ಕೋ ವಿ ಡ್ ಬಂದಾಗ ಮಾಡಲೇಬೇಕಾದ 5 ಉಪಚಾರಗಳು!

Featured-Article Health & Fitness

ಕೊರೊನಾ ಎರಡನೆ ಅಲೆ ದೇಶಾದ್ಯಂತ ಅಬ್ಬರಿಸಿದೆ ಇದರಿಂದ ಕೆಮ್ಮು , ಶೀತ , ಜ್ವರ , ತಲೆನೋವು , ಮೈಕೈನೋವು ಇನ್ನಿತರ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಭಯ ಉಂಟಾಗುತ್ತದೆ ಆದ್ದರಿಂದ ಮೇಲೆ ತಿಳಿಸಿರುವ ಯಾವುದಾದರೂ ಸಣ್ಣ ಲಕ್ಷಣಗಳು ಕಂಡುಬಂದಲ್ಲಿ ಈ 5 ಉಪಚಾರಗಳನ್ನು ಮಾಡಿನೋಡಿ.ಕೊರೋನಾವೈರಸ್ ಪಾಸಿಟಿವ್ ಬಂದಿದೆಯೋ ಇಲ್ಲವೋ ಅದು ಮುಖ್ಯವಲ್ಲ ಆದರೆ ಮೇಲೆ ತಿಳಿಸಿದ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ.

1 ) ಅಷ್ಟಗುಣ ಮಂಡ

ಅಷ್ಟಗುಣ ಎಂದರೆ 8 ರೀತಿಯ ಪದಾರ್ಥಗಳು ಮಂಡ ಎಂದರೆ ಗಂಜಿ.ಯಾವುದೇ ರೀತಿಯ ಜ್ವರ ಬಂದರೂ ಒಟ್ಟಿನಲ್ಲಿ ಸರ್ವನಾಶ ಜ್ವರಕ್ಕೆ ಈ ಅಷ್ಟಗುಣ ಮಂಡ ಸಹಾಯಕಾರಿ.

ಒಬ್ಬ ಸಾಮಾನ್ಯ ವ್ಯಕ್ತಿ :

  • 8 ಗ್ರಾಂ ಕೆಂಪು ಅಕ್ಕಿ ( ಕುಚಲಕ್ಕಿ ) ,
  • 8ಗ್ರಾಂ ಉದ್ದಿನಬೇಳೆ ,
  • 2 ಚಿಟಿಕೆ ಶುಂಠಿ ,
  • 2 ಚಿಟಿಕೆ ಹಿಪ್ಪಲಿ ,
  • 2 ಚಿಟಿಕೆ ಕಾಳುಮೆಣಸು ,
  • 2 ಚಿಟಿಕೆ ಧನ್ಯಾ
  • 2 ಚಿಟಿಕೆ ಇಂಗು ಹಾಗೂ ರುಚಿಗೆ
  • ಸ್ವಲ್ಪ ಸೈಂಧವ ಲವಣ.

ಈ 8 ಪದಾರ್ಥಗಳನು ತೆಗೆದುಕೊಳ್ಳಿ.

ಮೊದಲಿಗೆ ತೆರೆದ ಪಾತ್ರೆಗೆ 8ಗ್ರಾಂ ಕೆಂಪಕ್ಕಿ ಮತ್ತು 8ಗ್ರಾಂ ಉದ್ದಿನ ಬೇಳೆಗೆ ಸುಮಾರು 225 ಎಂಎಲ್ ನೀರಿಗೆ ಹಾಕಿ ಮಧ್ಯಮ ಉರಿಯಲ್ಲಿ ಕುದಿಸಬೇಕು ಸ್ವಲ್ಪ ಸಮಯದ ಬಳಿಕ ಮೇಲೆ ತಿಳಿಸಿರುವ 2 ಚಿಟಿಕೆ ಶುಂಠಿ ,
2 ಚಿಟಿಕೆ ಹಿಪ್ಪಲಿ ,2 ಚಿಟಿಕೆ ಕಾಳುಮೆಣಸು ,2 ಚಿಟಿಕೆ ಧನ್ಯಾ 2 ಚಿಟಿಕೆ ಇಂಗು ಹಾಗೂ ರುಚಿಗೆ
ಸ್ವಲ್ಪ ಸೈಂಧವ ಲವಣ ಹಾಕಿ ಕುದಿಸಬೇಕು .ಅಕ್ಕಿ ಬೆಂದ ನಂತರ ನೀರಿನ ಭಾಗವನ್ನು(ತಿಳಿ ಗಂಜಿ) ಸೋಸಬೇಕು.ಆ ತಿಳಿ ಗಂಜಿಯನ್ನು ಸೇವಿಸಬೇಕು.

ಇದು ಎಲ್ಲಾ ರೀತಿಯ ಜ್ವರಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.ಜೀರ್ಣಾಂಗ ಕಾರ್ಯವನ್ನು ವೃದ್ಧಿ ಮಾಡುತ್ತದೆ.ಭೇದಿ ನಿವಾರಣೆಗೆ ಉತ್ತಮ.ತಲೆನೋವನ್ನು ಕಡಿಮೆ ಮಾಡುತ್ತದೆ.ಎಲ್ಲಾ ತರಹದ ಜ್ವರದ ಲಕ್ಷಣಗಳನ್ನು ಮತ್ತು ಕೊರೊನಾ ಲಕ್ಷಣಗಳನ್ನು ಇದು ಕಡಿಮೆ ಮಾಡುತ್ತದೆ.

ಪ್ರತಿದಿನ 2 ಬಾರಿ ಜ್ವರ ಇದ್ದವರು ಸೇವಿಸಬೇಕು.

2 ) ನ್ಯೂಷಾ

ಮುಖ್ಯವಾಗಿ ಹುರುಳಿಕಟ್ಟನ್ನು ಬಳಸಿ ಸಾರಿನ ರೀತಿ ಮಾಡಬೇಕು ಇದರಿಂದ ಯಾವುದೇ ರೀತಿಯ ಜ್ವರ ಕಡಿಮೆಯಾಗುತ್ತದೆ.ಹೆಸರುಕಾಳು ,ಹೆಸರು ಬೇಳೆ ,ಮೈಸೂರು ಬೇಳೆ ,ಚನ್ನಾ ದಾಲ್ಈ ಮೇಲೆ ತಿಳಿಸಿರುವುದರ ಎಲ್ಲದರ ಕಟ್ಟನ್ನು ಮಾಡಿ ಪ್ರತಿದಿನ ಒಂದನ್ನು ಮಾಡಿಕೊಂಡು ಸೇವಿಸುವುದರಿಂದ ಜ್ವರದ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಜ್ವರದ ಲಕ್ಷಣಗಳೆಲ್ಲವೂ ನಿವಾರಣೆಯಾಗುತ್ತದೆ.ಸೂಪ್ ರೀತಿಯಲ್ಲಿ ಮಾಡಿ ಸೇವಿಸಬಹುದು.ಮಧ್ಯಾಹ್ನ ಊಟಕ್ಕೆ ಮುನ್ನ ಮತ್ತು ರಾತ್ರಿ ಊಟದ ಮುನ್ನ ಸೇವಿಸಬೇಕು.

3 ) ಉಷ್ಣೋದಕ

ಬಿಸಿನೀರು ಸಾಮಾನ್ಯವಾಗಿ ಸ್ವಲ್ಪ ಬಿಸಿ ಮಾಡಿದ ನೀರನ್ನು ಬಿಸಿ ನೀರು ಎಂದು ನಾವೆಲ್ಲ ಕುಡಿಯುತ್ತೇವೆ ಆದರೆ ನೀರನ್ನು ಬಿಸಿ ಮಾಡುವ ಸರಿಯಾದ ವಿಧಾನವೆಂದರೆ 1 ಲೀಟರ್ ನೀರನ್ನು 1 ಪಾತ್ರೆಗೆ ಮದ್ಯದ ಉರಿಯಲ್ಲಿ ಇಟ್ಟು ಅದು ಅರ್ಧ ಆಗುವವರೆಗೆ ಕುದಿಸಿ ನಂತರ ಆ ನೀರನ್ನು ಕುಡಿಯಬೇಕು.ಈ ರೀತಿ ಅದನ್ನು ಕುದಿಸಿದರೆ ಮಾತ್ರ ಅದು ಉಷ್ಣೋದಕ ಆಗುತ್ತದೆ ಇದರಿಂದ ಮುಖ್ಯವಾಗಿ ವಾತ ಪಿತ್ತ ಕಫ ದೋಷ ನಿವಾರಣೆಯಾಗುತ್ತದೆ.ಸರ್ವ ಜ್ವರಕ್ಕೂ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.ಶೀತ , ಕೆಮ್ಮು , ನೆಗಡಿ ಕೊರೋನಾ ಎರಡನೇ ಅಲೆಯಾ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಜ್ವರ ಹೆಚ್ಚಿದ್ದವರು 1 ಲೀಟರ್ ನೀರನ್ನು ಕಾಲು ಲೋಟಕ್ಕಿಂತ ಕಡಿಮೆಯಾಗುವಷ್ಟು ಕುದಿಸಿ ಕುಡಿದರೆ ಅದು ರೋಗ ವನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತದೆ.

4 ) ನೆಲನೆಲ್ಲಿ ಅಥವಾ ಅಮೃತಬಳ್ಳಿ ಅಥವಾ ಭದ್ರಮುಷ್ಟಿ.

ಈ ಮೂರರಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಅಥವಾ ಮೂರನ್ನು ಸೇರಿಸಿ ಅದರ ಕಷಾಯವನ್ನು ಮಾಡಿಕೊಂಡು ಪ್ರತಿದಿನ 2 ಬಾರಿ ಸೇವಿಸಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಶ್ವಾಸಕೋಶ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ.

5 ) ನೀರಿನ ಆವಿಯನ್ನು ತೆಗೆದುಕೊಳ್ಳಿ

ಬಿಸಿನೀರಿಗೆ ತುಳಸಿ ಎಲೆ ಅಥವಾ ಅರಿಶಿನ ಅಥವಾ ನೀಲಗಿರಿ ಎಣ್ಣೆಯನ್ನು ಹಾಕಿ ಅದರ ಆವಿಯನ್ನು ತೆಗೆದುಕೊಳ್ಳುವುದರಿಂದ ಮುಖದ ಮೇಲಿನ ಭಾಗವನ್ನು ಬೆಚ್ಚಗಿಡುವಲ್ಲಿ ಇದು ಸಹಾಯ ಮಾಡುತ್ತದೆ ಹಾಗೂ ಮೂಗಿಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗಿದ್ದರೂ ಈ ಆವಿಯಿಂದ ಹೋಗಲಾಡಿಸಬಹದು.

ಈ ಮೇಲೆ ತಿಳಿಸಿರುವ 5 ಸೂತ್ರಗಳನ್ನು ಮುಖ್ಯವಾಗಿ ಜ್ವರ ಇದ್ದವರು ಪಾಲಿಸಲೇಬೇಕು.

ಧನ್ಯವಾದಗಳು.

Leave a Reply

Your email address will not be published.