂ. ಆ ಹೆಸರು ಮತ್ತು ಸಿಲ್ ನೋಡಿ ಪೊಲೀಸರು ಭಯಗೊಂಡಿದ್ದರು.ಆ ರೈತ ಹೊತ್ತಿತ ಸಿಲ್ ಯಾವುದು ಎಂದರೆ ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ. ಈ ಒಂದು ಸಂಗತಿ ಇಡೀ ಸ್ಟೇಷನ್ ಅನ್ನೆ ಬೆಚ್ಚಿಸಿತು ಯಾಕೆಂದರೆ ಅಲ್ಲಿಗೆ ಸಾಮಾನ್ಯ ರೈತನ ವೇಷದಲ್ಲಿ ಬಂದಿದ್ದು ಭಾರತದ ಪ್ರಧಾನಿ ಮಂತ್ರಿ ಚರಣ್ ಸಿಂಗ್ ಚೌದರಿ.
1979ರ ಸಮಯದಲ್ಲಿ ಅಲ್ಲಿನ ಭಾರತದ ಪ್ರಧಾನಿ ಆಗಿದ್ದ ಶ್ರೀ ಚರಣ್ ಸಿಂಗ್ ಚೌದರಿ ಅವರೇ ಸ್ವತಃ ಸಾಧಾರಣ ರೈತನ ವೇಷದಲ್ಲಿ ಪೊಲೀಸ್ ಸ್ಟೇಷನ್ ಗೆ ಹೋಗಿದ್ದರು.ಗ್ರಾಮದಲ್ಲಿ ಕಾನೂನು ವ್ಯವಸ್ಥೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ತಾವೇ ಖುದ್ದಾಗಿ ಮಾರು ವೇಷದಲ್ಲಿ ಬಂದಿದ್ದರು. ಈ ಘಟನೆ ದೇಶದಲ್ಲಿ ಸಂಚಾರ ಸೃಷ್ಟಿಸಿತು.ಅಲ್ಲಿ ಲಂಚ ಕೇಳಿದ್ದ ಎಲ್ಲರನ್ನೂ ಕೆಲಸದಿಂದ ತೆಗೆದು ಹಾಕಲಾಗಿತ್ತು.ಪ್ರಧಾನಿ ಅವರ ರೈತ ಪರ ಎಲ್ಲಾ ಕಡೆ ಮೆಚ್ಚುಗೆ ಕೇಳಿ ಬರುತಿತ್ತು.
ರಾಜಪ್ರಭುತ್ವದ ಕಾಲದಲ್ಲಿ ಪ್ರಜೆಗಳ ಸಂಕಷ್ಟ ತಿಳಿಯುವುದಕ್ಕೆ ರಾಜ ಮಹಾರಾಜರುಗಳು ಮಾರುವೇಷದಲ್ಲಿ ತಿರುಗಾಡಿ ಜನರ ಕಷ್ಟಗಳನ್ನು ತಿಳಿದುಕೊಳ್ಳುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಕೂಡ ಇದೆ ರೀತಿ ಜನರ ಬೆಂಬಲಕ್ಕೆ ನಿಲ್ಲಬೇಕು ಎಂದು ಚರಣ್ ಸಿಂಗ್ ಅವರು ತೋರಿಸಿಕೊಟ್ಟಿದ್ದರು.
ಇದೆ ರೀತಿ ಆಂಧ್ರಪ್ರದೇಶದಲ್ಲಿ ಸೀನಿಯರ್ SP ಆಗಿದ್ದ ಸಿದ್ದಾರ್ಥ್ ಕೌಶಲ್ ಅಲ್ಲಿನ ಖಡಕ್ ಅಧಿಕಾರಿ ಆಗಿದ್ದು. ತಮ್ಮ ಸ್ಟೇಷನ್ ಲಿ ಇರುವ ಸಿಬಂದಿ ಎಷ್ಟು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಯಲು ಕೆಲವು ಸರಿ ತಿರುಗುತ್ತಿದ್ದರು.ಸ್ಟೇಷನ್ ಗೆ ದೂರು ಕೊಡಲು ಬರುವ ಜನರಿಗೆ ಹೇಗೆ ಸ್ಪದಿಸುತ್ತಾರೆ, ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಸಿದ್ದಾರ್ಥ್ ಗಮನಿಸುತ್ತಿದ್ದರು.ಹೀಗೆ ಹೊಂಗೋಲಿ ನಗರದ ಸ್ಟೇಷನ್ ನಲ್ಲಿ ಅಧಿಕಾರಿಗಳ ಕರ್ತವ್ಯ ನಿಷ್ಠೆ ಎಷ್ಟ್ರು ಮಟ್ಟಿಗೆ ಇದೆ ಎಂಬುದನ್ನು ತಿಳಿಯುವ ಸಲುವಾಗಿ ಜಗದೀಶ್ ಎಂಬುವರನ್ನು ಮಾರುವೇಷದಲ್ಲಿ ಹೋಗಿ ಪರಿಶೀಲನೆ ಮಾಡುವಂತೆ ಆದೇಶಿಸುತ್ತಾರೆ.
ನಂತರ ಸಾಮಾನ್ಯ ಮನುಷ್ಯನಂತೆ ಬಂದ ಜಗದೀಶ್ ತನ್ನ ಮೊಬೈಲ್ ಅನ್ನು ಯಾರೂ ಕಳ್ಳತನ ಮಾಡಿದ್ದಾರೆ. ಅದರ ವಿರುದ್ಧ ದೂರನ್ನು ಕೊಡಬೇಕು ಎಂದು ಹೇಳುತ್ತಾರೆ.ಅದಕ್ಕೆ ಅಲ್ಲಿನ ಅಧಿಕಾರಿಗಳು ತಾತ್ಸಾರದ ಉತ್ತರವನ್ನು ನೀಡುತ್ತಾರೆ. ಕೆಲಸಕ್ಕೆ ಬೇಡದೆ ಇರುವುದನ್ನು ಹೇಳಿ ಅಲ್ಲಿಂದ ಹೋಗುವುದಕ್ಕೆ ಜಗದೀಶ್ ಅವರಿಗೆ ಹೇಳುತ್ತಾರೆ.ನಂತರ ರಶೀದಿ ಕೊಡದೆ ದೂರನ್ನು ಬರೆಯುತ್ತಾರೆ. ನಂತರ ಕಳೆದು ಹೋದ IMEI ಸಂಖ್ಯೆ ಪ್ರೂಫ್ ತೆಗೆದುಕೊಂಡು ಬಾ ಎಂದು ನಿರ್ಲಕ್ಷದಿಂದ ಹೇಳುತ್ತಾರೆ. ಇದೇ ವಿಷಯದಲ್ಲಿ ಜಗದೀಶ್ ಮತ್ತು ಅಧಿಕಾರಿಗಳಿಗೆ ತುಂಬಾ ವಾಗ್ವಾದ ನಡೆಯುತ್ತದೆ. ಜಗದೀಶ್ ಅವರ ಬಗ್ಗೆ ತಿಳಿಯದೆ ಅಧಿಕಾರಿಗಳು ಹೇಗೆ ಬೇಕೋ ಹಾಗೆ ಮಾತಾಡುತ್ತಾರೆ.
ನಂತರ ಜಗದೀಶ್ ಅವರು ಏನೂ ಹೇಳದೆ ಅಲ್ಲಿಂದ ಹೋದ ಬಳಿಕ ಅಲ್ಲಿ ನಡೆದ ಎಲ್ಲಾ ವಿಷಯವನ್ನು SP ಅವರಿಗೆ ತಿಳಿಸುತ್ತಾರೆ.ತಡ ಮಾಡದೇ SP ಅವರು ಆ ರೀತಿ ನಡೆದುಕೊಂಡ ಅಧಿಕಾರಿಗಳ ಮೇಲೆ ಸಸ್ಪೆನ್ಷನ್ ನೋಟಿಸ್ ಜಾರಿ ಆಗುತ್ತದೆ.ಸ್ವತಂತ್ರ ಸಿಕ್ಕು ಇಷ್ಟು ವರ್ಷ ಆದರು ಒಂದು ದೂರು ಕೊಡುವುದಕ್ಕೂ ಜನರು ತುಂಬಾ ಹೋರಾಟ ಮಾಡಬೇಕು.ದೂರು ದಾಖಲಿಸಲು ಪೊಲೀಸರೆ ನಿರಾಕರಿಸಿದರೆ ಅನ್ಯಾಯಕ್ಕೆ ಒಳಗಾದ ಜನ ಬೇರೆ ಎಲ್ಲಿಗೆ ತಾನೇ ಹೋಗಬೇಕು.ಅವತ್ತು ಪ್ರಧಾನಿ ಅವರೇ ಮಾರು ವೇಷ ಧರಿಸಿದ್ದರು ಆದರೆ ಇವತ್ತಿನ ನಾಯಕರು ತಮ್ಮ ವಿದೇಶ ಪ್ರಯಾಣಕ್ಕೆ ಸ್ವಲ್ಪ ಬ್ರೇಕ್ ಹಾಕಿ ಭಾರತದಲ್ಲಿ ಸಾಮಾನ್ಯರಂತೆ ತಿರುಗಾಡಿದರೆ ಎಷ್ಟೋ ಸಮಸ್ಸೆ ಕಡಿಮೆ ಆಗುತ್ತದೆ.