Latest Breaking News

ಇಡೀ ದೇಶದಲ್ಲೇ ರಾಜ್ಯಕ್ಕೆ 2ನೇ ಸ್ಥಾನ: ಇದಕ್ಕೆ ಸ್ಪೂರ್ತಿಯೇ ಪುನೀತ್, ಸಂಚಾರಿ ವಿಜಯ್ ಅನ್ನೋದು ಸತ್ಯ

0 2,910

Get real time updates directly on you device, subscribe now.

2nd position for the state in the entire country: Puneeth, Sanchari Vijay are the inspiration for this ವ್ಯಕ್ತಿಯೊಬ್ಬರ ನಿಧನದ ನಂತರ ಅವರ ಅಂಗಾಂಗ ದಾನ ಮಾಡುವ ಮೂಲಕ ಬೇರೆಯವರ ಜೀವನಕ್ಕೆ ಒಂದು ಹೊಸ ಬೆಳಕನ್ನು ನೀಡಬಹುದು ಎನ್ನುವ ವಿಚಾರಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹತ್ವ ಸಿಕ್ಕಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ
ಅಂಗಾಂಗಗಳನ್ನು ದಾನ (Organ Donation) ಮಾಡುವ ಮೂಲಕ, ಅಗಲಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (Sanchari Vijay) ಅನಂತರ ನೇತ್ರ ದಾನ ಮಾಡುವ ಮೂಲಕ ಕನ್ನಡಿಗರ ಮನಗೆದ್ದ ನಟ ಪುನೀತ್ ರಾಜ್ ಕುಮಾರ್ (Puneeth Raj Kumar) ಅಸಂಖ್ಯಾತ ಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ.

ಈ ಇಬ್ಬರು ಕಲಾವಿದರಿಂದ ಆದಂತಹ ಒಂದು ಮಾದರಿ ಕಾರ್ಯದಿಂದ ಸ್ಪೂರ್ತಿ ಪಡೆದ ಬಹಳಷ್ಟು ಜನರು ತಾವು ಸಹಾ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಹಲವರು ದಾನವನ್ನೂ ಮಾಡಿ ಮಾದರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅಂಗಾಂಗ ದಾನ ಮಾಡಿದವರ ಸಂಖ್ಯೆಯನ್ನು ಆಧರಿಸಿ ನೋಡಿದಾಗ ಇಡೀ ದೇಶದಲ್ಲೇ ನಮ್ಮ ರಾಜ್ಯ ಕರ್ನಾಟಕ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂಗಾಂಗ ದಾನದ ಮಾಡುವ ರಾಜ್ಯಗಳ ಸ್ಥಾನದ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಕರ್ನಾಟಕದಲ್ಲಿ (Karnataka) 2022 ರಲ್ಲಿ 151 ಮಂದಿ ಅಂಗಾಂಗ ದಾನವನ್ನು ಮಾಡಿದ್ದು, ಈ ಮೂಲಕ ರಾಜ್ಯವನ್ನು 2 ನೇ ಸ್ಥಾನಕ್ಕೆ ಏರಿಸಿದ್ದಾರೆ. ಅಂಗಾಂಗ ದಾನದಲ್ಲಿ ಕಿಡ್ನಿ, ಲಿವರ್, ಹಾರ್ಟ್ ಸೇರಿದಂತೆ 770 ಅಂಗಾಂಗಳ ದಾನವನ್ನು ಮಾಡಲಾಗಿದೆ ಎನ್ನಲಾಗಿದೆ. ತೆಲಂಗಾಣದಲ್ಲಿ ಒಟ್ಟು 194 ಮಂದಿ ಅಂಗಾಂಗ ದಾನ ಮಾಡಿದ್ದು, ಇನ್ನು ಮೂರನೇ ಸ್ಥಾನದಲ್ಲಿ ಸ್ಥಾನದಲ್ಲಿ ಗುಜರಾತ್ ಇದೆ. ಈ ಹಿಂದೆ ರಾಜ್ಯದಲ್ಲಿ ಅಂಗಾಂಗ ದಾನಕ್ಕೆ ಜನ ಆಸಕ್ತಿ ತೋರಿರಲಿಲ್ಲ. ಆದರೆ ಮೇರು ನಟರಿಬ್ಬರ ಅಂಗಾಂಗ ದಾನದ ನಂತರ ಅಸಂಖ್ಯಾತ ಮಂದಿ ಈ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ

Get real time updates directly on you device, subscribe now.

Leave a comment