ನಮ್ಮ ಶರೀರದ ಭಾಗಗಳಲ್ಲಿ ಕಿಡ್ನಿ ಕೂಡ ಒಂದು ಮುಖ್ಯವಾದ ಅಂಗವಾಗಿರುತ್ತದೆ ಏಕೆಂದರೆ ಕಿಡ್ನಿಯು ನಮ್ಮ ಶರೀರ ದಲ್ಲಿ ಸೇರಿಕೊಂಡಿರುವ ವಿಷ ಮತ್ತು ವೇಸ್ಟ್ ಪದಾರ್ಥಗಳನ್ನು ಸೋಸಲು ಸಹಾಯ ಮಾಡುತ್ತದೆ ಇದರಿಂದ ಆರೋಗ್ಯವಂತರಬಹುದು.ಇನ್ನೂ ಕೆಲವೊಮ್ಮೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಾಗ ನಮ್ಮ ದೇಹದಲ್ಲಿ ನಮಗೆ ಹಲ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.ಇನ್ನು ಅಂತಹ ಕೆಲವು ಪ್ರಮುಖ ಲಕ್ಷಣಗಳ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..
ಸದಾ ನಿರುತ್ಸಾಹದಿಂದ ಇರುವುದು,ಬಲಹೀನತೆಯಿಂದ ಕೂಡಿರುವುದು ಮತ್ತು ನಿಶಕ್ತಿಯಿಂದ ಕೂಡಿರುವುದು ಏಕೆಂದರೆ ಕಿಡ್ನಿ ಸಮಸ್ಯೆ ಹೊಂದಿದವರಲ್ಲಿ ವಿಟಮಿನ್ ಡಿ ಅಂಶವನ್ನು ದೇಹ ಗ್ರಹಿಸುವುದಿಲ್ಲ.ಮೂತ್ರದ ಬಣ್ಣ ಬದಲಾವಣೆ ಯೂ ಸಹ ಕಿಡ್ನಿ ಸಮಸ್ಯೆ ಇರಬಹುದು.ಕಣ್ಣುಗಳ ಹೂತ,ನಿದ್ರಾಹೀನತೆ,ಒಣ ಚರ್ಮದ ಸಮಸ್ಯೆ,ಕಿಡ್ನಿ ಇರುವ ಜಾಗದಲ್ಲಿ ಚುಚ್ಚಿದ ಅನುಭವವಾಗುವುದು,ಕಾಲುಗಳಲ್ಲಿ ಹೆಚ್ಚಾಗಿ ನೋವು,ಬೆನ್ನಿನ ಕೆಳಭಾಗದಲ್ಲಿ ನೋವು,
ನಾಲಿಗೆಯು ರುಚಿ ಗ್ರಹಿಸುವುದನ್ನು ಕಳೆದುಕೊಳ್ಳುವುದು,ಶರೀರ ಉಬ್ಬಿದ ರೀತಿಯಲ್ಲಿ ಕಾಣುವುದು,ಕೈ ಕಾಲು ಊದಿಕೊಳ್ಳುವುದು,ಟಾಕ್ಸಿನ್ಸ್ ಕಡಿಮೆಯಾಗಿ ಬಾಯಿಯಿಂದ ಹೆಚ್ಚಾಗಿ ದುರ್ವಾಸನೆ,ಹಸಿವು ಕಡಿಮೆಯಾಗುವುದು,ವಾಂತಿ ಸಮಸ್ಯೆ ಹೆಚ್ಚಾಗುವುದು,ಉಸಿರಾಟದ ಸಮಸ್ಯೆ,ಜ್ಞಾಪಕ ಶಕ್ತಿ ಕಡಿಮೆಯಾಗುವುದು,ತಣ್ಣನೆಯ ಅನುಭವ ಚಳಿಯ ಅನುಭವ.ಮೇಲೆ ತಿಳಿಸಿರುವ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ನಿಮಗೆ ಕಿಡ್ನಿ ಸಮಸ್ಯೆ ಇರುವ ಸಾಧ್ಯತೆ ಇರುತ್ತದೆ.
ಧನ್ಯವಾದಗಳು.