2024 New Maruti Swift:ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್ಬ್ಯಾಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಸ್ವಿಫ್ಟ್ ಐದು ರೂಪಾಂತರಗಳಲ್ಲಿ ಲಭ್ಯವಿದೆ: LXi, VXi, VXi (O), ZXi ಮತ್ತು ZXi+. ಬೆಲೆ ರೂ 6.49 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ 9.64 ಲಕ್ಷದವರೆಗೆ (ಎಕ್ಸ್ ಶೋ ರೂಂ) ವರೆಗೆ ಇರುತ್ತದೆ. ಹೊಸ ಸ್ವಿಫ್ಟ್ ಅದರ ಹಿಂದಿನ ತಲೆಮಾರಿಗಿಂತ ಸುಮಾರು 25,000 ರೂಪಾಯಿ ದುಬಾರಿಯಾಗಿದೆ.
2024 New Maruti Swift
ವಿನ್ಯಾಸ, ಇಂಟೀರಿಯರ್ ಮತ್ತು ಇಂಜಿನ್ಗೆ ಸಂಬಂಧಿಸಿದಂತೆ, ಹೊಸ ಸ್ವಿಫ್ಟ್ ತನ್ನ ಪೂರ್ವವರ್ತಿಗೆ ಹೋಲಿಸಿದರೆ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಹೊಸ ಸ್ವಿಫ್ಟ್ ಸುಜುಕಿಯ ಹೊಸ 1.2-ಲೀಟರ್ Z-ಸರಣಿ ಪೆಟ್ರೋಲ್ ಎಂಜಿನ್ ಇದೆ,. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಮತ್ತು AMT ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ. ಇದು 82 ಎಚ್ಪಿ ಉತ್ಪಾದಿಸುತ್ತದೆ. ಮತ್ತು ಟಾರ್ಕ್ 112 Nm.ಇದೆ
ಹೊಸ ಸ್ವಿಫ್ಟ್ ಅತ್ಯುತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ, ಮ್ಯಾನ್ಯುವಲ್ ಆವೃತ್ತಿಯಲ್ಲಿ 24.8 km/h ಮತ್ತು AMT ಗೆ 25.72 km/h ವರೆಗೆ ಇರಲಿದೆ. ಕಂಪನಿಯ ಪ್ರಕಾರ, ಮೈಲೇಜ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ 10 ಪ್ರತಿಶತ ಮತ್ತು AMT ಯೊಂದಿಗೆ 14 ಪ್ರತಿಶತದಷ್ಟು ಹೆಚ್ಚಾಗಿದೆ. ಹೊಸ ಸ್ವಿಫ್ಟ್ ಗಾತ್ರ 3860 ಎಂಎಂ ಉದ್ದ, 1735 ಎಂಎಂ ಅಗಲ ಮತ್ತು 1520 ಎಂಎಂ ಎತ್ತರವಿದೆ.
ಹೊಸ ಸ್ವಿಫ್ಟ್ನ ಬಣ್ಣ ಆಯ್ಕೆಗಳು
ಹೊಸ ಸ್ವಿಫ್ಟ್ ಆರು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ – ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್. ಇದಲ್ಲದೆ, ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳು – ಸಿಜ್ಲಿಂಗ್ ರೆಡ್ + ಮಿಡ್ನೈಟ್ ಬ್ಲ್ಯಾಕ್ ರೂಫ್, ಲುಸ್ಟರ್ ಬ್ಲೂ + ಮಿಡ್ನೈಟ್ ಬ್ಲ್ಯಾಕ್ ರೂಫ್, ಪರ್ಲ್ ಆರ್ಕ್ಟಿಕ್ ವೈಟ್ + ಮಿಡ್ನೈಟ್ ಬ್ಲ್ಯಾಕ್ ರೂಫ್ ಸಹ ಲಭ್ಯವಿದೆ. ಕಂಪನಿಯು ಸುಮಾರು 10 ಸಾವಿರ ಬುಕ್ಕಿಂಗ್ಗಳನ್ನು ಪಡೆದುಕೊಂಡಿದೆ.
ಹೊಸ ಸ್ವಿಫ್ಟ್ ವೈಶಿಷ್ಟ್ಯಗಳು
ಟಾಪ್ ಮಾಡೆಲ್ ZXi+ ಡ್ರೈವರ್ ಫೋಕಸ್ಡ್ ಕಾಕ್ಪಿಟ್, ಡಿಜಿಟಲ್ ಎಸಿ ಕಂಟ್ರೋಲ್ ಪ್ಯಾನೆಲ್, 9 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಸುಜುಕಿ ಕನೆಕ್ಟ್, ವೈರ್ಲೆಸ್ ಫೋನ್ ಚಾರ್ಜರ್, ಅರ್ಕಾಮಿಸ್ ಸರೌಂಡ್ ಸೆನ್ಸ್ ಸೌಂಡ್ ಸಿಸ್ಟಮ್, ಟೈಪ್-ಎ ಮತ್ತು ಸಿ ಯುಎಸ್ಬಿ ಚಾರ್ಜಿಂಗ್ ಪೋರ್ಟ್ಗಳು, ಹಿಲ್ ಹೋಲ್ಡ್ ಮುಂತಾದ ಹಲವು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.
Read More
TVS iQube:ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ TVS