ಕೋಲಾರದ ರೈತ ನೀರಿಗಾಗಿ ಮಾಡಿದ ಐಡಿಯಾ ಏನು ಗೊತ್ತಾ!
ಕಸದಿಂದ ರಸ ತೆಗೆಯುವ ಮಾತು ಇದೆ ಆದರೆ ಈ ಮಾದರಿ ರೈತ ಅನುಪಯುಕ್ತ ಕೊಳಚೆ ನೀರಿನಿಂದ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ.ಈ ರೈತ ಭಾರತನಾಡಿನಲ್ಲಿ ಬೆಳೆಯುತ್ತಿರುವುದು ಒಳ್ಳೆಯ ಬೆಳೆ ಆಗಿದೆ. ಇವರ ಹೆಸರು ಅಂಬರೀಶ್ ಅಂತ ಕೋಲಾರದ ಬಂಗಾರದ ಪೇಟೆ ತಾಲೂಕಿನ ಜ್ಯೋತಿನಹಳ್ಳಿ ಗ್ರಾಮದ ಯುವ ರೈತ.ಕೋಲಾರ ಬರದ ನಾಡು.ಮಳೆ ಬಂದರೆ ಬೆಳೆ ಬೆಳೆಯುವುದು ಅಸಾಧ್ಯ. ಅಂತರ್ಜಲ ಪಾತಾಳ ಸೇರಿಕೊಂಡಿದೆ. ನದಿ ಮೂಲವಂತು ಇಲ್ಲವೇ ಇಲ್ಲ.
ಆದರು ಇಲ್ಲಿನ ರೈತರು ಛಲ ಬಿಡದೆ ಬಿಸಿಲನಾಡಿನಲ್ಲಿ ಮುತ್ತಿನಂತ ಬೆಳೆಗಳನ್ನು ಬೆಳೆದು ರಾಜ್ಯದ ರೈತರಿಗೆ ಮಾದರಿಯಾಗುತ್ತಿದ್ದಾರೆ. ನೀರು ಇಲ್ಲದೆ ಬೇಸತ್ತ ಯುವ ರೈತ ಅಂಬರೀಶ್ ನೀರಿಗಾಗಿ ಮಾಡಿದ್ದು ಕೂಡ ಮಾಸ್ಟರ್ ಪ್ಲಾನ್.ಇದಕ್ಕಾಗಿ ಇವರು ಯಾವುದೇ ಬೋರ್ ವಿಲ್ ಕೊರೆಸಿಲ್ಲ, ಬಾವಿಯನ್ನು ತೆಗೆಸಿಲ್ಲ. ಇದರ ಬದಲಿಗೆ ಕೃಷಿಗೆ ಬಳಸುತ್ತಿರುವುದು ಊರಿನ ಕೊಳಚೆ ನೀರು.
ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅದೇ ಉದ್ಯೋಗವನ್ನು ಮಾಡುತ್ತಿದ್ದಾರೆ ಬದುಕು ಕಷ್ಟವಾಗುತ್ತೆ ಅಂತ ತಮಗೆ ಇದ್ದ ಅರ್ಧ ಎಕ್ಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆಯಲು ಊರಿನಿಂದ ಬರುವ ಕೊಳಚೆ ನೀರನ್ನು ಒಂದು ಗುಂಡಿ ಮಾಡಿ ಅದ್ರಲ್ಲಿ ಸಂಗ್ರಹಿಸಿ ಈಗ ಅದೇ ನೀರನ್ನು ಬಳಸಿಕೊಂಡು ಬಂಗಾರದಂತಹ ಬೆಳೆಯನ್ನು ಬೆಳೆಯುತ್ತಿದ್ದಾರೆ.ಕೊಳಚೆ ನೀರನ್ನು ಡ್ರಿಪ್ಸ್ ಮೂಲಕ ಹಾಕುತ್ತ ಅರ್ಧ ಎಕ್ಕರೆ ಜಮೀನಿನಲ್ಲಿ ಕರಿಬೇವು, ಶ್ರೀಗಂಧ ಸೇರಿದಂತೆ 600 ಜಾತಿಯ ವಿವಿಧ ಸಸಿಗಳನ್ನು ನೆಟ್ಟಿದ್ದಾರೆ.ಅಷ್ಟೇ ಅಲ್ಲದೆ 60ಕ್ಕೂ ಹೆಚ್ಚು ಕೋಳಿಗಳನ್ನು ಸಾಕಿದ್ದಾರೆ. ಕೋಲಾರದ ಬರದ ಜಿಲ್ಲೆಯಲ್ಲಿ ಹೊಚ್ಚ ಹೊಸ ಐಡಿಯಾ ಮೂಲಕ ಕೃಷಿಯಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ.