ಎಷ್ಟೇ ಬಾಯಿ ತೊಳೆದರೂ ಎಷ್ಟೇ ಹಲ್ಲು ಉಜ್ಜಿದರು ಬಾಯಿಯಿಂದ ವಾಸನೆ ಬರುತ್ತಿದೆಯಾ?

Health & Fitness

ಸಾಮಾನ್ಯವಾಗಿ ಬಹುತೇಕರಿಗೆ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ.ಇನ್ನು ಪ್ರತಿದಿನ ಹಲ್ಲುಜ್ಜಿದರೂ ಹೀಗೆ ಕೆಟ್ಟ ವಾಸನೆ ಬರುತ್ತಿರುತ್ತದೆ ಇದರಿಂದ ಅನೇಕರು ಮುಜುಗರಕ್ಕೆ ಒಳಗಾಗುತ್ತಾರೆ.ಇನ್ನೂ ಕೆಲವರು ಹಲ್ಲುಗಳನ್ನು ಸ್ವಚ್ಛ ಮಾಡಿಕೊಂಡು ದಂತ ವೈದ್ಯರ ಬಳಿ ತೋರಿಸಿಕೊಂಡಾಗಲು ಬಾಯಿಯ ದುರ್ಗಂಧ ಹೋಗಿರುವುದಿಲ್ಲ.ಇನ್ನೂ ಬಾಯಿ ದುರ್ಗಂಧ ಬರಲು ಕೇವಲ ಹಲ್ಲಿನ ಆರೋಗ್ಯ ಮುಖ್ಯವಲ್ಲ ಬದಲಾಗಿ ಅಜೀರ್ಣ ಸಮಸ್ಯೆಯೂ ಕೂಡ ಮುಖ್ಯ ಕಾರಣವಾಗಿರಬಹುದು.

ಇನ್ನು ನೀವು ಸೇವಿಸುವ ಆಹಾರ 3 ಗಂಟೆಗಳಿಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಾಗ ಹೊಟ್ಟೆಯಲ್ಲಿ ಆಹಾರ ಕೊಳೆತಂತಾಗಿ ಬಾಯಿಯಲ್ಲಿ ಕೆಟ್ಟ ವಾಸನೆ ಬರುತ್ತದೆ.ಹಾಗಾಗಿ ಹೊಟ್ಟೆಯಲ್ಲಿರುವ ಜಠರಾಗ್ನಿಯ ಔಷಧಿಯನ್ನು ಸೇವಿಸಬೇಕು.ಇನ್ನೂ ಮನೆಯಲ್ಲಿಯೇ ಜಠರಾಗ್ನಿಯನ್ನು ಹೆಚ್ಚಿಸಿಕೊಳ್ಳುವ ವಿಧಾನ ಎಂದರೆ ಜಠರಾಗ್ನಿಯನ್ನು ವೃದ್ಧಿಸಿಕೊಳ್ಳಲು ಜೀರಿಗೆ ಕಷಾಯ ಒಂದು ಅತ್ಯುತ್ತಮ ಔಷಧ.

ಒಂದು ಪಾತ್ರೆಗೆ 2 ಲೋಟ ನೀರು ಮತ್ತು ಒಂದು ಚಮಚ ಜೀರಿಗೆ ಹಾಕಿ 1 ಲೋಟ ಆಗುವವರೆಗೆ ಕುದಿಸಿ.ಈ ಕಷಾಯವನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ತಿಂಡಿಗೆ ಮುನ್ನ ಮತ್ತು ರಾತ್ರಿ ಊಟಕ್ಕಿಂತ ಮುಂಚೆ ಒಂದು ಲೋಟದಂತೆ 3 ತಿಂಗಳವರೆಗೆ ಸೇವಿಸುವುದರಿಂದ ಜಠರಾಗ್ನಿ ವೃದ್ಧಿಯಾಗಿ ಆಹಾರ ಸರಿಯಾದ ಸಮಯಕ್ಕೆ ಜೀರ್ಣವಾಗುತ್ತದೆ ಇದರಿಂದ ಬಾಯಿಯು ವಾಸನೆ ಬರುವುದಿಲ್ಲ.

ಧನ್ಯವಾದಗಳು.

Leave a Reply

Your email address will not be published.