ಎದೆಯಲ್ಲಿ ಕಫ ಕಟ್ಟಿದೆಯೇ!ಇದರ 1 ಚಮಚ ಕಫ ನಿವಾರಣೆಗೆ ಮನೆಮದ್ದು!

Health & Fitness

ಈಗ ದೇಶಾದ್ಯಂತ ಕೊರೊನಾದ ಎರಡನೆಯ ಅಲೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ.ಹಾಗಾಗಿ ಕೆಮ್ಮು ನೆಗಡಿ ಶೀತ ಕಾಣಿಸಿಕೊಂಡಾಗ ಎದೆಯಲ್ಲಿ ಕಫ ಕಟ್ಟುವುದು ಉಸಿರಾಟದ ತೊಂದರೆಯಂತಹ ಲಕ್ಷಣಗಳೂ ಕಾಣಬಹುದು
ಆದ್ದರಿಂದ ಯಾರಿಗೆ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಇರುತ್ತದೆಯೋ ಅಂಥವರು ಈ ಮನೆಮದ್ದನ್ನು ಬಳಸಿ ಗುಣಪಡಿಸಿಕೊಳ್ಳಬಹುದಾಗಿದೆ.

ಇನ್ನು ಕೇವಲ ಕೊರೊನ ಕಾರಣದಿಂದ ಎದೆಯಲ್ಲಿ ಕಫ ಹಾಗೂ ಗಂಟಲು ಕಟ್ಟುವುದು ಆಗುತ್ತದೆ ಎನ್ನಲು ಸಾಧ್ಯವಿಲ್ಲ ಬದಲಾಗಿ ವಾತಾವರಣದ ಬದಲಾವಣೆಯಿಂದ ಸಹ ಗಂಟಲು ಕಟ್ಟುವುದು ಮತ್ತು ಎದೆಯಲ್ಲಿ ಕಫ ಕಟ್ಟುವುದು ಆಗುತ್ತದೆ ಅಂತಹ ಸಮಯದಲ್ಲಿ
ಉಸಿರಾಡಲು ಕಷ್ಟವೆನಿಸುತ್ತದೆ.

ಇನ್ನು ಅಂತಹ ಸಂದರ್ಭದಲ್ಲಿ ಈ ಮನೆಮದ್ದನ್ನು ಬಳಸುವುದರಿಂದ ಬಹುಬೇಗ ಕಫ ಗಂಟಲು ಕಟ್ಟಿರುವುದನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಮನೆಮದ್ದು

ಮೊದಲಿಗೆ 1 ಚಿಕ್ಕ ಬಟ್ಟಲಿಗೆ 1 ಸ್ಪೂನ್ ಜೋನಿ ಬೆಲ್ಲ , ಕಾಲು ಚಮಚ ಅರಿಶಿಣ ,1 ಚಿಟಿಕೆ ಕಪ್ಪು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಈ ಮನೆಮದ್ದನ್ನು ದೊಡ್ಡವರು ತೆಗೆದುಕೊಳ್ಳುವುದಾದರೆ 1 ಚಮಚ ,ಚಿಕ್ಕಮಕ್ಕಳು ತೆಗೆದುಕೊಳ್ಳುವುದಾದರೆ ಅರ್ಧ ಚಮಚ ತೆಗೆದುಕೊಳ್ಳಬೇಕು ಇದು ಕಫ ಕರಗಲು ಸಹಾಯ ಮಾಡುತ್ತದೆ.ಇನ್ನೂ ಆದಷ್ಟು ಬಿಸಿ ನೀರನ್ನು ಕುಡಿಯಿರಿ ಇದರಿಂದ ಕಫ ಬೇಗನೆ ಕರಗುತ್ತದೆ.

ಇದರ ಜೊತೆಗೆ 1 ಲೋಟ ಹಾಲಿಗೆ ಅರ್ಧ ಚಮಚ ಅರಿಶಿಣ ಪುಡಿಯನ್ನು ಹಾಕಿಕೊಂಡು ಕುಡಿಯುವುದರಿಂದ ಕಫ ಕರಗಲು ಇದು ಸಹಾಯ ಮಾಡುತ್ತದೆ.ಇನ್ನು ಮೇಲೆ ತಿಳಿಸಿರುವ ಮನೆಮದ್ದನ್ನು 3 ದಿನ ಮಾಡಿ ನಂತರ
ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮಾಡುವ ವಿಧಾನವನ್ನ ಈ ವಿಡಿಯೋದಲ್ಲಿ ನೋಡಿ

ಧನ್ಯವಾದಗಳು.

Leave a Reply

Your email address will not be published.