ಪುರುಷರು ಸಂಗಾತಿಯೊಡನೆ ಹೇಗಿರಬೇಕು! ಈ ಬಗ್ಗೆ ಏನು ಹೇಳುತ್ತಾರೆ ಆಚಾರ್ಯ ಚಾಣಕ್ಯರು?

Featured-Article

ಮಾನವನ ಜೀವನಕ್ಕೆ ಸಂಬಂಧಿಸಿದಂತೆ ಚಾಣಕ್ಯರು ಬಹಳನೇ ಸತ್ಯವಾದ ಸಂಗತಿಗಳನ್ನು ಹೇಳಿದ್ದಾರೆ.ಪ್ರೀತಿ ಮತ್ತು ಮದುವೆಯ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಪುರುಷರು ಯಾವ ಗುಣಗಳನ್ನು ಹೊಂದಿರಬೇಕು ಎಂಬುದನ್ನು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ.

1, ಮಹಿಳೆಯರಿಗೆ ಗೌರವವನ್ನು ನೀಡಿಮಹಿಳೆ ಮತ್ತು ಪುರುಷರ ನಡುವಿನ ಸಂಬಂಧ ಬಲವಾಗಿ ಇರಬೇಕು ಎಂದರೆ ಪುರುಷರಲ್ಲಿ ಮಹಿಳೆಯರನ್ನು ಗೌರವಿಸುವ ಗುಣ ಇರಬೇಕು. ಪುರುಷರ ಈ ಗುಣ ಅವರ ಮನೆಯಿಂದಲೇ ಪ್ರಾರಂಭವಾಗುತ್ತದೆ. ಪುರುಷರು ತಮ್ಮ ತಾಯಿ ಸಹೋದರಿ ಸೇರಿದಂತೆ ಮನೆಯ ಇತರ ಮಹಿಳೆಯರನ್ನು ಗೌರವಿಸುವುದಕ್ಕೆ ಕಲಿತುಕೊಳ್ಳಬೇಕು. ತನ್ನ ಕುಟುಂಬದಲ್ಲಿರುವ ಮಹಿಳೆಯನ್ನು ಗೌರವಿಸುತ್ತಾನೊ ಆಗ ಮಾತ್ರ ಆ ವ್ಯಕ್ತಿ ಹೊರಗಿನ ಮಹಿಳೆಯರನ್ನು ಗೌರವಿಸುತ್ತಾನೆ.ಮನೆಯ ಮಹಿಳೆಯರನ್ನು ಗೌರವಿಸುವ ವ್ಯಕ್ತಿ ತಾನು ಪ್ರೀತಿಸಿದ ಹುಡುಗಿಯನ್ನು ಅಥವಾ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತಾರೆ ಚಾಣಕ್ಯರು.

2, ವೈವಾಹಿಕ ಜೀವನದಲ್ಲಿ ನಿಷ್ಠೆ ತುಂಬಾ ಮುಖ್ಯ.ಯಶಸ್ವಿ ವೈವಾಹಿಕ ಜೀವನಕ್ಕೆ ಮತ್ತು ಪ್ರೀತಿ ಜೀವನಕ್ಕೆ ಪುರುಷನಲ್ಲಿ ಇರಬೇಕಾದ ಎರಡನೆಯ ಮುಖ್ಯ ಗುಣ ನಿಷ್ಠೆ ಎಂದು ಚಾಣಕ್ಯರು ಹೇಳುತ್ತಾರೆ. ಚಾಣಕ್ಯರ ಪ್ರಕಾರ ಓರ್ವ ಪುರುಷ ತನ್ನ ಹೆಂಡತಿ ಅಥವಾ ಪ್ರೇಯಸಿಯನ್ನು ವರೆತುಪಡಿಸಿ ಬೇರೆ ಯಾವುದೇ ಮಹಿಳೆ ಹತ್ತಿರ ಅಕರ್ಷಿತ ಅಗದೆ ಇದ್ದಾರೆ ಜೀವನಪೂರ್ತಿ ಆತನ ಪ್ರೀತಿ ವೈವಾಹಿಕ ಜೀವನ ಯಶಸ್ಸನ್ನು ಸಾಧಿಸುತ್ತದೆ.

3, ಸಂಗಾತಿಯನ್ನು ರಕ್ಷಣೆ ಮಾಡಬೇಕು. ಇದು ಪುರುಷನ ಮೊದಲ ಆದ್ಯತೆ.ಸುಖ, ದುಃಖ, ಕಷ್ಟ,ನೋವು-ನಲಿವು ಇದೆಲ್ಲದ್ರಲ್ಲೂ ನಾನು ಇದ್ದೇನೆ ಎನ್ನುವ ಭಾವನೆಯನ್ನು ಪುರುಷ ಮೂಡಿಸಬೇಕಾಗುತ್ತದೆ. ಪ್ರತಿಯೊಬ್ಬ ಹೆಂಡತಿಯು ಮದುವೆಯ ಮುಂಚೆ ತನ್ನ ತಂದೆಯಿಂದ ರಕ್ಷಣೆ ಬಯಸಿದಂತೆ ತನ್ನ ಗಂಡನಿಂದ ಮದುವೆಯ ಬಳಿಕ ರಕ್ಷಣೆಯನ್ನು ಬಯಸುತ್ತಾಳೆ. ಪುರುಷರು ತಮ್ಮ ಹೆಂಡತಿಗೆ ನೀಡುವಂತಹ ರಕ್ಷಣೆ ಅವರಿಗೆ ಭರವಸೆಯ ರಕ್ಷಾ ಕವಚ ಇದ್ದಂತೆ ಎಂದು ಹೇಳಬಹುದು.

4, ಯಾವುದೇ ವೈವಾಹಿಕ ಜೀವನದ ಯಶಸ್ಸು ಹೆಂಡತಿಗೆ ನೀಡುವಂತಹ ತೃಪ್ತಿಯ ಮೇಲೆ ಆಧಾರಿತವಾಗಿದೆ. ಪತಿಯು ತನ್ನ ಪತ್ನಿಗೆ ಎಲ್ಲಾ ರೀತಿಯ ಆನಂದವನ್ನು ನೀಡುವುದರ ಜೊತೆಗೆ ದೈಹಿಕ ಆನಂದವನ್ನು ನೀಡಿದರೆ ಮಾತ್ರ ಪುರುಷನ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ. ಗಂಡ-ಹೆಂಡತಿ ಸಂಬಂಧಕ್ಕೆ ಎಷ್ಟೇ ವಯಸ್ಸಾದರೂ ಇಬ್ಬರು ಯಾವಾಗಲೂ ಪರಸ್ಪರ ಕೋಮಲ ಸ್ಪರ್ಶವನ್ನು ಇಟ್ಟುಕೊಳ್ಳಬೇಕು. ಇವುಗಳನ್ನೆಲ್ಲ ಪಾಲಿಸಿದರೆ ಮಾತ್ರ ಸಂಸಾರ ಯಶಸ್ವಿಯಾಗುತ್ತದೆ ಮತ್ತು ಬದುಕು ಸುಂದರವಾಗಿರುತ್ತದೆ.

Leave a Reply

Your email address will not be published.