ರೂಪಾಂತರ ವೈರಸ್ ಗೆ ಈ 3ಸೂತ್ರ ಮಾಡಿ ಸಾಕು!
ರೂಪಾಂತರ ಕೊರೋನಾವೈರಸ್ ಈಗ ಎಲ್ಲೆಡೆ ಹಬ್ಬಿರುವುದರಿಂದ ಅದನ್ನು ನಿಯಂತ್ರಿಸಲು ನಾವು ಈ 3 ಸೂತ್ರಗಳನ್ನು ಪಾಲಿಸಬೇಕು.
1 ) ನೀರಿನ ಮೌಲ್ಯವರ್ಧನೆ
2 ) ಹಾಲಿನ ಮೌಲ್ಯವರ್ಧನೆ
3 ) ಕಷಾಯ
1 ) ನೀರಿನ ಮೌಲ್ಯವರ್ಧನೆ
ಒಬ್ಬ ವ್ಯಕ್ತಿ 1 ಲೀಟರ್ ನೀರಿಗೆ 5 ರಿಂದ 6 ತುಳಸಿ ಎಲೆಗಳನ್ನು ಹಾಕಿಕೊಂಡು 2 ರಿಂದ 3 ನಿಮಿಷ ಕುದಿಸಿ ನಂತರ ಆ ನೀರನ್ನು ಕುಡಿಯಬೇಕು.ಇದು ನೀರಿನ ಮೌಲ್ಯವರ್ಧನೆ.
2 ) ಹಾಲಿನ ಮೌಲ್ಯವರ್ಧನೆ
1 ಲೋಟ ಹಾಲಿಗೆ ಶೀತ ಪ್ರಕೃತಿಯುಳ್ಳವರು ಅರ್ಧ ಚಮಚ , ಉಷ್ಣ ಪ್ರಕೃತಿ ಹೊಂದಿದವರು ಕಾಲು ಚಮಚ ಅರಿಷಿಣ ಪುಡಿಯನ್ನು ಹಾಕಿ 2 ನಿಮಿಷ ಕುದಿಸಿ ನಂತರ ಸೋಸಿಕೊಂಡು ಕುಡಿಯಬೇಕು.ಇದನ್ನು ಪ್ರತಿದಿನ ಸಂಜೆ ಕುಡಿದರೆ ಉತ್ತಮ.ಇದು ಹಾಲಿನ ಮೌಲ್ಯವರ್ಧನೆ.
3 ) ಕಷಾಯ
ನೆಲನೆಲ್ಲಿ ಅಥವಾ ಅಮೃತಬಳ್ಳಿ ಅಥವಾ ಭದ್ರಮುಷ್ಟಿ ಕಷಾಯ ಈ ಮೂರರಲ್ಲಿ ಯಾವುದಾದರೂ 1 ಪದಾರ್ಥವನ್ನು ಬಳಸಿ ಕಷಾಯ ಮಾಡಿಕೊಂಡು ಕುಡಿಯುವುದು ಅಥವಾ ಈ ಮೂರನ್ನು ಸಮಪ್ರಮಾಣದಲ್ಲಿ ಬಳಸಿಕೊಂಡು ಕಷಾಯ ಮಾಡಿಕೊಂಡು ಕುಡಿಯುವುದು.ಈ ಕಷಾಯವನ್ನು 10 ದಿನ ಕುಡಿದು ನಂತರ ಮುಂದಿನ 10 ದಿನ ಈ ಕಷಾಯವನ್ನು ಕುಡಿಯಬಾರದು.ನಿರಂತರವಾಗಿ ಈ ಕಷಾಯವನ್ನು ಕುಡಿಯುವುದರಿಂದ ದೇಹ ಉಷ್ಣ ಹೆಚ್ಚಾಗುತ್ತದೆ.
ಇನ್ನು ಈಗ ಕೊರೋನಾ ಎರಡನೆಯ ಅಲೆಯ ಜಾಸ್ತಿಯಾಗಿದೆ ಆದ್ದರಿಂದ ಈ ಮೇಲೆ ತಿಳಿಸಿರುವ 3 ಸೂತ್ರಗಳನ್ನು ತಪ್ಪದೆ ಪಾಲಿಸಿ.ಕೊರೊನಾ ಎರಡನೇ ಅಲೆಯೂ ನಿಯಂತ್ರಣಕ್ಕೆ ಬರುವ ತನಕ ಈ ಸೂತ್ರಗಳನ್ನು ತಪ್ಪದೇ ಪಾಲಿಸಿ.
ಧನ್ಯವಾದಗಳು.