ಈ 4 ತಿಂಗಳಲ್ಲಿ ಹುಟ್ಟಿದವರು ಅದೃಷ್ಟ ಶಾಲಿಗಳು ಇದು 100% ಸತ್ಯ!ನೀವು ಹುಟ್ಟಿದ ತಿಂಗಳು ನೋಡಿ?

Featured-Article

ಎಲ್ಲರಿಗೂ ನಮಸ್ಕಾರ, ಯಾವ ತಿಂಗಳಲ್ಲಿ ಹುಟ್ಟಿದವರು ಅದೃಷ್ಟ ಮತ್ತು ಅವರ ಜೀವನ ಹೇಗೆ ಇರುತ್ತದೆ ಅಂತ ತಿಳಿದುಕೊಳ್ಳೋಣ. ನೀವು ಹುಟ್ಟಿದ ತಿಂಗಳು ಕೂಡ ನಿಮ್ಮ ಗುಣಗಳನ್ನು ನಿಖರವಾಗಿ ಹೇಳುತ್ತದೆ. ಹಾಗಾದರೆ ಬನ್ನಿ ನೋಡೋಣ.

ಜನವರಿ : ಈ ತಿಂಗಳಲ್ಲಿ ಹುಟ್ಟಿದವರು ಸಹಜವಾಗಿ ಒಬ್ಬಂಟಿಯಾಗಿ ಇರಲು ಇಷ್ಟ ಪಡುತ್ತಾರೆ ಬೇರೆಯವರ ತಪ್ಪುಗಳಿಗೆ ಕಿವಿ ಕೊಡುವುದಿಲ್ಲ ತುಂಬಾ ಗಂಭೀರವಾಗಿ ಪರಿಗಣಿಸುತ್ತಾರೆ. ಇವರು ನಾಯಕತ್ವದ ಲಕ್ಷಣಗಳು ಜಾಸ್ತಿ ಇರುತ್ತದೆ. ಹಟ ಜೀವಿಗಳು ಆಗಿರುತ್ತಾರೆ. ಹಣಕಾಸಿನ ವಿಚಾರದಲ್ಲಿ ಬಹಳ ಜಾಗೃತಿಯಿಂದ ಇರುತ್ತಾರೆ.

ಫೆಬ್ರುವರಿ : ಈ ತಿಂಗಳಲ್ಲಿ ಹುಟ್ಟಿದವರು sentimental ಮತ್ತು ಆಕರ್ಷಿತ ವ್ಯಕ್ತಿಗಳು ಆಗಿರುತ್ತಾರೆ. ಎಲ್ಲರಿಗೂ ಜೊತೆ ಬೆರೆಯುಕ್ಕೆ ಹೆಚ್ಚು ಆಸಕ್ತಿ ಇರುತ್ತಾರೆ. ಜೀವನದಲ್ಲಿ ಕಷ್ಟ ಪಟ್ಟು ಎಲ್ಲಾ ಕೆಲಸಗಳು ಈಡೇರಿಸಿಕೊಳ್ಳುತ್ತಾರೆ. ತುಂಬಾ ಕನಸುಗಳನ್ನು ಕಾಣುತ್ತಾರೆ. ನಾಚಿಕೆ ಸ್ವಭಾವದವರು.

ಮಾರ್ಚ್: ಈ ತಿಂಗಳಲ್ಲಿ ಹುಟ್ಟಿದವರು ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ. ನಾಚಿಕೆ ಸ್ವಭಾವದವರು ಆಗಿರುತ್ತಾರೆ. ಇವರು ಕೆಲಸದಲ್ಲಿ ಆಸಕ್ತಿ ಹೊಂದಿರುತ್ತಾರೆ ಆಕರ್ಷಕ ವ್ಯಕ್ತಿತ್ವ ಪ್ರಾಮಾಣಿಕ ಹಾಗೂ ಸೂಕ್ಷ್ಮ ಸ್ವಭಾವದ ಇವರು ಬೇಗ ಕೋಪಗೊಳ್ಳುತ್ತಾರೆ.

ಏಪ್ರಿಲ್:ಇವರು ಮುಂಗೋಪಿಗಳು ಹೇಳಿದರೆ ತಪ್ಪಾಗಲಾರದು. ಒಳ್ಳೆಯ ಜೀವನ ನೆಡೆಸಲು ಪ್ರಯತ್ನ ಪಡುತ್ತಾರೆ. ಯಾವಾಗಲೂ ಇಲ್ಲದಿರುವ ಬಗ್ಗೆ ಯೋಚನೆ ಮಾಡುತ್ತಾರೆ. ಸ್ನೇಹಿತರ ಬಳಗ ಜಾಸ್ತಿ.

ಮೇ :ಈ ತಿಂಗಳಲ್ಲಿ ಹುಟ್ಟಿದವರು ನಟನೆ ಅಥವಾ ಸಂಗೀತದ ಬಗ್ಗೆ ಒಲವು ಜಾಸ್ತಿ ಇರುತ್ತದೆ. ತಮ್ಮ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಾರೆ. ತುಂಬಾ ಕಾಲ ಮಕ್ಕಳ ಜೊತೆ ಇರುವುದಕ್ಕೆ ಇಷ್ಟಪಡುತ್ತಾರೆ. ಈ ವರ್ಷ ಪರಿಸ್ಥಿತಿಗಳು ಕೆಟ್ಟದಾಗಿ ಇದ್ದರು ಕೂಡ ಉನ್ನತ ಮಟ್ಟಕ್ಕೆ ಏರುತ್ತಾರೆ.

ಜೂನ್ : ಈ ತಿಂಗಳಲ್ಲಿ ಹುಟ್ಟಿದವರು ಗಜ ಕೇಸರಿ ಯೋಗ ಪಡೆದುಕೊಂಡು ಹುಟ್ಟಿರುತ್ತಾರೆ. ಒಳ್ಳೆಯ ಆದಾಯವನ್ನು ಕಾಣುತ್ತಾರೆ. ಯಾರನ್ನೂ ಅಷ್ಟು ಸುಲಭವಾಗಿ ಇಷ್ಟ ಪಡುವುದಿಲ್ಲ. ಇಷ್ಟ ಪಟ್ಟರೆ ಎಂದಿಗೂ ಬಿಡುವುದಿಲ್ಲ.

ಜುಲೈ :ಈ ತಿಂಗಳಲ್ಲಿ ಹುಟ್ಟಿದವರು ತುಂಬಾ ಒಳ್ಳೆಯವರು ಹಾಗೂ ತಮ್ಮ ಸಂಬಂಧವನ್ನು ಚೆನ್ನಾಗಿ ಕಾಪಾಡಿಕೊಂಡು ಬರುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ. ಬುದ್ಧಿವಂತರು ಮೃದು ಸ್ವಭಾವದವರು.

ಆಗಸ್ಟ್ : ಈ ತಿಂಗಳಲ್ಲಿ ಹುಟ್ಟಿದವರು ಇವರು ತಾಳ್ಮೆಯನ್ನು ಕಳೆದುಕೊಂಡರೆ ಯಾರ ಮಾತು ಕೇಳುವುದಿಲ್ಲ. ಇದರಿಂದ ಸ್ವಲ್ಪ ಕಷ್ಟಗಳನ್ನು ಎದುರಿಸುತ್ತಾರೆ. ಶುಭ ಅಶುಭ ಮುಂಚೆ ತಿಳಿದು ಕೊಳ್ಳುವ ಶಕ್ತಿ ಹೊಂದಿದ್ದಾರೆ. ಸ್ನೇಹಿತರ ಬಳಗ ಜಾಸ್ತಿ.

ಸೆಪ್ಟೆಂಬರ್ :ಈ ತಿಂಗಳಲ್ಲಿ ಹುಟ್ಟಿದವರು ಹೆಚ್ಚು ತಿಳುವಳಿಕೆ ಹೊಂದಿರುತ್ತಾರೆ. ಯಾರ ಜೊತೆ ಜಗಳ ಮಾಡಿಕೊಂಡರು ಬೇಗ ರಾಜಿ ಆಗುತ್ತಾರೆ. ಒಳ್ಳೆಯ ಬುದ್ಧಿವಂತಿಕೆಯಿಂದ ವ್ಯಾಪಾರದಲ್ಲಿ ಒಳ್ಳೆಯ ಲಾಭ ಪಡೆಯುತ್ತಿರ.

ಅಕ್ಟೋಬರ್ :ಈ ತಿಂಗಳಲ್ಲಿ ಹುಟ್ಟಿದವರು ಇವರು ಅಂದುಕೊಂಡ ಎಲ್ಲಾ ಕೆಲಸಗಳನ್ನು ನೆರವೇರಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ದೊರೆಯುತ್ತದೆ. ಈ ತಿಂಗಳಿನಲ್ಲಿ ಹುಟ್ಟಿದವರು ತುಂಬಾ ಲಕ್ಕಿ ಅಂತಾನೇ ಹೇಳಬಹುದು. ಗುರಿ ತಲುಪುವುದರಲ್ಲಿ ಇವರು ಎತ್ತಿದ ಕೈ. ನಿಷ್ಠಾವಂತರು, ಸ್ನೇಹಿತರ ಬಳಗ ಜಾಸ್ತಿ.

ನವೆಂಬರ್ : ಈ ತಿಂಗಳಲ್ಲಿ ಹುಟ್ಟಿದವರು ಸುಂದರವಾಗಿ ಇರುತ್ತಾರೆ ಗಂಡನ್ನು ಹೆಚ್ಚು ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಕೆಲವು ಬಾರಿ ಒತ್ತಡಕ್ಕೆ ಒಳಗಾಗುತ್ತಾರೆ. ಪ್ರೀತಿಸುವ ಭಾವನಾತ್ಮಕ ವ್ಯಕ್ತಿ.

ಡಿಸೆಂಬರ್ : ಈ ತಿಂಗಳಲ್ಲಿ ಜನಿಸಿದವರು ಯಾವಾಗಲೂ ಯಾರಿಗಾದರೂ ಬೋಧನೆ ಮಾಡುತ್ತಾರೆ. ಇವರು ಅದೃಷ್ಟವಂತರು. ಆಸೆಗಳು ಕೋರಿಕೆಗಳು ತುಂಬಾ ನೇ ಜಾಸ್ತಿ. ಪ್ರಾಮಾಣಿಕ ಮತ್ತು ನಿಷ್ಠಾವಂತ ವ್ಯಕ್ತಿಯಾಗಿರುತ್ತಾರೆ. ಅಹಂಕಾರಿ ಸ್ವಭಾವದವರು

Leave a Reply

Your email address will not be published.