ಕೊ ರೊ ನಾ 2.0:ಆರೋಗ್ಯಕರ ಆಹಾರ ಪದ್ಧತಿ ಹೇಗಿರಬೇಕು!

0
6055

ಈಗ ಎಲ್ಲೆಡೆ ಕೊ ರೋ ನಾ ಇರುವುದರಿಂದ ನಮ್ಮ ಆಹಾರ ಕ್ರಮ ವನ್ನು ನಾವು ಚೆನ್ನಾಗಿಟ್ಟುಕೊಳ್ಳಬೇಕು.
ಬಾಯಿ ರುಚಿಗಾಗಿ ರೊಟ್ಟಿ , ಚಪಾತಿ , ಮಾಂಸ , ಬೇಕರಿ ತಿಂಡಿ ತಿನಿಸು ಇತ್ಯಾದಿಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ತಡವಾಗುತ್ತದೆ ಹಾಗೂ ಇದರಿಂದ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಆದಷ್ಟು ಜೀರ್ಣಕ್ರಿಯೆಗೆ ಸಹಕರಿಸುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.

ಉದಾಹರಣೆಗೆ ಅನ್ನಗಂಜಿ , ಅರಿಶಿನದ ರಸಂ ,ಶುಂಠಿ ರಸಂ ,ಮೆಣಸಿನ ರಸಂ ಇತ್ಯಾದಿ ಸಾಂಬಾರ ಪದಾರ್ಥಗಳನ್ನು ಬಳಸಿ ರಸಂ ನ್ನು ತಯಾರಿಸಿ ಸೇವಿಸಬೇಕು ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಇವು ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ.

ಇನ್ನು ಬಹಳ ಬೇಗ ರೋಗ ನಿವಾರಣೆಯಾಗಬೇಕು ಎನ್ನುವ ಕಾರಣದಿಂದ ಅತಿಯಾಗಿ ಅಥವಾ ಅತಿ ಹೆಚ್ಚಾಗಿ ಮಸಾಲೆ ಸಾಂಬಾರ ಪದಾರ್ಥಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇವಿಸಬಾರದು ಇದರಿಂದ ಲಾಭಕ್ಕಿಂತ ನಮ್ಮ ದೇಹಕ್ಕೆ ಹಾನಿಯೇ ಹೆಚ್ಚು.ಇನ್ನೂ ಜೀರ್ಣಕ್ರಿಯೆಗೆ ಸಹಕಾರಿ ಯಾಗುವಂತಹ ಲಘು ಆಹಾರಗಳನ್ನು ಸೇವಿಸಬೇಕು.

ಇನ್ನೂ ಅದರ ಜೊತೆಗೆ ಕೆಲವು ಆಯುರ್ವೇದ ಔಷಧಗಳನ್ನು ಸೇವಿಸಬೇಕು ಅಂದರೆ ಯಾವ ಹಣ್ಣು , ತರಕಾರಿ,ಗಿಡಮೂಲಿಕೆಗಳಲ್ಲಿ ವೈರಾಣು ನಿರೋಧಕ ಶಕ್ತಿ ಇರುತ್ತದೆಯೋ ಅಂಥವುಗಳನ್ನು ಜ್ಯೂಸ್ ಮಾಡಿಕೊಂಡು ಕಷಾಯ ಮಾಡಿಕೊಂಡು ಇತ್ಯಾದಿಗಳ ರೂಪದಲ್ಲಿ ಸೇವಿಸಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಬೇಗ ಗುಣಮುಖರಾಗಲು ಸಹಾಯವಾಗುತ್ತದೆ ಹಾಗೂ ಇದರಿಂದ ಕರೋನಾ ಎರಡನೆ ಅಲೆಯನ್ನು ನಮ್ಮ ದೇಹದ ಒಳಗೆ ಹೋಗದಂತೆ ತಡೆಯಬಹುದಾಗಿದೆ ಹಾಗೂ ರೋಗ ಬಂದರೂ ಅದರಿಂದ ಗುಣಮುಖರಾಗುವ ಶಕ್ತಿ ನಮ್ಮ ದೇಹಕ್ಕೆ ಸಿಗುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here