ಮಾಂಸಖಂಡಗಳಿಗೆ ಬಲಿಷ್ಠ ಶಕ್ತಿ, ಸಂತಾನ ಪ್ರಾಪ್ತಿ ಮಾಡುವ ಖರ್ಜೂರ!
ಖರ್ಜೂರ ಅನೇಕ ಸಸ್ಯಾಹಾರಿಗಳು ಮಾಂಸ ತಿನ್ನದಿರುವುದರಿಂದ ತಮಗೆ ಬೇಗ ಸುಸ್ತಾಗುತ್ತದೆ , ನಿಶ್ಯಕ್ತಿ ಕಾಡುತ್ತದೆ ಎನ್ನುತ್ತಾರೆ ಆದರೆ ಮಾಂಸಾಹಾರಕ್ಕಿಂತ ಸಸ್ಯಾಹಾರದಲ್ಲಿ ನಿಜವಾದ ಶಕ್ತಿ ಅಡಗಿದೆ ಅದರಲ್ಲೂ ಪ್ರಮುಖವಾಗಿ ಖರ್ಜೂರದಲ್ಲಿ ಫೈಬರ್ ಅಂಶ ಹಾಗೂ ದೇಹಕ್ಕೆ ಬೇಕಾಗಿರುವ ಶಕ್ತಿ ಇದೆ.ಖರ್ಜೂರ ಸೇವಿಸುವುದರಿಂದ ನಮ್ಮ ದೇಹ ಕೊಬ್ಬಿನಿಂದ ಕೂಡುವುದಿಲ್ಲ ಬದಲಾಗಿ ಮೂಳೆ ಮಾಂಸಗಳಿಗೆ ಶಕ್ತಿ ದೊರೆಯುತ್ತದೆ.ಖರ್ಜೂರವೂ ಹೆಚ್ಚಾಗಿ ಅರಬ್ ದೇಶಗಳಲ್ಲಿ ಬೆಳೆಯುತ್ತವೆ ಮತ್ತು ಅವು ಜಾಸ್ತಿ ಮರುಭೂಮಿಯಲ್ಲಿ ಬೆಳೆಯುತ್ತದೆ.
ದಿನಕ್ಕೆ 2 ಖರ್ಜೂರ ತಿಂದರೆ ನಮಗೆ ಯಾವುದೇ ರೀತಿಯ ಕಾಯಿಲೆ ಹತ್ತಿರವೂ ಸುಳಿಯುವುದಿಲ್ಲ.ಇನ್ನು ಅತಿಯಾಗಿ ಹಸಿವು ಆಗುವವರು ಅಂದರೆ ಹೊಟ್ಟೆ ತುಂಬ ಊಟ ಮಾಡಿದ ತಕ್ಷಣವೇ 5 ನಿಮಿಷದ ನಂತರ ಮತ್ತೆ ತಿನ್ನಬೇಕು ಅನ್ನಿಸುವುದು ಹಾಗೂ ಕೆಲವರಿಗೆ ನಿಶ್ಯಕ್ತಿ ಕಾಡುತ್ತಿರುತ್ತದೆ ಅಂಥವರಿಗೆ ಖರ್ಜೂರ ಒಂದು ಉತ್ತಮ ಪರಿಹಾರ ನೀಡಬಲ್ಲದು.ಹಬ್ಬ ಹರಿದಿನಗಳಲ್ಲಿ ಉಪವಾಸ ಮಾಡುವವರು ಉಪವಾಸ ಮುಗಿದ ನಂತರ ಆಹಾರ ಸೇವಿಸುವ ಮೊದಲು ಖರ್ಜೂರ ವನ್ನು ತಿನ್ನುವುದು ಒಳ್ಳೆಯದು ಇದರಿಂದ ದೇಹಕ್ಕೆ ಶಕ್ತಿ ಬರುತ್ತದೆ.
ದೇಹದ ಉಷ್ಣತೆಯನ್ನು ಖರ್ಜೂರ ಕಾಪಾಡುತ್ತದೆ.ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದಾಗ ಖರ್ಜೂರವನ್ನು ತಿಂದರೆ ನಮ್ಮದೇ ಹೆಚ್ಚಬೇಕಾದ ಅಗತ್ಯವಾದ ಪೋಷಕಾಂಶಗಳು ಸಿಗುತ್ತದೆ.ಅತಿಯಾಗಿ ಕೆಲಸ ಮಾಡುವವರಿಗೆ , ಶ್ರಮಜೀವಿಗಳಿಗೆ ಖರ್ಜೂರ ಒಂದು ಉತ್ತಮ ಫಲವಾಗಿದೆ.ಪುರುಷರಲ್ಲಿ ಲೈಂ ಗಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಧನ್ಯವಾದಗಳು.