ಮೇ 26 ರಂದು ಭಯಂಕರವಾದ ಚಂದ್ರಗ್ರಹಣ!ಈ ರಾಶಿಯವರು ಗ್ರಹಣದ ಸಮಯದಲ್ಲಿ ತುಂಬಾ ಎಚ್ಚರದಿಂದ ಇರಬೇಕು ಇಲ್ಲವಾದರೆ ದುರಾದೃಷ್ಟ!

Featured-Article

ಭಾರತದ ಕೆಲವೆಡೆ ಗ್ರಹಣದ ಸೂತಕವು ಇಲ್ಲದಿದ್ದರೂ ಚಂದ್ರನಲ್ಲಾಗುವ ಬದಲಾವಣೆಯೂ ಈ 5 ರಾಶಿಗಳ ಮೇಲೆ ಪ್ರಭಾವ ಬೀರಲಿದೆ.ಇನ್ನು ಗ್ರಹಣದ ಸಮಯದಲ್ಲಿ ವಿಶೇಷವಾಗಿ 5 ರಾಶಿಯವರು ಬಹಳ ಜಾಗರೂಕತೆಯಿಂದ ಇರಬೇಕು.ಜ್ಯೋತಿಷ್ಯದ ದೃಷ್ಟಿಯಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿರುವ ವರ್ಷದ ಮೊದಲ ಚಂದ್ರ ಗ್ರಹಣವನ್ನು ಬಹಳ ಎಚ್ಚರಿಕೆಯಿಂದ ಆಚರಿಸಬೇಕು.

ಇನ್ನು ಈ ಬಾರಿಯ ವರ್ಷದ ಮೊದಲ ಚಂದ್ರಗ್ರಹಣ 26 ಮೇ 2021ರಂದು ನಡೆಯಲಿದೆ.ಭಾರತದ ಕೆಲವು ಭಾಗಗಳಲ್ಲಿ ಇದನ್ನು ಭಾಗಶಃ ಕಾಣಬಹುದು.ಇನ್ನು ಮೇ 26ರಂದು ಬಹಳ ವಿಶೇಷವಾದ ವೈಶಾಖ ಹುಣ್ಣಿಮೆ ಇದೆ ಹಾಗಾಗಿ ಈ ಗ್ರಹಣವನ್ನು ಬಹಳ ವಿಶೇಷ ಚಂದ್ರಗ್ರಹಣ ಎಂದು ಪರಿಗಣಿಸಲಾಗುತ್ತದೆ.

ಈ ಚಂದ್ರ ಗ್ರಹಣವನ್ನು ಬಹಳ ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ,ಪಶ್ಚಿಮ ಬಂಗಾಳದ ಕೆಲವು ಭಾಗಗಳುಳಲ್ಲಿ ಕಾಣಬಹುದಾಗಿದೆ ಆದ್ದರಿಂದ ಸೂತಕದ ಛಾಯೆ ಆ ಭಾಗಗಳಲ್ಲಿ ಕಂಡು ಬರಬಹುದು.ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಈ ಚಂದ್ರಗ್ರಹಣ ಕಾಣಿಸಿಕೊಳ್ಳುತ್ತಿದೆ.ಇನ್ನೂ ನಮಗೆ ಗ್ರಹಣದ ಸೂತಕ ವಿಲ್ಲದಿದ್ದರೂ ಚಂದ್ರನಲ್ಲಾಗುವ ಬದಲಾವಣೆಯಿಂದ ಈ 5 ರಾಶಿಗಳ ಮೇಲೆ ಬಹಳ ಘೋರ ಪ್ರಭಾವ ಬೀರುತ್ತಿದೆ.

ಇನ್ನು ಈ ಗ್ರಹಣದಿಂದ ಬಹಳ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ರಾಶಿಗಳು ಯಾವುವು ಎಂದರೆ

ಮೇಷ ರಾಶಿಯ ಮೇಲೆ ಚಂದ್ರ ಗ್ರಹಣದ ಪರಿಣಾಮ

ಮೇಷ ರಾಶಿಯ ಜನರ ಜೀವನದಲ್ಲಿ ಚಂದ್ರಗ್ರಹಣವು ಕೆಟ್ಟ ಪರಿಣಾಮವನ್ನು ಬೀರುತ್ತದೆ.ಇನ್ನು ಗ್ರಹಣದ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು.ಈ ಸಮಯದಲ್ಲಿ ಅಪಘಾತ ಸಂಭವಿಸುವವಿದೆ
ಹಾಗಾಗಿ ಗ್ರಹಣದ ಸಮಯದಲ್ಲಿ ಹೊರಗಡೆ ಹೋಗಬೇಡಿ.ಇನ್ನು ಗ್ರಹಣದ ಸಮಯದಲ್ಲಿ ದೇವರ ನಾಮಸ್ಮರಣೆ ಮಾಡಿ.ಇನ್ನು ಗ್ರಹಣದ ಸಮಯದಲ್ಲಿ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಹನುಮನ ರಕ್ಷಣೆ ನಿಮ್ಮ ಮೇಲೆ ಇರಲಿದೆ.

  • ಕಟಕ ರಾಶಿಯ ಮೇಲೆ ಚಂದ್ರ ಗ್ರಹಣದ ಪರಿಣಾಮ

ಚಂದ್ರಗ್ರಹಣವು ಈ ರಾಶಿಗಳ ಮೇಲೆ ದುಷ್ಪರಿಣಾಮ ಬೀರಬಹುದು.ಇದರ ಕೆಟ್ಟ ಪರಿಣಾಮಗಳಿಂದ ರಕ್ತ ಸಂಬಂಧಿತ ಕಾಯಿಲೆಗಳು ಹಾಗೂ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುತ್ತದೆ.ಗ್ರಹಣದ ದುಷ್ಪರಿಣಾಮವನ್ನು ನಿವಾರಣೆ ಮಾಡಿಕೊಳ್ಳಲು ಶಿವನ ಆರಾಧನೆಯನ್ನು ಮಾಡಿ.ಇನ್ನು ಈ ಸಮಯದಲ್ಲಿ ಶಿವನ ಪಂಚಾಕ್ಷರಿ ಮಂತ್ರವಾದ”ಓಂ ನಮಃ ಶಿವಾಯ”ವನ್ನು ಜಪಿಸಬೇಕು.

  • ಸಿಂಹ ರಾಶಿಯ ಮೇಲೆ ಚಂದ್ರ ಗ್ರಹಣದ ಪರಿಣಾಮ

ಚಂದ್ರ ಗ್ರಹಣದ ಪರಿಣಾಮದಿಂದ ತಪ್ಪಿಸಿಕೊಳ್ಳಲು ಹೆತ್ತವರ ಆರೋಗ್ಯದ ಕಡೆ ಗಮನ ಹರಿಸಿ.ಈ ಸಮಯದಲ್ಲಿ ಅನೇಕ ಜವಾಬ್ದಾರಿಗಳನ್ನು ನೀವು ನಿಭಾಯಿಸಬೇಕಾಗಬಹುದು ಹಾಗೂ ಅಡೆತಡೆ ಗಳನ್ನು ಎದುರಿಸಬೇಕಾಗಬಹುದು.ಯಾವುದೇ ರೀತಿಯ ಚರ್ಚೆ ವಿವಾದಗಳಿಗೆ ತಲೆ ಕೊಡಬೇಡಿ.ಈ ಸಮಯದಲ್ಲಿ ಇಷ್ಟ ದೇವರ ಮಂತ್ರವನ್ನು ಜಪಿಸಿ.

  • ತುಲಾ ರಾಶಿಯ ಮೇಲೆ ಚಂದ್ರ ಗ್ರಹಣದ ಪರಿಣಾಮ

ಶುಕ್ರನ ಒಡೆತನದ ರಾಶಿಚಕ್ರವಾಗಿರುವ ತುಲಾ ರಾಶಿಗೆ ಚಂದ್ರನು ಅನಾನುಕೂಲದ ಪರಿಣಾಮಗಳನ್ನು ಬೀರಬಹುದು ಹಾಗೂ ಇದರಿಂದ ಕೋಪ ಹೆಚ್ಚಾಗಬಹುದು ಹಾಗೂ ನಿಮ್ಮ ಮಾತಿನಿಂದ ಸಂಬಂಧಗಳು ಹದಗೆಡಬಹುದು.ಇನ್ನು ಈ ಸಮಯದಲ್ಲಿ ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಬಹಳ ಪ್ರಯೋಜನಕಾರಿ ಇಲ್ಲದಿದ್ದರೆ ಇದರಿಂದ ನೀವು ತೊಂದರೆಗೆ ಸಿಲುಕಬಹುದು.ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು ಹಾಗಾಗಿ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಿ.

  • ಕುಂಭ ರಾಶಿಯ ಮೇಲೆ ಚಂದ್ರಗ್ರಹಣದ ಪರಿಣಾಮ

ಈ ರಾಶಿಯ ಮೇಲೆ ಚಂದ್ರ ಗ್ರಹಣ ತುಂಬಾ ಕೆಟ್ಟ ಪ್ರಭಾವ ಬೀರುತ್ತದೆ.ಈ ಸಮಯದಲ್ಲಿ ನಿಮ್ಮ ಹೆಸರು ಕೆಡಬಹುದು ಮತ್ತು ದೌರ್ಜನ್ಯಗಳನ್ನು ಎದುರಿಸಬಹುದು.ಕೆಲವು ಕಾರಣಗಳಿಂದ ಆತಂಕ ಸೃಷ್ಟಿಯಾಗುತ್ತದೆ.
ನಿಮ್ಮ ತಾಯಿಯ ಆರೋಗ್ಯದ ಮೇಲೆ ಗಮನಹರಿಸಿ.ತಪ್ಪು ತಿಳುವಳಿಕೆಯಿಂದ ನಿಮ್ಮ ಸ್ವಂತ ದವರ ಮೇಲೆ ಅನುಮಾನ ಗಳು ಕಾಡಬಹುದು.ಇನ್ನು ಈ ಸಮಯದಲ್ಲಿ ತೊಂದರೆ ಗಳನ್ನು ನಿವಾರಿಸಲು ಶನಿ ದೇವರನ್ನು ಪ್ರಾರ್ಥನೆ ಮಾಡಿ.

ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಚಂದ್ರ ಗ್ರಹಣದ ಸಮಯದಲ್ಲಿ ಎಚ್ಚರಿಕೆಯಿಂದ ಇರಿ.

ಧನ್ಯವಾದಗಳು.

Leave a Reply

Your email address will not be published.