ಊಟ ಮಾಡಿದ ನಂತರ ಈ 5 ತಪ್ಪುಗಳನ್ನು ಮಾಡಬೇಡಿ ಮಾಡಿದರೆ ದುರಾದೃಷ್ಟ ಎದುರಾಗುತ್ತದೆ ಎಚ್ಚರ!
ಊಟ ಮಾಡಿದ ನಂತರ ಈ ಕೆಲವು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನು ಮಾಡದಿದ್ದರೆ ಧನದ ಕೊರತೆಯಿದ್ದರೂ ಎರಡು ಹೊತ್ತು ಊತಕ್ಕೆ ಕೊರತೆ ಇರುವುದಿಲ್ಲ. ಆದ್ದರಿಂದ ಈ 5 ಕೆಲಸವನ್ನು ಊಟ ಮಾಡಿದ ನಂತರ ಮಾಡಬಾರದು.
1, ಊಟ ಮಾಡಿದ ತಟ್ಟೆಯಲ್ಲಿ ಕೈಯನ್ನು ತೊಳೆಯಬಾರದು. ಈ ರೀತಿ ಮಾಡಿದರೆ ದಾರಿದ್ರವನ್ನು ತಂದುಕೊಡುತ್ತದೆ. ಯಾಕೆಂದರೆ ಊಟ ಮಾಡಿದ ಮೇಲೆ ಕೈ ತೊಳೆಯುವ ಜಾಗಕ್ಕೆ ಹೋಗಿ ಕೈ ತೊಳೆದುಕೊಂಡರೆ ಒಳ್ಳೆಯದು.ಆದ್ದರಿಂದ ಊಟ ಮಾಡಿದ ತಟ್ಟೆಯಲ್ಲಿ ಕೈ ತೊಳೆಯಬಾರದು.
2,ಊಟ ಮಾಡಿ ಕೈ ತೊಳೆದು ಬಾಯಿಯ ಉಗುಳನ್ನು ಅದೇ ತಟ್ಟೆಯಲ್ಲಿ ಉಗುಳುವುದು. ಇದರಿಂದ ಇನ್ನಷ್ಟು ದಾರಿದ್ರ ಹೆಚ್ಚಾಗುತ್ತದೆ.
3, ಊಟ ಮಾಡಿದ ತಕ್ಷಣ ಕಡ್ಡಿ ತೆಗೆದುಕೊಂಡು ಬಾಯಿ ಸಂಧಿಯನ್ನು ಸ್ವಚ್ಛ ಮಾಡಬಾರದು. ಬೇಕಾದರೆ ಬಾಯಿ ಒಳಗೆ ನೀರು ಹಾಕಿ ಕೈ ತೊಳೆಯುವ ಜಾಗದಲ್ಲಿ ಮುಕ್ಕಳಿಸಿ.
4, ಊಟ ಮಾಡಿದ ತಟ್ಟೆಯಲ್ಲಿ ಕೈ ತೊಳೆದು ಪಕ್ಕದಲ್ಲಿಟ್ಟುಕೊಂಡು ಅಲ್ಲಿ ತಲೆ ದಿಂಬು ಇಟ್ಟುಕೊಂಡು ಮಲಗಬಾರದು.
5, ಕೈ ತೊಳೆದುಕೊಂಡ ನಂತರ ಕೈಯನ್ನು ಜಾಡಿಸಬಾರದು.ಬಟ್ಟೆ ತೆಗೆದುಕೊಂಡು ಶುಭ್ರವಾಗಿ ಕೈಯನ್ನು ವರೆಸಿಕೊಳ್ಳಿ.ಈ ರೀತಿಯ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.