ಈ ಎಣ್ಣೆಯ ಉಪಯೋಗ ಹಲವಾರು!ಕೂದಲ ಆರೈಕೆ ಇಂದ ಹಿಡಿದು ಚರ್ಮದ ರಕ್ಷಣೆಗೆ ಉತ್ತಮ ಆಯ್ಕೆ ಈ ಎಣ್ಣೆ! ಸ್ಕಿನ್ ಕೇರ್

0
903

ಚರ್ಮ ಹಾಗೂ ಕೂದಲ ಅರೈಕೆಗೆ ಗೊಂದಲ ಇದ್ದೆ ಇರುತ್ತದೆ.ಇದಕ್ಕೆ ಉತ್ತಮ ಆಯ್ಕೆ ಹರಳೆಣ್ಣೆ .ಹರಳೆಣ್ಣೆ ಕೂದಲು, ಚರ್ಮ,ಕೀಲು,ನೋವು ದೇಹದ ನೋವು ಕಾಲುಗಳ ಅರೈಕೆ ಹೀಗೆ ಇತ್ಯಾದಿ ಸಮಸ್ಸೆಗಳನ್ನು ಗುಣಪಡಿಸುವ ಅಂಶವನ್ನು ಹೊಂದಿದೆ. ಅದರಲ್ಲೂ ಮುಖ್ಯವಾಗಿ ಕೆಲವು ಸಮಸ್ಸೆಗಳನ್ನು ಗುಣ ಪಡಿಸಲು ಹರಳೆಣ್ಣೆ ಬಹಳ ಉಪಯೋಗಕಾರಿ.

ತ್ವಚೆಯನ್ನು ಮೊಯ್ಸಚರ್ ರೈಸರ್ ಮಾಡುತ್ತದೆ. ಮುಖವನ್ನು ಸ್ವಚ್ಛಗೊಳಿಸಿದ ನಂತರ ಯಾವಾಗಲು ಮೊಯ್ಸಚರ್ ರೈಸರ್ ಅನ್ನು ಹಚ್ಚಬೇಕು.ಆರೋಗ್ಯಕರ ಚರ್ಮಕ್ಕೆ ಮೊಯ್ಸಚರ್ ರೈಸರ್ ಉತ್ತಮ.ಒಂದು ಅಥವಾ ಎರಡು ಹರಳೆಣ್ಣೆ ತೆಗೆದುಕೊಂಡು ಅದನ್ನು ಬೆರಳ ತುದಿಯಲ್ಲಿ ಹಚ್ಚಿ ನಂತರ ಮುಖ ಮತ್ತು ಕುತ್ತಿಗೆಗೆ ಹಚ್ಚಿ.ಈ ರೀತಿ ಮಾಡುವುದರಿಂದ ನೆರಿಗೆಗಳು ಕೂಡ ಕಡಿಮೆ ಆಗುತ್ತದೆ ಹಾಗೂ ತ್ವಚೆಯ ಅರೋಗ್ಯವು ಕೂಡ ಚೆನ್ನಾಗಿ ಇರುತ್ತದೆ.

ಮುಖದ ಕಲೆಗಳನ್ನು ಹೋಗಲಾಡಿಸುತ್ತದೆ ಕೆಲವು ಹನಿ ಹರಳೆಣ್ಣೆ ಮತ್ತು ಸಮಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಹಾಗೂ ಮುಖದಲ್ಲಿ ಕಲೆ ಇರುವ ಜಾಗಕ್ಕೆ ಹಚ್ಚಿ.ತೆಂಗಿನ ಎಣ್ಣೆಯೊಂದಿಗೆ ಹರಳೆಣ್ಣೆ ಕಪ್ಪು ಕಲೆಗಳನ್ನು ಉತ್ತಮವಾಗಿ ಕಾರ್ಯ ನಿರ್ವಯಿಸುತ್ತದೆ.ಇದನ್ನು ಡಾರ್ಕ್ ಸರ್ಕಲ್ ಗೂ ಕೂಡ ಹಚ್ಚಬಹುದು.

ಕಣ್ಣಿನ ಅರೈಕೆಗೆ ಉತ್ತಮ:ಕಣ್ಣಿನ ಊತಕ್ಕೆ ಹರಳೆಣ್ಣೆ ಅತೀ ಉತ್ತಮ.ಅಗೈಯಲ್ಲಿ ಕೆಲವು ಹನಿ ಅಗೈಯಲ್ಲಿ ತೆಗೆದುಕೊಂಡು ಕಣ್ಣುಗಳ ಸುತ್ತ ವೃತ್ತಕರವಾಗಿ ನಿಧಾನವಾಗಿ ಮಸಾಜ್ ಮಾಡಬೇಕು.ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕಣ್ಣುಗಳಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ.

ತಲೆ ಕೂದಲಿನ ಆರೈಕೆಗೆ ಉತ್ತಮ:ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು ಹರಳೆಣ್ಣೆ ಯನ್ನು ನೆತ್ತಿಗೆ ಮತ್ತು ಕೂದಲ ಮೇಲೆ ಹಚ್ಚಿ.ಹರಳೆಣ್ಣೆ ಸ್ವಲ್ಪ ದಪ್ಪವಾಗಿ ಇರುವುದರಿಂದ ಕೂದಲಿಗೆ ಹಚ್ಚುವುದಕ್ಕೆ ಕಷ್ಟ ಆಗುತ್ತದೆ. ಆದ್ದರಿಂದ ಹರಳೆಣ್ಣೆ ಜೊತೆ ಸ್ವಲ್ಪ ತೆಂಗಿನ ಎಣ್ಣೆ ಬೆರೆಸಿ. ನಂತರ ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದನ್ನು ವಾರಕ್ಕೆ ಎರಡು ಬಾರಿ ಹಚ್ಚಿ ಇದು ಕೂದಲು ಉದುರುವುದನ್ನು ತಡೆದು ಬೇರುಗಳನ್ನು ಬಲ ಪಡಿಸಲು ಸಹಾಯ ಮಾಡುತ್ತದೆ ಮತ್ತು ಕೂದಲ ಬೆಳವಣಿಗೆಗೆ ಉತ್ತೇಜಿಸುತ್ತದೆ.ತಲೆ ಹೊಟ್ಟು ಕೂಡ ನಿವಾರಣೆ ಆಗುತ್ತದೆ.

ಕೀಲು ನೋವು ಅಥವಾ ಸಂಧಿವತಕ್ಕೆ ಪರಿಹಾರ ದೊರೆಯುತ್ತದೆ.ಹರಳೆಣ್ಣೆಯಲ್ಲಿ ರಿಸೀಲಾನಿಕ್ ಆಮ್ಲ ಇದೆ. ಇದು ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೀಲು ನೋವು ಮತ್ತು ಸಂಧಿವಾತ ನೀವಾರಿಸಲು ಸ್ವಲ್ಪ ಹರಳೆಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ ಇದನ್ನು ನೋವು ಇರುವ ಜಾಗದ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಹಾಗೆ ಮಸಾಜ್ ಮಾಡಿ. ಮಸಾಜ್ ಮಾಡಿದ ನಂತರ ಬಿಸಿ ಶಾಖವನ್ನು ಕೊಡಿ.ಇದರಿಂದ ಚರ್ಮದ ಪದರದಲ್ಲಿ ತೈಲವು ಆಳವಾಗಿ ಹೀರಿಕೊಳ್ಳುತ್ತದೆ.ಸ್ನಾಯುಗಳು ಸಡಿಲವಾಗುತ್ತದೆ ಮತ್ತು ನೋವು ಕಡಿಮೆ ಆಗುತ್ತದೆ.

LEAVE A REPLY

Please enter your comment!
Please enter your name here