ದೇಹ ತಂಪಾಗಿಡಲು ಈ ಜ್ಯೂಸ್ ಕುಡಿಯಿರಿ!ಕುಡಿದರೆ ದೇಹದಲ್ಲಿ ಎಂತಹದ್ದೇ ಉಷ್ಣ ವಿರಲಿ ತಂಪಾಗಲು 2 ನಿಮಿಷ ಸಾಕು!

0
485

ಸಾಮಾನ್ಯವಾಗಿ ನಮ್ಮ ದೇಹ ಪ್ರಕೃತಿಯು ಉಷ್ಣ ಮತ್ತು ಶೀತದಿಂದ ಕೂಡಿರುತ್ತದೆ. ಕೆಲವರ ದೇಹ ಅತಿ ಉಷ್ಣ ಪ್ರಕೃತಿ ಹೊಂದಿದ್ದರೆ , ಇನ್ನೂ ಕೆಲವರ ದೇಹ ಅತಿ ಶೀತ ಪ್ರಕೃತಿ ಹೊಂದಿರುತ್ತದೆ.ಇನ್ನು ಅತಿ ಉಷ್ಣ ದೇಹ ಪ್ರಕೃತಿ ಇರುವವರು ದೇಹವನ್ನು ನೈಸರ್ಗಿಕವಾಗಿ ಹೇಗೆ ತಂಪು ಮಾಡಿಕೊಳ್ಳಬಹುದು ಹಾಗೂ ಅತಿ ಉಷ್ಣ ಆಗಲು ಕಾರಣ ಮತ್ತು ಉಷ್ಣ ಆಗಿದೆಯಾ ಇಲ್ಲವಾ ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..

ಅತಿ ಉಷ್ಣತೆ ಕಾಡಲು ಮುಖ್ಯ ಕಾರಣ ಗಳು

  • ಹುಟ್ಟುವಾಗಲೇ ದೇಹದ ಪ್ರಕೃತಿ ಉಷ್ಣದಿಂದ ಕೂಡಿದ್ದರೆ ದೇಹವು ಉಷ್ಣ ಪ್ರವೃತ್ತಿ ಆಗುತ್ತದೆ.
  • ನಮ್ಮ ದಿನನಿತ್ಯದ ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಯ ಮೇಲೆ ನಮ್ಮ ದೇಹ ಪ್ರಕೃತಿ ಅವಲಂಬಿತವಾಗಿರುತ್ತದೆ.
  • ರಾತ್ರಿ ಪೂರ್ತಿ ನಿದ್ದೆ ಮಾಡದಿರುವುದು ,ಬಿಸಿಲಲ್ಲಿ ಕೆಲಸ ಮಾಡುವುದು ,ಟೆಂಕ್ಷನ್ ಮಾಡಿಕೊಳ್ಳುವುದು ಮತ್ತುಅತಿಯಾಗಿ ಉಪ್ಪು ಹುಳಿ ಖಾರಗಳನ್ನು ತಿನ್ನುವುದರಿಂದ ಸಹ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ.

ಇನ್ನು ಉಷ್ಣ ಆಗಿದೆ ಎಂದು ತಿಳಿಯುವುದು ಹೇಗೆ?

  • ಮೂತ್ರ ವಿಸರ್ಜನೆ ಸಮಯದಲ್ಲಿ ಉರಿ ಕಾಣಿಸುವುದು.
  • ಹೊಟ್ಟೆಯಲ್ಲಿ ಉರಿ ,ಮೈ ಬಿಸಿಯಾಗಿ ಬೆವರುವುದು , ಬೆವರಿನ ವಾಸನೆ ಹೆಚ್ಚಾಗುವುದು, ಗಂಟಲು ಉರಿ, ಕಣ್ಣು ಉರಿ , ತಲೆನೋವು , ಮೈಗ್ರೇನ್ ತಲೆನೋವು , ಮೂಗಿನಲ್ಲಿ ರಕ್ತ ಸೋರುವುದು , ಮೂಗು ಉರಿ , ಕಿವಿ ಉರಿಯುವುದು ನಿಮಗೆ ಉಷ್ಣ ಆಗಿದೆ ಎಂಬುದರ ಲಕ್ಷಣಗಳು.

ದೇಹದ ಉಷ್ಣಾಂಶ ಕಡಿಮೆ ಮಾಡಿಕೊಳ್ಳಲು ನೈಸರ್ಗಿಕವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾದ ಪರಿಹಾರ :ಕೆಲವು ದೇಹಕ್ಕೆ ತಂಪು ನೀಡುವ ಆಹಾರಗಳನ್ನು ನಾವು ಸೇವಿಸುತ್ತಾ ಬಂದರೆ ನಮ್ಮ ದೇಹದ ಉಷ್ಣಾಂಶ ತಾನಾಗಿಯೇ ಕಡಿಮೆಯಾಗುತ್ತದೆ.ದೇಸಿ ಹಸುವಿನ ಹಾಲು ಬೆಣ್ಣೆ ತುಪ್ಪ ವನ್ನು ಹೆಚ್ಚಾಗಿ ಸೇವಿಸುವುದರಿಂದ ಸಹ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

ದೇಹವನ್ನು ತಂಪಾಗಿಸುವ ಪ್ರಕೃತಿಯುಳ್ಳ ಕೆಲವು ತರಕಾರಿ ಮತ್ತು ಸೊಪ್ಪುಗಳನ್ನು ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇವಿಸುವುದು. ಉದಾಹರಣೆಗೆ ಬೂದುಗುಂಬಳಕಾಯಿ ನಮ್ಮ ದೇಹವನ್ನು ತಂಪು ಮಾಡುವಲ್ಲಿ ಒಂದು ಉತ್ತಮ ಆಹಾರವಾಗಿದೆ.

ಗರಿಕೆ ಹುಲ್ಲು

ಬೆಂಗಳೂರಿನಲ್ಲಿ ಗರಿಕೆ ಹುಲ್ಲು ಎಲ್ಲಾ ಕಡೆ ದೊರೆಯುವುದಿಲ್ಲ ಹಾಗಾಗಿ ಹಳ್ಳಿಗಳ ಕಡೆಯಿಂದ ಗರಿಕೆ ಹುಲ್ಲನ್ನು ಒಣಗಿಸಿ ಅದನ್ನು ಪೌಡರ್ ರೀತಿಯಲ್ಲಿ ಮಾಡಿ ಬೆಂಗಳೂರಿನ ಜನಕ್ಕೆ ತಲುಪಿಸಬೇಕು.ಈ ರೀತಿ ಗರಿಕೆಹುಲ್ಲಿನ ಪೌಡರನ್ನು ಸುಮಾರು 6 ತಿಂಗಳವರೆಗೆ ಇಟ್ಟುಕೊಂಡು ಬಳಕೆ ಮಾಡಬಹುದಾಗಿದೆ.ಪ್ರತಿದಿನ 1 ಸ್ಪೂನ್ ಗರಿಕೆ ಹುಲ್ಲಿನ ಪುಡಿಯನ್ನು 1ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ನಮ್ಮ ದೇಹದ ಉಷ್ಣಾಂಶ ಕೇವಲ 1ನಿಮಿಷದಲ್ಲಿ ಕಡಿಮೆಯಾಗುತ್ತದೆ.

ಪ್ರತಿದಿನ ಬೆಳಿಗ್ಗೆ ಸಮಯದಲ್ಲಿ ಒಂದು ಗ್ಲಾಸ್ ಗರಿಕೆ ಹುಲ್ಲಿನ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.ಪ್ರತಿದಿನ ಅರ್ಧ ಸ್ಪೂನ್ ಶುದ್ಧವಾದ ಶ್ರೀಗಂಧವನ್ನು ಸೇವಿಸುವುದರಿಂದ ಸಹ ನಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು.

ನಮ್ಮ ಆಹಾರಾದಲ್ಲಿ ಬಸಳೆ ಸೊಪ್ಪು , ಸೋರೆಕಾಯಿ ಇತ್ಯಾದಿಗಳನ್ನು ಬಳಸಿಕೊಂಡು ಉಷ್ಣತೆಯನ್ನು ಕಡಿಮೆಮಾಡಿಕೊಳ್ಳಬಹುದು.ಪ್ರತಿದಿನ ಬ್ರಾಹ್ಮಿ ಅಥವಾ ಒಂದೆಲಗ ಸೊಪ್ಪಿನ ರಸವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಕೆಲವು ಹಣ್ಣುಗಳು ಅಂದರೆ

ಹುಳಿ ಇಲ್ಲದಿರುವ ಹಣ್ಣುಗಳು ಉದಾಹರಣೆಗೆ ಸೀತಾಫಲ , ಚಿಕ್ಕು ಹಣ್ಣು , ಹಣ್ಣಾಗಿರುವ ಪಪ್ಪಾಯ , ಒಣದ್ರಾಕ್ಷಿ ,ಕಪ್ಪಗಿನ ಖರ್ಜೂರ ಇತ್ಯಾದಿಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಸಹ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಅತಿ ಉಷ್ಣಾಂಶವಿರುವ ದೇಹದ ಪ್ರಕೃತಿಯುಳ್ಳವರು ಹೀಗೆ ಮಾಡಿ.

  • ಪ್ರತಿ ದಿನ ಗರಿಕೆ ಹುಲ್ಲಿನ ಜ್ಯೂಸ್ ಕುಡಿಯಿರಿ
  • ಲಾವಂಚ (ಗ್ರಂಧಿಗೆ ಅಂಗಡಿಗಳಲ್ಲಿ ದೊರೆಯುತ್ತದೆ)

ದೇಹದ ಉಷ್ಣತೆ ಹೆಚ್ಚಾಗಿ ಚರ್ಮದಲ್ಲಿ ಉರಿ ಕಾಣಿಸಿಕೊಂಡಿದ್ದರೆ ಲಾವಂಚದ ಕಷಾಯ ಮಾಡಿಕೊಂಡು ಕುಡಿಯಿರಿ ಜೊತೆಗೆ ಹಾಲು ಬಳ್ಳಿ ಬೇರು (ನನ್ನಾರಿ) ಯನ್ನು ಬೆರೆಸಿಕೊಂಡು ದಿನ ಪೂರ್ತಿ ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಚರ್ಮದಲ್ಲಿ ಉರಿ ಕಾಣಿಸಿಕೊಂಡಿದ್ದರೆ ಕಡಿಮೆಯಾಗುತ್ತದೆ.ಮೂತ್ರದಲ್ಲಿ ಉರಿ , ಗಂಟಲಿನಲ್ಲಿ ಉರಿ ಇದ್ದರೆ ಜೇಷ್ಠ ಮಧು ಒಳ್ಳೆಯದು.

ಅರ್ಧ ಚಮಚ ಜೇಷ್ಠಮಧುವನ್ನು ಹಾಲಿಗೆ ಹಾಕಿಕೊಂಡು ಬೆಳಿಗ್ಗೆ ಮತ್ತು ರಾತ್ರಿ ಊಟದ ಮುನ್ನ ಸೇವಿಸುವುದರಿಂದ ಮೂತ್ರದಲ್ಲಿ ಉರಿ , ಗಂಟಲಿನ ಉರಿ ಕಡಿಮೆಯಾಗುತ್ತದೆ.ಜೇಷ್ಠ ಮಧುವಿನ ಕಷಾಯ ಸಹ ಮಾಡಿಕೊಂಡು ಕುಡಿಯಬಹುದಾಗಿದೆ.ಅತಿಯಾದ ಉಷ್ಣದಿಂದ ದೇಹ ಹೊಂದಿರುವ ಗರ್ಭಿಣಿಯರು , ತಾಯಂದಿರು , ರಕ್ತಸ್ರಾವ ಆಗುವವರು ಮತ್ತು ಬಿಳಿ ಮುಟ್ಟಿನ ಸಮಸ್ಯೆ , ನಿಶ್ಯಕ್ತಿ ಇರುವವರು

ಶತಾವರಿ ಚೂರ್ಣವನ್ನು ಬೆಳಿಗ್ಗೆ ಮತ್ತು ರಾತ್ರಿ ಹಾಲಿಗೆ ಹಾಕಿಕೊಂಡು ಕುಡಿಯುವುದರಿಂದ ರಕ್ತ ಸ್ರಾವ ಕಡಿಮೆಯಾಗುತ್ತದೆ , ಬಿಳಿ ಮುಟ್ಟಿನ ಸಮಸ್ಯೆ ಕಡಿಮೆಯಾಗುವುದಲ್ಲದೆ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.ಇದರ ಜೊತೆಗೆ ಪುರುಷರಿಗೆ ವೀ ರ್ಯ ಕ್ಕೆ ಸಂಬಂಧ ಪಟ್ಟ ಸಮಸ್ಯೆಗೆ , ಲೈಂ ಗಿಕ ಶಕ್ತಿಯ ಕೊರತೆಗೆ , ಸಂ ಭೋಗ ದ ನಂತರ ಉಷ್ಣತೆ ಹೆಚ್ಚಾದಂತೆ ಆಗುವಿಕೆಗೆ , ಸಂ ಭೋ ಗ ನಡೆಸಿದ ಮರುದಿನ ನಿಶ್ಯಕ್ತಿ ಕಾಡುವ ಸಮಸ್ಯೆಗೆ ಕೂಡ ಶತಾವರಿ ಚೂರ್ಣ ಉತ್ತಮ ಪರಿಹಾರವನ್ನು ನೀಡಬಲ್ಲದು.

ಧನ್ಯವಾದಗಳು.

LEAVE A REPLY

Please enter your comment!
Please enter your name here