ಮಲವಿಸರ್ಜನೆ ಸರಾಗವಾಗಿ ಆಗಲು 1 ಗ್ಲಾಸ್ ಈ ಹೊಟ್ಟನ್ನು ದಿನ ನಿತ್ಯ ಸೇವಿಸಿ!

Health & Fitness

ಮಲಬದ್ಧತೆ ಎನ್ನುವುದು ಹೊಟ್ಟೆಯಲ್ಲಿ ಉಂಟಾಗುವ ಒಂದು ಅನಾರೋಗ್ಯದ ಸಮಸ್ಯೆ.ನಿತ್ಯದ ದಿನಚರಿಯಲ್ಲಿ ಮಲ ಮತ್ತು ಮೂತ್ರ ವಿಸರ್ಜನೆಗಳು ಸರಾಗವಾಗಿ ನಡೆದರೆ ವ್ಯಕ್ತಿಯ ಆರೋಗ್ಯವು ಸಾಕಷ್ಟು ಉತ್ತಮವಾಗಿರುತ್ತದೆ.ದೈಹಿಕ ಚಟುವಟಿಕೆ ಇಲ್ಲದಿರುವುದು , ಆಹಾರದಲ್ಲಿ ನಾರಿನಾಂಶದ ಕೊರತೆ , ನಿರ್ಜಲೀಕರಣ , ಅಸಮರ್ಪಕ ಪಚಯ ಕ್ರಿಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಈ ಸಮಸ್ಯೆಗೆ ಒಂದು ಸುಲಭ ಮನೆಮದ್ದನ್ನು ಸೇವಿಸುವುದರಿಂದ ಬೇಗನೆ ಪರಿಹಾರವನ್ನು ಕಂಡುಕೊಳ್ಳಬಹುದು.

  • ಇಸಬ್ ಗೋಲ್

ಇಸಬ್ಗೋಲ್ ಕಿರಾಣಿ ಅಂಗಡಿ ಮತ್ತು ದಿನಸಿ ಅಂಗಡಿಗಳಲ್ಲಿ ದೊರೆಯುತ್ತದೆ
ಹಾಗೂ ಇದು ಸ್ವಲ್ಪ ದುಬಾರಿಯಾದರೂ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿ.

  • ಇಸಬ್ ಗೋಲನ್ನು ಅರ್ಧದಿಂದ 1ಕೆಜಿಯಷ್ಟು ತಂದಿಟ್ಟುಕೊಂಡು.

ಸಂಜೆ 7 ಗಂಟೆಗೆ ನೀರಿನಲ್ಲಿ ನೆನೆಸಿ ರಾತ್ರಿ ಮಲಗುವ ಸಮಯದಲ್ಲಿ 9 ಗಂಟೆ ಗೆ 1 ಚಮಚೆ ತೆಗೆದುಕೊಂಡು ಸೇವಿಸಬೇಕು ಅಥವಾ 1 ಲೋಟದಲ್ಲಿ ಮಿಕ್ಸ್ ಮಾಡಿಕೊಂಡು ಕುಡಿಯಬೇಕು.

ಇದರಿಂದ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ ಹಾಗೂ ದೇಹವು ತಂಪಾಗಿರುತ್ತದೆ.ಇದರಲ್ಲಿರುವ ನಾರಿನಾಂಶ ಕೊಬ್ಬನ್ನು ಕಡಿಮೆ ಮಾಡುತ್ತದೆ.ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚು ಮಾಡುತ್ತದೆ.ಕರುಳಿನ ಆರೋಗ್ಯವನ್ನು ವೃದ್ದಿಸುತ್ತದೆ.ಮಿದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.ಸೆರೋಟಿನಿನ್ ಹಾರ್ಮೋನ್ ಬಿಡುಗಡೆಯಾಗಲು ಸಹಾಯ ಮಾಡುತ್ತದೆ.

ಇಸಬ್ ಗೋಲ್ ಬೇಸಿಗೆ ಸಮಯದಲ್ಲಿ ಹೆಚ್ಚು ಹೆಚ್ಚಾಗಿ ಬಳಸುವುದರಿಂದ ದೇಹಕ್ಕೆ ತಂಪನ್ನು ನೀಡುತ್ತದೆ.

ಧನ್ಯವಾದಗಳು.

Leave a Reply

Your email address will not be published.