ರತನ್ ಟಾಟಾ ಭಾರತ ಉದ್ಯಮಿ ಕ್ಷೇತ್ರದಲ್ಲಿ ಒಂದು ಪ್ರೆತ್ಯೇಕ ಸ್ಥಾನ ಹಾಗೂ ತೂಕವನ್ನು ಹೊಂದಿದೆ.ಅವರನ್ನು ಭಾರತ ಉದ್ಯಮಿದಾರರ ಪಿತಾಮಹ ಎಂದು ಕರೆಯುತ್ತಾರೆ.ತಮ್ಮ ಒಡೆತನದ ಸಂಸ್ಥೆ ಎಷ್ಟೇ ನಷ್ಟದಲ್ಲಿ ಇರಲಿ ಅದನ್ನು ಮೇಲೆ ತರುವಲ್ಲಿ ದಿಟ್ಟತನ ಇದೀಯಲ ಅದು ಸ್ಫೂರ್ತಿದಾಯಕವಾದದ್ದು.ಇನ್ನು ರತನ್ ಟಾಟಾ 90% ಲಾಭಂಶವನ್ನ ಸೇವಾ ಕಾರ್ಯಗಳಿಗೆ ಟ್ರಸ್ಟ್ ಗಳಿಗೆ ಚಾರಿಟಿಗಾಳಿಗೆ ಅಂತಾನೆ ವಿನಿಯೋಗಿಸುತ್ತಾರೆ.ಈ ಕಾರಣದಿಂದ ಉದ್ಯಮಿದಾರರಿಗಿಂತನು ಹೆಚ್ಚಾಗಿ ಓರ್ವ ಮಾನವತೆಯ ಜನ ಎಂದು ಕರೆಯುತ್ತಾರೆ.
ಇವರು ಸಂಕಷ್ಟ ಸಮಯದಲ್ಲಿ ಭಾರತದಲ್ಲಿ ಹಲವು ರೀತಿಯಲ್ಲಿ ನೆರವು ಆಗಿದ್ದರೆ.ಅಷ್ಟೇ ಅಲ್ಲದೆ ತನ್ನ ದೇಶಕ್ಕೆ ಹಾಗೂ ಜನರಿಗೆ ಏನೇ ಕಷ್ಟ ಬರಲಿ ಅವರಿಗಾಗಿ ತನ್ನ ಒಟ್ಟು ಅಸ್ತಿಯನ್ನು ನೀಡುವುದಕ್ಕೂ ಸಿದ್ದ ಅಂತ ರತನ್ ಅವರು ಹೇಳುತ್ತಿರುತ್ತಾರೆ.ರತನ್ ಟಾಟಾ ಅವರ ರೋಚಕ ವ್ಯಕ್ತಿತ್ವದ ಪರಿಚಯವನ್ನು ತಿಳಿಸುತ್ತೇವೆ.ರತನ್ ಟಾಟಾ ಅವರ ಜೊತೆ ಒಬ್ಬ ಬಾಲಕ ಇದ್ದಾನೆ. ಆದರೆ ಅವನು ಸಂಬಂಧಿ ಕೂಡ ಅಲ್ಲ,ಪಾಟ್ನರ್ ಕೂಡ ಅಲ್ಲ ಅವನು ಯಾರೆಂದರೆ ರತನ್ ಅವರ ವೈಯಕ್ತಿಕ ಸ್ನೇಹಿತ.
ಇವನ ಹೆಸರು ಶಾಂತನು ನೋಯ್ಡ್. ಈತ 2014 ರಲ್ಲಿ ತನ್ನ ಇಂಜಿನಿಯರ್ ಪದವಿಯನ್ನು ಪೂರೈಸಿಕೊಂಡು ಟಾಟಾ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಾನೆ.ತನ್ನ ಆಫೀಸ್ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬರುತ್ತೀರುವಾಗ ನಡು ರಸ್ತೆಯಲ್ಲಿ ಒಂದು ನಾಯಿ ರಕ್ತ ಸ್ರವದಿಂದ ನರಳಾಡುತ್ತಿರುತ್ತದೆ.ಶಾಂತನು ನೋಯ್ಡ್ ಗೆ ನೋಡಿ ಬಹಳ ಕನಿಕರ ಉಂಟಾಯಿತು ತಕ್ಷಣ ಆತ ತನ್ನ ಸ್ನೇಹಿತರಿಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡ ಹಾಸ್ಪಿಟಲ್ ಗೆ ಕರೆದುಕೊಂಡು ಹೋದ
ನಂತರ ದೇವರ ದಯೇಯಿಂದ ಆ ನಾಯಿ ಬದುಕಿ ಉಳಿಹಿತು.ಈ ಘಟನೆ ಬಳಿಕ ಶಾಂತನುಗೆ ಒಂದು ಗಂಭೀರವಾದ ಯೋಜನೆ ಬರುತ್ತದೆ.ಇದೆ ರೀತಿ ಎಷ್ಟು ಬೀದಿ ನಾಯಿಗಳು ರಸ್ತೆಯಲ್ಲಿ ತೊಂದರೆ ಅನ್ನು ಅನುಭವಿಸುತ್ತಿದ್ದಾವೆ ಎಂದು ಇದಕ್ಕೆಲ್ಲ ಒಂದು ಪರಿಹಾರ ಕಂಡು ಹಿಡಿಯಬೇಕು ಎಂದು ಆತ ತನ್ನ ಸ್ನೇಹಿತರಿಗೆ ತಿಳಿಸಿದ.ಈ ಒಂದು ಐಡಿಯಾದಿಂದ ಆತನ ಜೀವನವೇ ಬದಲಾಗುತ್ತದೆ. ಪ್ರತಿ ನಿತ್ಯ ರೋಡ್ ಗಳಲ್ಲಿ ವಾಹನ ಸವರರ ಆತುರದಿಂದ ಬೀದಿ ನಾಯಿಗಳು ಅನೇಕ ರೀತಿಯ ಅಪಘಾತಕ್ಕೆ ಒಳಗಾಗುತ್ತವೆ.ಇದಕ್ಕೆ ಒಂದು ಅತ್ಯಾದುನಿಕ ಬೆಲ್ಟ್ ಅನ್ನು ಕಂಡು ಹಿಡಿದ.ಅದನ್ನು ಬೀದಿ ನಾಯಿಗೆ ಕೊರಳಿಗೆ ಹಾಕಿದಾಗ ರಾತ್ರಿ ವೇಳೆ ಓಡಾಡುವ ನಾಯಿಗಳ ಕುತ್ತಿಗೆ ಮೇಲೆ ಇರುವ ಈ ಬೆಲ್ಟ್ ವಾಹನ ಸವಾರರ ಹೆಡ್ ಲೈಟ್ ಗೆ ರೇಫ್ಲೆಕ್ಟ್ ಆಗಿ ಆಗುವ ಅನಾಹುತದಿಂದ ರಕ್ಷಣೆ ಪಡೆಯಬಹುದು.
ಶಾಂತನು ತನ್ನ ಘಳಿಕೆಯೆನ್ನಲಾ ಈ ಬೆಲ್ಟ್ ತಯಾರಿಸಿ ಕಣ್ಣಿಗೆ ಕಾಣಿಸಿದ ಬೀದಿ ನಾಯಿಗಳಿಗೆ ಹಾಕುತ್ತಿದ್ದ.ಶಾಂತನುಗೆ ಯಾವುದೇ ಪ್ರತಿಫಲ ಅಪೇಕ್ಷೆ ಇರಲಿಲ್ಲ. ಬೀದಿ ನಾಯಿಗಳ ಜೀವ ಉಳಿದರೆ ಸಾಕು ಅಂತ ಆತ ಶುರು ಮಾಡಿದ್ದ. ಯಾವಾಗ ಇದು ಉಪಕಾರಿ ಅನ್ನಿಸಿತೋ ಆಗ ಎಲ್ಲಾ ಕಡೆಯಿಂದಲೂ ಆತ ತಯಾರಿಸಿದ ಬೆಲ್ಟ್ ಗಳಿಗಾಗಿ ಬೇಡಿಕೆ ಬರುವುದಕ್ಕೆ ಶುರು ಆಯಿತು.ಪ್ರತಿಯೊಬ್ಬರು ಆದನ್ನು ಕೊಡು ಅಂತ ಕೇಳುವುದಕ್ಕೆ ಆರಂಭಿಸಿದರು.ತನ್ನ ಶ್ರಮ ಹಾಗೂ ಉದ್ದೇಶ ಸಾರ್ಥಕವಾಯ್ತು ಎಂದು ಸಂತೋಷ ಪಟ್ಟ.
ಇದನ್ನೇ ಒಂದು ಬಿಸಿನೆಸ್ ಮಾಡಬೇಕು ಲಕ್ಷತಾರ ಖರ್ಚು ಬೇಕು ಫಂಡ್ ಬೇಕು ಅಂತ ಶಾಂತನು ತಂದೆಯ ಬಳಿ ಕೇಳುತ್ತಾನೆ. ಅವರ ತಂದೆ ಟಾಟಾ ಅವರಿಗೆ ಒಂದು ಪತ್ರವನ್ನು ಬರೆದು ಕಳಿಸುವುದಕ್ಕೆ ಸಲಹೆ ಕೊಡುತ್ತಾರೆ.ನಂತರ ಒಂದು ಪತ್ರ ಬರೆದು ಟಾಟಾ ಅವರಿಗೆ ಪೋಸ್ಟ್ ಮೂಲಕ ತಲುಪಿಸಿದ.ಸ್ವಲ್ಪ ದಿನದಲ್ಲೆ ಟಾಟಾ ಅವರಿಂದ ಒಂದು ರಿಪ್ಲೇ ಬರುತ್ತದೆ.ಟಾಟಾ ಅವರು ಮುಂಬೈ ಕಚೇರಿಗೆ ಬಾ ಎಂದು ಶಾಂತನುಗೆ ಬರೆದು ಕಳುಹಿಸಿದರು.
ಮುಂಬೈಗೆ ಹೋದಾಗ ಅವನನ್ನು ಬರಮಾಡಿಕೊಂಡರು ಅವನ ಕಾಳಜಿ ಹಾಗೂ ಉದ್ದೇಶವನ್ನು ಹಾಡಿ ಹೊಗಳಿದರು ಮತ್ತು ಇದಕ್ಕೆ ಫಂಡ್ ಕೊಡುವುದಕ್ಕೆ ಒಪ್ಪಿಗೆ ಕೊಟ್ಟರು.ಅವರ ಸಹಾಯದಿಂದ ಮೋಟೋ ಪವರ್ಸ್ ಎಂಬ ಸಂಸ್ಥೆಯನ್ನು ಶಾಂತನು ಶುರು ಮಾಡಿದ.ಅದನ್ನು ಸ್ನೇಹಿತರಿಗೆ ವಹಿಸಿ ಶಾಂತನು ವಿದೇಶಕ್ಕೆ ಹೋಗುತ್ತಾನೆ.ಟಾಟಾ ಅವರು ಓದಿದ್ದ ಕಾಲೇಜ್ ನಲ್ಲಿ ಶಾಂತನು ಗೆ ಸೀಟ್ ಸಿಕ್ಕಿತ್ತು. ಈ ನಡುವೆ ಇಬ್ಬರಲ್ಲಿ ಸ್ನೇಹ ಬೆಳೆದು ಹೋಗಿತ್ತು.ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸದಲ್ಲಿ ನಿರತನ ಆದ ಕಡೆಗೆ ಒಂದು ದಿನ ತನ್ನ ಗ್ರಾಜುಯೇಷನ್ ಡೇ ಗೆ ಟಾಟಾ ಅವರು ಕೂಡ ಬಂದಿದ್ದನ್ನು ನೋಡಿ ಶಾಂತನು ಮುಖವಿಸ್ಮಿತಾನಾದ.
ನಂತರ ರತನ್ ಟಾಟಾ ಶಾಂತನು ಅನ್ನು ಒಂದು ಪ್ರೆಶ್ನೆ ಕೇಳಿದ ಭಾರತಕ್ಕೆ ಬಂದ ಮೇಲೆ ನನ್ನ ಬಿಸಿನೆಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತೀಯಾ ಅಂತ ಆ ಹುಡುಗನನ್ನು ಕೇಳುತ್ತಾರೆ.ಸಂತೋಷದಿಂದ ಶಾಂತನು ನ ಕಣ್ಣುಗಳಲ್ಲಿ ನೀರು ಬರುತಿತ್ತು.ಆ ಕ್ಷಣ ಏನು ಮಾಡಬೇಕು ಅಂತ ತೋಚಲಿಲ್ಲ.ಅವರ ಬೃಹತ್ ಸಂಸ್ಥೆಯಲ್ಲಿ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುವ ಯೋಗ್ಯತೇ ಶಾಂತನುವಿನಲ್ಲಿ ಇತ್ತು.
ವಿದ್ಯಾ ಜೊತೆ ಅವರಿಗೆ ಸೆಳೆದದ್ದು ಶಾಂತನು ಸ್ವಭಾವ.ಶಾಂತನು ಇನ್ನು ಚಿಕ್ಕವನು ಕೆಲಸ ಮಾಡಿಕೊಂಡೆ ಬೀದಿ ಬದಿಯ ಮೂಕ ಜೀವಿಗಳಿಗಾಗಿ ಆತ ಸಹಾಯ ಮಾಡಿದ್ದ.ರತನ್ ಟಾಟಾ ಅವರು ಅವನಲ್ಲಿ ಇದ್ದ ಗುಣಕ್ಕೆ ಮಾರು ಹೋಗಿದ್ದರು.ಅವರು ಆತನಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಿದ್ದರು.ಅವತ್ತಿನಿಂದ ಶಾಂತಾನು ರತನ್ ಅವರ ಬಲಗೈ ಬಂಟನಾದ.ಮೀಟಿಂಗ್ ಗೆ ಅವರ ಜೊತೆ ಹೋಗುವುದು ಪ್ರಮುಖ ನೋಟ್ಸ್ ದಾಖಲಿಸುವುದು.ಪ್ರತಿ ದಿನ ಕಾರ್ಯಗಳ ಬಗ್ಗೆ ಚರ್ಚೆ ಮಾಡುವುದು.ರತನ್ ಎಲ್ಲಿ ಇರುತ್ತಾರೋ ಶಾಂತನು ಕೂಡ ಅವರ ಬಳಿ ಇರುತ್ತನೇ.ಇವರ ಇಬ್ಬರ ಸ್ವಭಾವ ಮನೋಭಾವ, ಚಿಂತನೆ, ದೃಷ್ಟಿಕೋನ, ಅಭಿರುಚಿ, ಆಸಕ್ತಿ ಇದೆಲ್ಲ ಒಂದೇ.ಟಾಟಾ ಅವರ ಪ್ರತಿಯೊಂದು ವಿಷಯವು ಶಾಂತನುಗೆ ಗೊತ್ತು.ನನಗೆ ಏನೇ ತೊಂದರೆ ಆದರು ಮೊದಲು ನೆನಪು ಮಾಡಿಕೊಳ್ಳುವುದು ರತನ್ ಅವರನ್ನೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಶಾಂತನು ತುಂಬಾನೇ ಅದೃಷ್ಟವಂತ ರತನ್ ಅವರ ಸ್ನೇಹ ಆತ್ಮ ವಿಶ್ವಾಸವನ್ನು ಗಳಿಸಿದ್ದಾನೆ.ದಯವೇ ಧರ್ಮದ ಮೂಲ ಎಂದು ಹೇಳುತ್ತಾರೆ. ದಯಾ ಗುಣ ಒಂದು ಇದ್ದಾರೆ ಆ ದೇವರು ಕೂಡ ಶರಣಗಾಬಹುದು. ಇದಕ್ಕೆ ಶಾಂತನು ಹಾಗೂ ರತನ್ ಟಾಟಾ ಅವರ ಈ ಅಪರೂಪದ ಸಂಗಮವೇ ಉತ್ತಮ ಸಾಕ್ಷಿ.