ಧನಿಯಾ
ಕೊತ್ತಂಬರಿ ಬೀಜವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಬಳಸಲಾಗುತ್ತದೆ.
ಕೊತ್ತಂಬರಿ ಬೀಜಗಳು ಅಡುಗೆಗೆ ವಿಶೇಷವಾದ ಸುವಾಸನೆ ಹಾಗೂ ರುಚಿ ಯನ್ನು ಒದಗಿಸುತ್ತದೆ.
ಇಷ್ಟೇ ಅಲ್ಲದೆ ಧನಿಯ ಔಷಧೀಯ ಗುಣಗಳಿಂದ ಕೂಡಿದೆ.
ಇನ್ನು ಆಯುಷ್ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಕೋವಿಡ್-19 ಮಾರ್ಗಸೂಚಿಯ ಪ್ರಕಾರ ಧನಿಯಾ ಅಥವಾ ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.ಕೊತ್ತುಂಬರಿ ಬೀಜದಲ್ಲಿ ಹಲವಾರು ಔಷಧೀಯ ಗುಣಗಳಿದ್ದು ವಿಟಮಿನ್ ಸಿ , ವಿಟಮಿನ್ ಎ ಮತ್ತು ವಿಟಮಿನ್ ಕೆ ನಂತಹ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದೆ.
ಇದು ನಮಗೆಲ್ಲ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಬಹುಮುಖ್ಯವಾಗಿ ಬೇಕಾಗುವ ಪೋಷಕಾಂಶಗಳುಹಾಗಾಗಿ ಇಂದಿನ ನಮ್ಮ ಲೇಖನದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಧನಿಯಾವನ್ನು ಹೇಗೆ ಬಳಸಬೇಕು ?ಇದರಿಂದ ದೊರೆಯುವ ಆರೋಗ್ಯ ಲಾಭಗಳೇನು ?ಎಂದು ತಿಳಿಯೋಣ ಬನ್ನಿ.
ಆರೋಗ್ಯವನ್ನು ಕಾಪಾಡಿಕೊಳ್ಳಲು ಧನಿಯ ನೀರನ್ನು ಕುಡಿಯುವುದು ಒಳ್ಳೆಯದು.ಮೊದಲಿಗೆ ಧನಿಯಾ ನೀರು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ.ಒಂದು ಪಾತ್ರೆಗೆ 2ಗ್ಲಾಸ್ ನೀರನ್ನು ಹಾಕಿ ನಂತರ 1 ಚಮಚ ಧನಿಯಾ ಬೀಜವನ್ನು ಹಾಕಿ 5 ನಿಮಿಷ ಕುದಿಸಿ ,ಅದು ಕುದಿ ಬಂದೊಡನೆ ಮತ್ತೆ ಗ್ಯಾಸನ್ನು ಸಣ್ಣ ಉರಿಯಲ್ಲಿಟ್ಟು 2 ನಿಮಿಷ ಮತ್ತೆ ಕುದಿಸಿ ಗ್ಯಾಸ್ ಅನ್ನು ಆಫ್ ಮಾಡಿ ನಂತರ ಅದನ್ನು ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ. ಸೋಸಿ ಉಗುರು ಬೆಚ್ಚಗಿರುವಾಗಲೇ ಕುಡಿಯಿರಿ.
ಇದನ್ನು ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಉತ್ತಮ ಆರೋಗ್ಯ ಲಾಭ ನಿಮ್ಮದಾಗುತ್ತದೆ.ದೇಹದ ಉಷ್ಣತೆ ಕಡಿಮೆಯಾಗುತ್ತದೆ ಬೇಸಿಗೆ ಬಂತೆಂದರೆ ಸಾಕು ದೇಹದ ಉಷ್ಣತೆ ಹೆಚ್ಚಾಗುವುದು ಸಾಮಾನ್ಯ ಹಾಗೂ ಅತಿಯಾದ ಮಸಾಲೆಯುಕ್ತ ಆಹಾರಗಳನ್ನು ತಿಂದು ನಮ್ಮ ಹೊಟ್ಟೆಯಲ್ಲಿ ಉರಿ ಅನುಭವವಾಗುತ್ತಿರುತ್ತದೆ.
ಇಂತಹ ಸಮಯದಲ್ಲಿ ದಿನದಲ್ಲಿ 3 ಬಾರಿ ಈ ನೀರಿನ ಸೇವನೆ ಮಾಡಿದರೆ ಹೊಟ್ಟೆ ಉರಿ ಸಮಸ್ಯೆ ದೂರವಾಗುತ್ತದೆ ಅಷ್ಟೇ ಅಲ್ಲದೆ ದೇಹದ ಅಧಿಕ ಉಷ್ಣತೆ ಸಮಸ್ಯೆ ಕೂಡ ದೂರವಾಗುತ್ತದೆ.ತೂಕ ನಷ್ಟಕ್ಕೆ ಸಹಾಯಕಾರಿ ಆರೋಗ್ಯಕರವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಧನಿಯಾ ನೀರು ತುಂಬಾ ಸಹಾಯಕಾರಿಏಕೆಂದರೆ ಧನಿಯಾ ಜೀರ್ಣಕಾರಿ ಗುಣವನ್ನು ಹೊಂದಿದೆ.ಜೀರ್ಣಾಂಗ ವ್ಯವಸ್ಥೆಯ ಕಾರ್ಯ ವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಬೇಗನೆ ತೂಕ ವನ್ನು ಇಳಿಸಿಕೊಳ್ಳಲು ಉತ್ತಮ ಆಯ್ಕೆ ಎಂದೇ ಹೇಳಬಹುದು.
ಮೂತ್ರಪಿಂಡದ ಸಮಸ್ಯೆಗೆ ಉತ್ತಮ
ನೀವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ನಿಮ್ಮ ಮೂತ್ರಪಿಂಡಗಳು ದುರ್ಬಲವಾಗಿದ್ದರೆ
ಪ್ರತಿದಿನ ಧನಿಯಾ ನೀರನ್ನು ಕುಡಿಯಲು ಪ್ರಾರಂಭಿಸಿ ಏಕೆಂದರೆ ಇದು ದೇಹದಲ್ಲಿ ನೀರಿನ ಧಾರಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ರೀತಿಯ ಜೀವಾಣು ಮತ್ತು ಸೂಕ್ಷ್ಮಾಣು ಜೀವಿಗಳನ್ನು ಹೊರ ಹಾಕಲು ಅನುವು ಮಾಡಿಕೊಡುತ್ತದೆ.
ಸಂಧಿವಾತದ ನೋವನ್ನು ನಿವಾರಿಸುತ್ತದೆ
ಇಂಡಿಯನ್ ಜೆನೆರಲ್ ಆಫ್ ಮೆಡಿಕಲ್ ರಿಸರ್ಚ್ ಅವರ ಪ್ರಕಾರ ಧನಿಯಾ ನೀರು ಜಾಯಿಂಟ್ ಸ್ವೆಲ್ಲಿಂಗ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಮತ್ತುಈ ಬೀಜಗಳಲ್ಲಿ ಲಿನೊನಿಕ್ ಆಮ್ಲ ಮತ್ತು ಸಿನಾಲ್ ನಂತಹ ಸಂಯುಕ್ತ ವಿದೆ. ಇದು ಜಾಯಿಂಟ್ ಸ್ಪೆಲ್ಲಿಂಗ್ ನೋವಿಗೆ ಮತ್ತು ಊತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಅನಿಮಿಯಾ ಕಾಯಿಲೆಗೆ ಉತ್ತಮ
ನಮಗೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ಅನಿಮಿಯಾ ಕಾಯಿಲೆ ಕಾಡುತ್ತದೆ.ಇದಕ್ಕೆ ಪರಿಹಾರವೆಂಬಂತೆ ಕೊತ್ತಂಬರಿ ಕಾಳನ್ನು ಬೇಯಿಸಿದ ನೀರು ಬಹಳ ಚೆನ್ನಾಗಿ ಕೆಲಸಕ್ಕೆ ಬರುತ್ತದೆ.ಕೊತ್ತಂಬರಿ ಬೀಜವನ್ನು ಕುದಿಸಿದ ನೀರು ಕುಡಿಯುವುದರಿಂದ ದೇಹದಲ್ಲಿ ನಿಶ್ಶಕ್ತಿ ದೂರವಾಗುತ್ತದೆ. ಕಬ್ಬಿಣದ ಅಂಶ ಹೆಚ್ಚಾಗಿ ಅನಿಮಿಯಾ ಸಮಸ್ಯೆಯನ್ನು ದೂರವಾಗಿಸುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇನ್ನು ಧನಿಯಾ ಕಾಳುಗಳಲ್ಲಿ ವಿಟಮಿನ್ ಸಿ ಇರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಪದೇ ಪದೇ ಅನಾರೋಗ್ಯ ಸಮಸ್ಯೆಗೆ ಈಡಾಗುವುದನ್ನು ತಪ್ಪಿಸುತ್ತದೆ.
ಇನ್ನು ಇದರಲ್ಲಿ ವಿಟಮಿನ್ ಕೆ ಇದೆ ಇದು ಕಣ್ಣಿನ ಆರೋಗ್ಯಕ್ಕೂ ಉತ್ತಮ. ಅಷ್ಟೇ ಅಲ್ಲದೆ ಕೊತ್ತಂಬರಿ ಬೀಜವು ಚರ್ಮದ ಕಾಂತಿಯನ್ನು ಕೂಡ ವೃದ್ಧಿಸುತ್ತದೆ.ಇನ್ನೂ ಹಲವಾರು ಲಾಭಗಳೇ ಇದರಿಂದ ನಮ್ಮ ದೇಹಕ್ಕೆ ದೊರೆಯುತ್ತದೆ.ಇನ್ನೂ ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಉತ್ತಮ.
ನಿಮಗೆ ಸಾಧ್ಯವಿಲ್ಲವೆಂದರೆ ದಿನದಲ್ಲಿ ಯಾವಾಗ ಬೇಕಾದರೂ ಬಿಸಿಯಾಗಿ ಈ ನೀರನ್ನು ಕುಡಿದರೆ ಉತ್ತಮ ಆರೋಗ್ಯ ಲಾಭ ನಿಮಗೆ ದೊರೆಯುತ್ತದೆ.
ಧನ್ಯವಾದಗಳು.